ಹೊಸ ವರ್ಷ
ವಿಜ್ಞಾನ-ತಂತ್ರಜ್ಞಾನ
ಹೊಸ ವರ್ಷದಂದು ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿ 10 ಮಿಲಿಯನ್ ಲೈವ್!
ವಿಶ್ವಾದ್ಯಂತ ಬರೊಬ್ಬರಿ 10 ಮಿಲಿಯನ್ ಜನರು ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಲೈವ್ ಮೂಲಕ 2018 ಜ.1 ರಂದು ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವಾದ್ಯಂತ ಬರೊಬ್ಬರಿ 10 ಮಿಲಿಯನ್ ಜನರು ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಲೈವ್ ಮೂಲಕ 2018 ಜ.1 ರಂದು ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.
ಫೇಸ್ ಬುಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.47 ರಷ್ಟು ಹೆಚ್ಚು ಲೈವ್ ವಿಡಿಯೋ ಮೂಲಕ ಹೊಸ ವರ್ಷದ ಶುಭಾಶಯ ಸಂದೇಶವನ್ನು ಕೋರಲಾಗಿದೆ ಎಂದು ತಿಳಿಸಿದೆ. ಇದೇ ವೇಳೆ ವಾಟ್ಸ್ ಆಪ್ ಸಹ ಹೊಸ ದಾಖಲೆ ಬರೆದಿದ್ದು ಹೊಸ ವರ್ಷಕ್ಕೂ ಮುನ್ನಾದಿನ 75 ಬಿಲಿಯನ್ ಗೂ ಹೆಚ್ಚು ಮೆಸೇಜ್ ಗಳನ್ನು ಕಳಿಸಲಾಗಿದೆ. ವಾಟ್ಸ್ ಆಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಇಷ್ಟು ಮೆಸೇಜ್ ಗಳನ್ನು ಕಳಿಸಲಾಗಿದೆ, ಕಳೇದ ವರ್ಷ 63 ಬಿಲಿಯನ್ ನಷ್ಟು ಜನರು ಸಂದೇಶ ಕಳಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ