ಇದೇ ಮೊದಲ ಬಾರಿಗೆ 'ಬಾಹ್ಯಾಕಾಶ ಪ್ರವಾಸ' 'ಸಾರ್ವಜನಿಕರಿಗೆ ಅವಕಾಶ, ಸ್ಪೇಸ್ ಏಕ್ಸ್ ಸಜ್ಜು

ಭೂಮಿಯ ಸುತ್ತ ಸುತ್ತುವ ಭೂಮಿಯ ಏಕೈಕ ಶಾಶ್ವತ ನೈಸರ್ಗಿಕ ಉಪಗ್ರಹವಾದ ಚಂದ್ರನಲ್ಲಿಗೆ ಮಾನವ ಕಡೆಯ
ಉಡಾವಣಾ ವಾಹಕ
ಉಡಾವಣಾ ವಾಹಕ

ಲಾಸ್ ಏಂಜಲೀಸ್: ಭೂಮಿಯ ಸುತ್ತ ಸುತ್ತುವ ಭೂಮಿಯ ಏಕೈಕ ಶಾಶ್ವತ ನೈಸರ್ಗಿಕ ಉಪಗ್ರಹವಾದ ಚಂದ್ರನಲ್ಲಿಗೆ ಮನುಷ್ಯ ಕಡೆಯ ಬಾರಿಗೆ ಕಾಲಿಟ್ಟದ್ದು 1972ರಲ್ಲಿ, ಅದು ಕೊನೆಯ ಅಪೊಲೊ ಯಾನ ಮೂಲಕ, ಅಮೆರಿಕದ ಖಗೋಳ ಇತಿಹಾಸದಲ್ಲಿ ಅತ್ಯಂತ ಹೆಮ್ಮೆಯ ವರ್ಷ.

ಅಮೆರಿಕಾದ ಗಗನಯಾತ್ರಿಗಳಾದ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಝ್ ಆಲ್ಡ್ರಿನ್ 1969 ರಲ್ಲಿ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಿದ ಮೊದಲ ವಿಜ್ಞಾನಿಗಳಾಗಿದ್ದರು. ಖಗೋಳ ಇತಿಹಾಸದಲ್ಲಿ ಚಂದ್ರನ ಮೇಲೆ ಕಾಲಿಟ್ಟವರು ಇದುವರೆಗೆ 24 ಮಂದಿ ಮಾತ್ರ. ಆದರೆ ಇದೀಗ ಬಾಹ್ಯಾಕಾಶದ ಆಳವಾದ ಜಾಗಕ್ಕೆ ಹೋಗುವ ಕನಸು ಕಾಣುತ್ತಿರುವವರನ್ನು ಹೊತ್ತೊಯ್ಯಲು ವೇದಿಕೆ ಸಿದ್ದವಾಗುತ್ತಿದೆ.

 ಬೃಹತ್ ಉಡ್ಡಯನ ವಾಹಕವಾದ ಬಿಗ್ ಫಾಲ್ಕನ್ ರಾಕೆಟ್(ಬಿಎಫ್ಆರ್) ಮೂಲಕ ಪ್ರವಾಸಿಗರನ್ನು ಚಂದ್ರನ ಸುತ್ತ ಕರೆದೊಯ್ಯಲು ಸ್ಪೇಸ್ ಎಕ್ಸ್ ಕಂಪೆನಿ ಯೋಜನೆ ಸಿದ್ದಪಡಿಸಿದೆ. ಚಂದ್ರನ ಸುತ್ತ ಕರೆದೊಯ್ಯುವ ಖಾಸಗಿ ಅಂತರಿಕ್ಷ ಪ್ರಯಾಣಕ್ಕೆ ವಿಶ್ವದಲ್ಲಿ ಮೊದಲ ಬಾರಿಗೆ ನಾವು ಬಿಎಫ್ಆರ್ ವಾಹಕದ ಮೂಲಕ ಕರೆದೊಯ್ಯಲು ಸಹಿ ಮಾಡಿಕೊಂಡಿದ್ದೇವೆ ಎಂದು ಕಂಪೆನಿ ಟ್ವೀಟ್ ಮಾಡಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅದು ಹೇಳಿದೆ. ಅಂತರ್ಜಾಲ ಉದ್ಯಮಿ ಮತ್ತು ಟೆಸ್ಲಾ ಎಲೆಕ್ಟ್ರಿಕ್ ಕಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲೊನ್ ಮಸ್ಕ್ ನೇತೃತ್ವದ ಕ್ಯಾಲಿಫೋರ್ನಿಯಾ ಮೂಲದ ಕಂಪೆನಿಯಾಗಿರುವ ಸ್ಪೇಸ್ ಎಕ್ಸ್ ಚಂದ್ರನ ಸುತ್ತ ಪ್ರವಾಸಿಗರನ್ನು ಕರೆದೊಯ್ಯಲು ಯೋಜನೆ ರೂಪಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷ ಫೆಬ್ರವರಿಯಲ್ಲಿಯೇ, 2018ರ ಅಂತ್ಯದಲ್ಲಿ ವಿಶ್ವದ ಮೊದಲ ಇಬ್ಬರು ಅಂತರಿಕ್ಷ ಪ್ರವಾಸಿಗರನ್ನು ಚಂದ್ರನೆಡೆಗೆ ಕಳುಹಿಸಲಾಗುವುದು ಎಂದು ಪ್ರಕಟಿಸಿತ್ತು.

ಸ್ಪೇಸ್ ಎಕ್ಸ್  ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರಕ್ಕೆ ಮೊದಲ ಅಂತರಿಕ್ಷ ಮೂಲಕ ಪ್ರವಾಸಿಗರನ್ನು ಮತ್ತು ವಸ್ತುಗಳನ್ನು ಫಾಲ್ಕನ್ ಭಾರೀ ರಾಕೆಟ್ ಮೂಲಕ ಕಳುಹಿಸಿಕೊಡುವ ಯೋಜನೆಯಲ್ಲಿತ್ತು. ಆದರೆ ಆ ಯೋಜನೆ ನಂತರ ಏನಾಯಿತು ಎಂಬುದಕ್ಕೆ ಸ್ಪಷ್ಟ ಮಾಹಿತಿಯಿಲ್ಲ. ಅಂತರಿಕ್ಷಕ್ಕೆ ಪ್ರಯಾಣಿಸಲು ಯೋಜಿಸಿದ್ದ ಇಬ್ಬರು ಪ್ರವಾಸಿಗರ ಹೆಸರು ಮತ್ತು ಗುರುತುಗಳನ್ನು ಮತ್ತು ಅವರು ಎಷ್ಟು ಹಣ ನೀಡಲು ಯೋಜಿಸಿದ್ದರು ಎಂಬ ಬಗ್ಗೆ ಕಂಪೆನಿ ಬಹಿರಂಗಪಡಿಸಿಲ್ಲ.

ಇದೀಗ ಬಿಗ್ ಫಾಲ್ಕನ್ ರಾಕೆಟ್ ಮೂಲಕ ಪ್ರಯಾಣಿಸುವ ಪ್ರವಾಸಿಗರ ಬಗ್ಗೆ ಹೆಚ್ಚಿನ ವಿವರಗಳನ್ನು ನಾಡಿದ್ದು ಸೋಮವಾರ ಜಗತ್ತಿಗೆ ಸಾರಲಾಗುವುದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com