7.5 ಬಿಲಿಯನ್ ಮೊತ್ತಕ್ಕೆ ಗಿಟ್ ಹಬ್ ನ್ನು ಖರೀದಿಸಿದ ಮೈಕ್ರೋಸಾಫ್ಟ್

ಜನಪ್ರಿಯ ಕೋಡರ್ ಆಗಿರುವ ಹ್ಯಾಂಗ್ ಔಟ್ ಗಿಟ್ ಹಬ್ ನ್ನು 7.5 ಬಿಲಿಒಯನ್ ಡಾಲರ್ ಗೆ ಖರೀದಿಸುತ್ತಿರುವುದಾಗಿ ಮೈಕ್ರೋಸಾಫ್ಟ್ ಹೇಳಿದೆ.
7.5 ಬಿಲಿಯನ್ ಮೊತ್ತಕ್ಕೆ ಗಿಟ್ ಹಬ್ ನ್ನು ಖರೀದಿಸಿದ ಮೈಕ್ರೋಸಾಫ್ಟ್
7.5 ಬಿಲಿಯನ್ ಮೊತ್ತಕ್ಕೆ ಗಿಟ್ ಹಬ್ ನ್ನು ಖರೀದಿಸಿದ ಮೈಕ್ರೋಸಾಫ್ಟ್
ನ್ಯೂಯಾರ್ಕ್: ಜನಪ್ರಿಯ ಕೋಡರ್ ಆಗಿರುವ ಹ್ಯಾಂಗ್ ಔಟ್ ಗಿಟ್ ಹಬ್ ನ್ನು 7.5 ಬಿಲಿಒಯನ್ ಡಾಲರ್ ಗೆ ಖರೀದಿಸುತ್ತಿರುವುದಾಗಿ ಮೈಕ್ರೋಸಾಫ್ಟ್ ಹೇಳಿದೆ. 
ಸಾಫ್ಟ್ ವೇರ್ ಡೆವಲಪರ್ ಗಳು ಗಿಟ್ ಹಬ್ ಮೂಲಕ ಪರಸ್ಪರ ಕೋಡಿಂಗ್ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದರು. ಡೆವಲಪರ್ ಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ ಗಿಟ್ ಹಬ್ ನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಹೇಳಿದ್ದಾರೆ. 
ಗಿಟ್ ಹಬ್ ಸ್ಥಾಪಕ ಕ್ರಿಸ್ ವಾನ್ಸ್ ಟ್ರಾಥ್ ಎಂಬ ವ್ಯಕ್ತಿ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಗಿಟ್ ಹಬ್ ಎಂಬ ಸ್ಟಾರ್ಟ್ ಅಪ್ ನ್ನು 2008 ರಲ್ಲಿ ಪ್ರಾರಂಭಿಸಿದ್ದರು. 2012 ರಲ್ಲಿ ಮೊದಲ ಬಾರಿಗೆ ಹೊರಗಿನಿಂದ ಹೂಡಿಕೆಗೆ ತೆರೆದುಕೊಂಡಿದ್ದ ಗಿಟ್ ಹಬ್, ಈಗ 27 ಮಿಲಿಯನ್ ಸಾಫ್ಟ್ ವೇರ್ ಡೆವಲಪರ್ (ಬಳಕೆದಾರರು) ಗಳನ್ನು ವಿಶ್ವಾದ್ಯಂತ ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com