ಮೋಟೊ ಜಿ6 ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ: ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಜಾಗತಿಕ ಮಾರುಕಟ್ಟೆಯಲ್ಲಿ 5 ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಮೋಟೊರೋಲಾ ಜಿ6 ಪ್ಲಸ್ ಫೋನ್ ನ್ನು ಭಾರತದ ಮಾರುಕಟ್ಟೆಗೆ ಸೆ.10 ರಂದು ಬಿಡುಗಡೆ ಮಾಡಿದೆ. ಕೆಲವೇ ಕೆಲವು ಟೆಕ್ ತಜ್ಞರ ಸಮ್ಮುಖದಲ್ಲಿ
ಮೋಟೊ ಜಿ6 ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ: ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಜಾಗತಿಕ ಮಾರುಕಟ್ಟೆಯಲ್ಲಿ 5 ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಮೋಟೊರೋಲಾ ಜಿ6 ಪ್ಲಸ್ ಫೋನ್ ನ್ನು ಭಾರತದ ಮಾರುಕಟ್ಟೆಗೆ ಸೆ.10 ರಂದು ಬಿಡುಗಡೆ ಮಾಡಿದೆ. ಕೆಲವೇ ಕೆಲವು ಟೆಕ್ ತಜ್ಞರ ಸಮ್ಮುಖದಲ್ಲಿ ಯುಟ್ಯುಬ್ ಚಾನೆಲ್ ಮೂಲಕ ಫೋನ್ ನ್ನು ಬಿಡುಗಡೆ ಮಾಡಲಾಗಿದೆ. 
ಮೋಟೊ ಜಿ6 ಪ್ಲಸ್ ಬೆಲೆ 22,499 ಆಗಿದ್ದು, ಇಂದಿನಿಂದ ಅಮೇಜಾನ್ ಹಾಗೂ ಮೋಟೊ ಹಬ್ ಆಫ್ ಲೈನ್ ರಿಟೇಲ್ ಸ್ಟೋರ್ಸ್ ಗಳಲ್ಲಿಯೂ ಲಭ್ಯವಿರಲಿದೆ.  ಮೋಟೊರೋಲಾ ಮೊಬೈಲ್ ಸಂಸ್ಥೆ ಏಪ್ರಿಲ್ ತಿಂಗಳಲ್ಲಿ ಜಿ ಸರಣಿಯ ಮೊಬೈಲ್ ಗಳನ್ನು ಬಿಡುಗಡೆ ಮಾಡಿತ್ತು.
ಈಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಮೋಟೊ ಜಿ6 5.9 ಇಂಚಿನ ಫುಲ್ ಹೆಚ್ ಡಿ ಮ್ಯಾಕ್ಸ್ ಆವೃತ್ತಿಯನ್ನು ಹೊಂದಿದ್ದು, 18:9 ಅನುಪಾತದ ಪರದೆಯನ್ನು ಹೊಂದಿದೆ. ಹಿಂಭಾಗದಲ್ಲಿ 2 ಆಟೋಫೋಕಸ್ ಕ್ಯಾಮರಾಗಳಿದ್ದು, ಮುಂಭಾಗದಲ್ಲಿಎಲ್ ಇಡಿ ಫ್ಲ್ಯಾಶ್ ಇರುವ 8 ಎಂಪಿಯ ಕ್ಯಾಮರ ನೀಡಲಾಗಿದೆ.
  • ಮೋಟೋ ಜಿ6 ನ ವಿಶೇಷತೆಗಳು 

  • 5.9 ಇಂಚಿನ ಐಪಿಎಸ್ ಡಿಸ್ಪ್ಲೇ 
  • ಪೂರ್ಣ ಹೆಚ್ ಡಿ +1080 ರೆಸಲ್ಯೂಶನ್
  • ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3
  • ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 630 ಪ್ರೊಸೆಸರ್ 2.2 GHz ಆಕ್ಟಾ-ಕೋರ್ ಸಿಪಿಯು
  • 700 ಮೆಗಾಹರ್ಟ್ಝ್ ಅಡ್ರಿನೋ 508 ಜಿಪಿಯು
  • 12 ಮೆಗಾಪಿಕ್ಸಲ್ & 5 ಮೆಗಾಪಿಕ್ಸಲ್ ಹಿಂಭಾಗದಲ್ಲಿನ 2 ಕ್ಯಾಮೆರಾಗಳು ಡ್ಯುಯಲ್ ಆಟೋಫೋಕಸ್ ಪಿಕ್ಸೆಲ್ ತಂತ್ರಜ್ಞಾನ
  • 8 ಮೆಗಾಪಿಕ್ಸಲ್ ಫ್ರಂಟ್ ಕ್ಯಾಮರ
  • p2i- ರೇಟೆಡ್ ಜಲನಿರೋಧಕ ಲೇಪನ
  • 3200 ಎಂಎಹೆಚ್ ಬ್ಯಾಟರಿ 
  • ಆಂಡ್ರಾಯ್ಡ್ 8.0 ಓರಿಯೊ ಓಎಸ್
  • 64 ಜಿಬಿ ಆಂತರಿಕ ಸ್ಟೋರೇಜ್
  • ಫಿಂಗರ್ ಪ್ರಿಂಟ್ ರೀಡರ್, ಫೇಸ್ ಅನ್ಲಾಕ್ ಫೀಚರ್ 
  • 4 ಜಿಬಿ/6 ಜಿಬಿ ರ್ಯಾಮ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com