ದ್ವೇಷಪೂರಿತ ಟ್ವೀಟ್ ಗಳಿಗೆ ಅಂಕುಶ: ಬಳಕೆದಾರರಿಂದಲೇ ಸಲಹೆ ಕೇಳಿದ ಟ್ವಿಟರ್

ನಿರಂತರವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಟ್ವಿಟರ್, ಈಗ ತನ್ನ ಜಾಲತಾಣದಲ್ಲಿ ದ್ವೇಷಪೂರಿತ ಟ್ವೀಟ್ ಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ಗ್ರಾಹಕರಿಂದಲೇ ಸಲಹೆ
ಟ್ವಿಟರ್
ಟ್ವಿಟರ್
ಸ್ಯಾನ್ ಫ್ರಾನ್ಸಿಸ್ಕೊ: ನಿರಂತರವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಟ್ವಿಟರ್, ಈಗ ತನ್ನ ಜಾಲತಾಣದಲ್ಲಿ ದ್ವೇಷಪೂರಿತ ಟ್ವೀಟ್ ಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ಬಳಕೆದಾರರಿಂದಲೇ ಸಲಹೆ ಸೂಚನೆಗಳನ್ನು ಕೇಳಿದೆ.  
ಪ್ರಚೋದನಕಾರಿ ಟ್ವೀಟ್, ಟ್ರೋಲ್ ಮಾಡುವ ರೀತಿಯಲ್ಲಿ ಟ್ವೀಟ್ ಮಾಡುವುದು ಸೇರಿದಂತೆ ಸಮಾಜದ ಸ್ವಾಸ್ಥ್ಯವನ್ನು ಕದಡುವ ಟ್ವೀಟ್ ಗಳನ್ನು ನಿಯಂತ್ರಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಟ್ವಿಟರ್ ತನ್ನ ಬ್ಲಾಗ್ ನಲ್ಲಿ ಹೇಳಿಕೆ ನೀಡಿದ್ದು, 
ಟ್ವಿಟರ್ ನಲ್ಲಿ ಕಲೆಕ್ಟೀವ್ ಹೆಲ್ತ್ ಗೆ ಒತ್ತು ನೀಡುವುದಕ್ಕೆ ಸಂಸ್ಥೆ ಬದ್ಧವಾಗಿದೆ, ಇದನ್ನು ಸರಿಯಾಗಿ ವ್ಯಾಖ್ಯಾನಿಸಿ ಸಹಾಯ ಮಾಡುವುದರಲ್ಲಿ ಆಸಕ್ತಿ ಹೊಂದಿರುವವರು ಸಂಸ್ಥೆಗೆ ಸಲಹೆ ಸೂಚನೆಗಳನ್ನು ನೀಡಬಹುದು ಎಂದು ಇದಕ್ಕಾಗಿ ಟ್ವಿಟರ್ ಬ್ಲಾಗ್ ನಲ್ಲಿ ಅವಕಾಶವಿದೆ ಎಂದು ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಹೇಳಿದ್ದಾರೆ. 
ಸಂಶೋಧನೆಯಲ್ಲಿಯೇ ಹೆಚ್ಚಿನ ಕಾಲ ತೊಡಗಿರುವ ಅಮೆರಿಕ ಮೂಲದ ಎನ್ ಜಿ ಒ ತನ್ನ ಸಂಸ್ಥೆಗೆ ನಿಟ್ಟಿನಲ್ಲಿ ಸ್ಪೂರ್ತಿದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟ್ವಿಟರ್ ಸಿಇಒ ಡಾರ್ಸೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com