ಸುಳ್ಳು ಸುದ್ದಿ ಫಾರ್ವರ್ಡ್ ಮಾಡುವ ಮುನ್ನ ಎಚ್ಚರ: ವಾಟ್ಸಪ್ ನಲ್ಲಿ ಬಂದಿದೆ ಹೊಸ ಫೀಚರ್!

ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಬಹುಮುಖ್ಯ ಫೀಚರ್ ವೊಂದು ಅಪ್ ಡೇಟ್ ಆಗದ್ದು, ಫಾರ್ವರ್ಡೆಡ್ ಸುದ್ದಿಗಳನ್ನು ಕಂಡು ಹಿಡಿಯುವ ಹೊಸ ಫೀಚರ್ ಅನ್ನು ವಾಟ್ಸಪ್ ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಬಹುಮುಖ್ಯ ಫೀಚರ್ ವೊಂದು ಅಪ್ ಡೇಟ್ ಆಗದ್ದು, ಫಾರ್ವರ್ಡೆಡ್ ಸುದ್ದಿಗಳನ್ನು ಕಂಡು ಹಿಡಿಯುವ ಹೊಸ ಫೀಚರ್ ಅನ್ನು ವಾಟ್ಸಪ್ ಬಿಡುಗಡೆ ಮಾಡಿದೆ.
ಈ ಹಿಂದಷ್ಟೇ ಫೇಸ್ ಬುಕ್ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಅದರ ಸಹೋದರ ಸಂಸ್ಥೆ ವಾಟ್ಸಪ್ ಕೂಡ ಸುಳ್ಳುಸುದ್ದಿಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹೊಸ ಫೀಚರ್ ಅನ್ನು ಹೊರತಂದಿದೆ. 
ಈ ಹೊಸ ಫೀಚರ್ ಮೂಲಕ ವಾಟ್ಸಪ್ ನಲ್ಲಿ ಫಾರ್ವರ್ಡ್ ಆಗುವ ಎಲ್ಲ ಫೋಟೋಗಳ ಮೇಲೆ ಫಾರ್ವರ್ಡ್ ಲೇಬಲ್ ಗೋಚರಿಸುತ್ತದೆ. ಆ ಮೂಲಕ ಇದು ಸುಳ್ಳು ಸುದ್ದಿಯೇ ಅಥವಾ ನಿಜವಾದ ಸುದ್ದಿಯೇ ಎಂಬುದು ಗ್ರಾಹಕನಿಗೆ ತಿಳಿಯಲು ನೆರವಾಗುತ್ತದೆ. ಆ ಮೂಲಕ ವಾಟ್ಸಪ್ ಸುಳ್ಳು ಸುದ್ದಿತಡೆಗದೆ ಬ್ರೇಕ್ ಹಾಕಲು ಪ್ರಯತ್ನಿಸಿದೆ.
ಈ ಬಗ್ಗೆ ಮಾತನಾಡಿರುವ ವಾಟ್ಸಪ್ ಸಂಸ್ಥೆ, ಇಂದಿನಂದ ಈ ಹೊಸ ಫೀಚರ್ ಚಾಲನೆಯಾಗಿದ್ದು, ಇಂದಿನಿಂದ ವಾಟ್ಸಪ್ ನಲ್ಲಿ ಫಾರ್ವರ್ಡ್ ಆಗುವ ಪ್ರತೀಯೊಂದು ಇಮೇಜ್ ಗಳ ಮೇಲೂ ಫಾರ್ವರ್ಡ್ ಲೇಬಲ್ ಕಂಡುಬರಲಿದೆ ಎಂದು ಹೇಳಿದೆ. ಈ ಹೊಸ ಫೀಚರ್ ಗಾಗಿ ಬಳಕೆದಾರರು ತಮ್ಮ ವಾಟ್ಸಪ್ ಆ್ಯಪ್ ಅನ್ನು ಅಪ್ ಡೇಟ್ ಮಾಡಬೇಕು ಎಂದು ಹೇಳಿದೆ.
ಇತ್ತೀಚೆಗಷ್ಟೇ ಮಹಾರಾಷ್ಟ, ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ದೇಶದ ಹಲವೆಡೆ ಮಕ್ಕಳ ಕಳ್ಳರ ಕುರಿತು ವಾಟ್ಸಪ್ ನಲ್ಲಿ ಹರಿದಾಡಿದ್ದಇಮೇಜ್ ಗಳಿಂದಾಗಿ ಹಲವೆಡೆ ಅಮಾಯಕರ ಮೇಲೆ ಹಲ್ಲೆಯಾಗಿತ್ತು. ಇಂತಹ ಇಮೇಜ್ ಗಳಿಂದಾಗಿ ಜನರು ಪ್ರಚೋದನೆಗೊಳಗಾಗಿ ಜನರ ಹಲ್ಲೆ ಮಾಡುವಂತೆ ಆಗಿತ್ತು.
ಹೀಗಾಗಿ ಸುಪ್ರೀಂ ಕೋರ್ಟ್ ಕೂಡ ಸಾಮಾಜಿಕ ಜಾಲತಾಣಗಳಿಗೆ ನಿರ್ದೇಶನ ನೀಡಿ ಸುಳ್ಳುಸುದ್ದಿಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿತ್ತು. ಇದರ ಬೆನಲ್ಲೇ ಫೇಸ್ ಬುಕ್ ಕೆಲ ಫೀಚರ್ ಗಳನ್ನು ಹೊರತಂದಿತ್ತು. ಇದೀಗ ವಾಟ್ಸಪ್ ಕೂಡ ತನ್ನ ಹೊಸ ಫೀಚರ್ ಅನ್ನು ಹೊರ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com