ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗದೇ ಇರುವುದಕ್ಕೆ ಈ ರೀತಿ ಮಾಡಿ!
ವಿಜ್ಞಾನ-ತಂತ್ರಜ್ಞಾನ
ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುವುದನ್ನು ತಪ್ಪಿಸಲು ಇಲ್ಲಿದೆ ಒಂದು ಮಾರ್ಗ!
ಇತ್ತೀಚಿನ ಸ್ಮಾರ್ಟ್ ಫೋನ್ ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ. ಆದರೆ ಅದಕ್ಕೆ ತಕ್ಕಂತೆ ಬ್ಯಾಟರಿ ಮಾತ್ರ ಬಾಳಿಕೆ ಬರುವುದೇ ಇಲ್ಲ.
ಸ್ಯಾನ್ ಫ್ರಾನ್ಸಿಸ್ಕೋ: ಇತ್ತೀಚಿನ ಸ್ಮಾರ್ಟ್ ಫೋನ್ ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ. ಆದರೆ ಅದಕ್ಕೆ ತಕ್ಕಂತೆ ಬ್ಯಾಟರಿ ಮಾತ್ರ ಬಾಳಿಕೆ ಬರುವುದೇ ಇಲ್ಲ. ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿ ಬೇಗೆ ಖಾಲಿ ಆಗುವುದು ಇಂದಿನ ಮೊಬೈಲ್ ಬಳಕೆದಾರರು ಎದುರಿಸುತ್ತಿರುವ ದೊಡ್ಡ ಸಂಕಟವೇ ಸರಿ.
ಬ್ಯಾಟರಿ ಏಕೆ ಬೇಗ ಖಾಲಿಯಾಗುತ್ತೆ ಎಂಬ ಬಗ್ಗೆ ಆಂಡ್ರಾಯ್ಡ್ ದೇವ್ ಶೃಂಗಸಭೆಯಲ್ಲಿ ಗೂಗಲ್ ಮಾಹಿತಿ ನೀಡಿದ್ದು, ಯಾವ ಕ್ರಮ ಕೈಗೊಂಡರೆ ಬ್ಯಾಟರಿ ಬೇಗ ಖಾಲಿ ಆಗದೇ ಇರುವಂತೆ ತಡೆಯಬಹುದು ಎಂಬ ಬಗ್ಗೆಯೂ ಮಾಹಿತಿ ನೀಡಿದೆ.
ಬ್ಯಾಟರಿ ಬಾಳಿಕೆಯ ಕುರಿತು ಆಪ್ ಡೆವಲಪರ್ ಗಳೊಂದಿಗೂ ಮಾತನಾಡಿರುವ ಗೂಗಲ್, ಬ್ಯಾಟರಿ ಹೆಚ್ಚು ಬಳಕೆಯಾಗದಂತೆ ತಮ್ಮ ಆಪ್ ಗಳಲ್ಲಿ ಯಾವ ಕ್ರಮ ಕೈಗೊಳ್ಳಬಹುದೆಂಬ ಬಗ್ಗೆಯೂ ಮಾತನಾಡಿದೆ. ಆದರೆ ಗೂಗಲ್ ಪ್ರಕಾರ ಕೇವಲ ಆಪ್ ಗಳಷ್ಟೇ ಬ್ಯಾಟರಿ ಬೇಗ ಖಾಲಿ ಆಗುವುದಕ್ಕೆ ಕಾರಣವಲ್ಲವಂತೆ. ಬದಲಾಗಿ ಪರದೆಯ ಬ್ರೈಟ್ನೆಸ್ ಸಹ ಕಾರಣವಾಗಿರಲಿದ್ದು, ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಡಾರ್ಕ್ ಮೋಡ್ ನಲ್ಲಿದ್ದರೆ ಬ್ಯಾಟರಿ ಬೇಗ ಖಾಲಿ ಆಗುವುದಿಲ್ಲ ಎಂದು ತಿಳಿದುಬಂದಿದೆ.
ಬ್ರೈಟ್ ನೆಸ್ ಜೊತೆಗೆ ಸ್ಕ್ರೀನ್ ಕಲರ್ ಸಹ ಪ್ರಮುಖವಾಗಿರಲಿದೆ, ಡಾರ್ಕ್ ಮೋಡ್ ಇಡೀ ಮೊಬೈಲ್ ನ ಆಪರೇಟಿಂಗ್ ಸಿಸ್ಟಮ್ ಥೀಮ್ ನ್ನು ಬದಲಾವಣೆ ಮಾಡಲಿದೆ. ಡಾರ್ಕ್ ಮೋಡ್ ನಲ್ಲಿ ಬ್ರೈಟ್ ನೆಸ್ ಹೆಚ್ಚಿದ್ದರೂ ಮೊಬೈಲ್ ಬ್ಯಾಟರಿ ಬಳಕೆ ಮಡಿಮೆ ಮಾಡಲಿದೆ ಎಂಬುದು ಗೂಗಲ್ ಸಲಹೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ