ಟ್ವಿಟರ್ ನಲ್ಲಿ ಈಗಷ್ಟೇ ದೇಶವೊಂದನ್ನು ಕಂಡು ಹಿಡಿಯಲಾಗಿದೆ. ಸೇವ್ ಮಾಡಲಾಗಿರುವ ಪಾಸ್'ವರ್ಡ್ ಗಳಲ್ಲಿ ದೋಷಗಳು ಕಂಡು ಬರುತ್ತಿವೆ. ಹೀಗಾಗಿ ಸಮಸ್ಯೆಯನ್ನು ಇದೀಗ ಪರಿಹರಿಸಲಾಗಿದ್ದು, ತನಿಖೆ ವೇಳೆ ಬಳಕೆದಾರರ ಯಾವುದೊಂದು ಮಾಹಿತಿಯ ಸೋರಿಕೆಯಾಗಿಲ್ಲ ಎಂದು ತಿಳಿದುಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಟ್ವಿಟರ್ ನಲ್ಲಿ ಬಳಕೆ ಮಾಡುತ್ತಿರುವ ಪಾಸ್ ವರ್ಡ್ ಗಳನ್ನು ಇತರೆ ಸಾಮಾಜಿಕ ಜಾಲತಾಣಗಳು ಹಾಗೂ ಸೇವೆಗಳಿಗೆ ಬಳಕೆ ಮಾಡುತ್ತಿದ್ದರೆ, ಅವುಗಳನ್ನು ಬದಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ಟ್ವಿಟರ್ ಹೇಳಿಕೊಂಡಿದೆ.