ನವದೆಹಲಿ: ಹಲವು ಬದಲಾವಣೆಗಳನ್ನು ಮಾಡುತ್ತಿರುವ ವಾಟ್ಸ್ ಆಪ್ ತನ್ನ ಗ್ರಾಹಕರಿಗೆ ಗ್ರೂಪ್ ವಿಡಿಯೋ, ವಾಯ್ಸ್ ಕರೆ ಮಾಡುವ ಸೌಲಭ್ಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.
ಐಒಎಸ್ ಹಾಗೂ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಈ ಸೌಲಭ್ಯ ಜು.31 ರಿಂದ ಲಭ್ಯವಿದ್ದು, ಏಕ ಕಾಲಕ್ಕೆ 4 ಜನರೊಂದಿಗೆ ಮಾತನಾಡುವುದಕ್ಕೆ ಸಾಧ್ಯವಿದೆ. ಒನ್-ಆನ್-ಒನ್ ವಾಯ್ಸ್ ಅಥವಾ ವಿಡಿಯೋ ಕರೆ ಆಯ್ಕೆ ಮಾಡಿ ನ್ಯೂ ಆಡ್ ಪಾರ್ಟಿಸಿಪೆಂಟ್ ಆಯ್ಕೆ ಮಾಡಿದರೆ ಕರೆ ಮಾಡಬಹುದು ಎಂದು ವಾಟ್ಸ್ ಆಪ್ ಹೇಳಿಕೆ ನೀಡಿದೆ.
ಪ್ರಸ್ತುತ ವಾಟ್ಸ್ ಆಪ್ ಬಳಕೆದಾರರು 2 ಬಿಲಿಯನ್ ನಿಮಿಷಕ್ಕೂ ಹೆಚ್ಚು ನಿಮಿಷಗಳನ್ನು ಪ್ರತಿನಿತ್ಯ ವಾಟ್ಸ್ ಆಪ್ ಕರೆಯಲ್ಲಿ ಕಳೆಯುತ್ತಾರೆ. 2014 ರಲ್ಲಿ ಕರೆ ಸೌಲಭ್ಯ 2016 ರಲ್ಲಿ ವಿಡಿಯೋ ಕರೆ ಸೌಲಭ್ಯವನ್ನು ವಾಟ್ಸ್ ಆಪ್ ನೀಡಿತ್ತು.