ಮಂಗಳ ಗ್ರಹದ ಆಳವಾದ ಅಧ್ಯಯನಕ್ಕಾಗಿ ನಾಸಾ ಮಿಷನ್

ಮಂಗಳ ಗ್ರಹವನ್ನು ಆಳವಾಗಿ ಅಧ್ಯಯನ ಮಾಡುವುದಕ್ಕಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಶಾ ಮೊದಲ ಬಾರಿಗೆ ಕೆಂಪುಗ್ರಹಕ್ಕೆ ಮಿಷನ್ ನ್ನು ಕೈಗೊಂಡಿದೆ.
ನಾಸಾ
ನಾಸಾ

ಲಂಡನ್: ಮಂಗಳ ಗ್ರಹವನ್ನು ಆಳವಾಗಿ ಅಧ್ಯಯನ ಮಾಡುವುದಕ್ಕಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಶಾ ಮೊದಲ ಬಾರಿಗೆ ಕೆಂಪುಗ್ರಹಕ್ಕೆ ಮಿಷನ್ ನ್ನು ಕೈಗೊಂಡಿದೆ.

ಮೇ.05 ಕ್ಕೆ ನಾಸಾದ ಮಂಗಳ ಯಾನ ಉಡಾವಣೆಯಾಗಲಿದ್ದು, ಭೂಕಂಪಗಳ ತನಿಖೆಗಳು, ಜಿಯೋಡೆಸಿ ಮತ್ತು ಹೀಟ್ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಮಂಗಳನಲ್ಲಿ ಕೂಲಂಕುಷ ಅಧ್ಯಯನ ನಡೆಸಲಿವೆ.

ಕ್ಯಾಲಿಫೋರ್ನಿಯಾದಿಂದ ಈ ಯೋಜನೆ ನಿರ್ವಹಣೆಯಾಗಲಿದ್ದು, ಮಂಗಳ ಗ್ರಹದ ಸೃಷ್ಟಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲಿದೆ. ಕೇವಲ ಮಂಗಳ ಗ್ರಹವಷ್ಟೇ ಅಲ್ಲದೇ ಭೂಮಿ, ಚಂದ್ರ ಹಾಗೂ ಬೇರೆಯ ಸೌರ ಮಂಡಲಗಳಲ್ಲಿರುವ ಗ್ರಹಗಳ ಅಧ್ಯಯನಕ್ಕೂ ನಾಸಾದ ಈ ಮಿಷನ್ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com