ಫೇಸ್ ಬುಕ್ ಭದ್ರತಾ ಉಲ್ಲಂಘನೆ : 50 ಮಿಲಿಯನ್ ಬಳಕೆದಾರ ಖಾತೆಗಳ ಮೇಲೆ ಪರಿಣಾಮ !

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಭದ್ರತಾ ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು, 50 ಮಿಲಿಯನ್ ಗೂ ಹೆಚ್ಚು ಬಳಕೆದಾರರ ಖಾತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಆ ಸಂಸ್ಥೆಯೇ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೆನ್ಲೊ ಪಾರ್ಕ್ : ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಭದ್ರತಾ  ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು, 50 ಮಿಲಿಯನ್ ಗೂ ಹೆಚ್ಚು ಬಳಕೆದಾರರ ಖಾತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಆ ಸಂಸ್ಥೆಯೇ ಹೇಳಿದೆ.

ಭದ್ರತಾ ಉಲ್ಲಂಘನೆಯಾಗಿರುವುದನ್ನು ಸೆಪ್ಟೆಂಬರ್ 25 ರಂದು ಎಂಜಿನಿಯರ್ ಗಳು ಪತ್ತೆ ಹಚ್ಚಿದ್ದಾರೆ ಎಂದು ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ಗೈ ರೊಸೆನ್ ತಿಳಿಸಿದ್ದಾರೆ. ಆಕ್ರಮಣಕಾರರು ಫೇಸ್ ಬುಕ್ ಕೋಡ್ ನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ  ಫಿಚರ್ ವೀಕ್ಷಣೆ ಮೇಲೆ ಪರಿಣಾಮ ಬೀರುವಂತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

 ಭದ್ರತಾ  ಉಲ್ಲಂಘನೆಯಿಂದ ಆಕ್ರಮಣಕಾರರು ಫೇಸ್ ಬುಕ್ ಪ್ರವೇಶ ಟೋಕನ್ ಗಳನ್ನು ಕದಿಯಲು ನೆರವಾಗಿದ್ದು,  ಇತರರ ಖಾತೆಗಳನ್ನು ಹೈಜಾಕ್ ಮಾಡಲು ಬಳಸಿಕೊಳ್ಳಬಹುದಾಗಿದೆ.

 ಈ ಬಗ್ಗೆ ಫೇಸ್ ಬುಕ್ ತನಿಖೆ ಆರಂಭಿಸಿದ್ದು, ಕಾನೂನು ಸಂಸ್ಥೆಗಳ ಮೊರೆ ಹೋಗಿದೆ. ಆದಾಗ್ಯೂ , ಹ್ಯಾಕರ್ ಇನ್ನೂ  ಗುರುತು ಹಚ್ಚಲು ಸಾಧ್ಯವಾಗಿಲ್ಲ. 50 ಮಿಲಿಯನ್ ಖಾತೆಗಳ ಮಾಹಿತಿ ಲಭ್ಯವಾಗಬಹುದು ಅಥವಾ ದುರ್ಬಳಕೆಯಾಗಿರಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com