ಇಸ್ರೋ 'ಗಗನಯಾನ'ಕ್ಕೆ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆ ನೆರವು

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದ ಇಸ್ರೋ ದ ಪ್ರಥಮ ಮಾನವ ಬಾಹ್ಯಾಕಾಶ ಅಭಿಯಾನಕ್ಕೆ ತಂತ್ರಜ್ಞಾನ ಸೇರಿದಂತೆ ಎಲ್ಲಾ ನೆರವು ನೀಡುವುದಾಗಿ ಫ್ರಾನ್ಸ್‌ ಬಾಹ್ಯಾಕಾಶ ಸಂಸ್ಥೆಯ ಹೇಳಿದೆ.
ಫ್ರಾನ್ಸ್‌ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ  ಜೀನ್‌ ವೇಸ್‌ ಲೀ ಗಾಲ್‌
ಫ್ರಾನ್ಸ್‌ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಜೀನ್‌ ವೇಸ್‌ ಲೀ ಗಾಲ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದ ಇಸ್ರೋ ದ ಪ್ರಥಮ ಮಾನವ ಬಾಹ್ಯಾಕಾಶ ಅಭಿಯಾನಕ್ಕೆ ತಂತ್ರಜ್ಞಾನ ಸೇರಿದಂತೆ ಎಲ್ಲಾ ನೆರವು ನೀಡುವುದಾಗಿ ಫ್ರಾನ್ಸ್‌ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಇಸ್ರೋದೊಂದಿಗೆ  ಗಗನಯಾನಕ್ಕೆ  ಅಗತ್ಯವಿರುವ ತಂತ್ರಜ್ಞಾನದ ಬಗ್ಗೆ  ಫ್ರಾನ್ಸ್ ಬಾಹ್ಯಾಕಾಶ ಏಜೆನ್ಸಿ ( ಸಿಎಇಎಸ್ ) ಇಂದು  ಮಾಹಿತಿ ಹಂಚಿಕೊಂಡಿತು.

ಬೆಂಗಳೂರು ಸ್ಪೇಸ್‌ ಎಕ್ಸ್‌ಪೋ ಆರನೇ ಆವೃತ್ತಿಯ ಸಂದರ್ಭದಲ್ಲಿ ಮಾತನಾಡಿದ  ಫ್ರಾನ್ಸ್‌ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಜೀನ್‌ ವೇಸ್‌ ಲೀ ಗಾಲ್‌,  ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಹಯೋಗದಲ್ಲಿ ಗಗನಯಾನ ಆರಂಭಿಸಲಾಗುತ್ತಿದ್ದು, ಇಸ್ರೋ ಸಾಕಷ್ಟು ಪ್ರಯೋಜನ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

ಜೀವರಕ್ಷಕ ವ್ಯವಸ್ಥೆ ಮತ್ತಿತರ ತಾಂತ್ರಿಕ ನೆರವನ್ನು ಒದಗಿಸಲು ಸಿದ್ಧವಿರುವುದಾಗಿ ಅವರು ಹೇಳಿದರು.ಈ ಸಂಬಂಧ ಉಭಯ ಸಂಸ್ಥೆಯ ನಡುವಣ ನಾಳೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.
ಗಗನಯಾನ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಯನವಾಗಲಿದೆ ಎಂದು ಜೀನ್‌ ವೇಸ್‌ ಲೀ ಗಾಲ್‌ ಅಭಿಪ್ರಾಯಪಟ್ಟರು. 2022ರೊಳಗೆ ಭಾರತವು ಮೂವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com