ಮನುಷ್ಯರಂತೆಯೇ ಚಿತ್ರ ಬಿಡಿಸುವ ಮೈಕ್ರೋಸಾಫ್ಟ್ ರೋಬೋಟ್!

ಮನುಷ್ಯರಂತೆಯೇ ಚಿತ್ರ ಬಿಡಿಸುವ ರೋಬೋಟ್ ನ್ನು ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸುತ್ತಿದೆ.
ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್
ಸ್ಯಾನ್ ಫ್ರಾನ್ಸಿಸ್ಕೊ: ಮನುಷ್ಯರಂತೆಯೇ ಚಿತ್ರ ಬಿಡಿಸುವ ರೋಬೋಟ್ ನ್ನು ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸುತ್ತಿದೆ.  
ಬರಹದಲ್ಲಿರುವ ಮಾಹಿತಿಯನ್ನಾಧರಿಸಿ ಮನುಷ್ಯರಂತೆಯೇ ಚಿತ್ರ ಬಿಡಿಸುವ ರೋಬೋಟ್ ನ್ನು ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ್ದು, ಮನುಷ್ಯರು ಹೇಳುವುದನ್ನು ಆಲಿಸುವ ಸಾಮರ್ಥ್ಯವನ್ನೂ ಹೊಂದಿರಲಿದೆ ಎಂದು ತಿಳಿದುಬಂದಿದೆ. 
ಡ್ರಾಯಿಂಗ್ ಬಾಟ್ ಎಂದೇ ಇದನ್ನು ಹೆಸರಿಸಲಾಗಿದ್ದು, ಹೊರಗೆ ನಡೆಯುತ್ತಿರುವ ಘಟನೆಗಳನ್ನೂ ಚಿತ್ರರೂಪಕ್ಕೆ ಇಳಿಸುವ ಸಾಮರ್ಥ್ಯ ಹೊಂದಿದೆ. ರೋಬೋಟ್ ಗೆ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ ಕೃತಕ ಕಲ್ಪನಾ ಶಕ್ತಿಯ ಸಾಮರ್ಥ್ಯವನ್ನೂ ಹೊಂದಿದೆ ಎಂದು ಮೈಕ್ರೋಸಾಫ್ಟ್ ಸಂಶೋಧನಾ ತಂಡ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com