ನಾಸಾದ ಲೇಸರ್ ಉಪಕರಣಗಳನ್ನು ಚಂದ್ರನಲ್ಲಿಗೆ ಕೊಂಡೊಯ್ಯಲಿರುವ 'ಚಂದ್ರಯಾನ 2'

ಭಾರತ ಬಾಹ್ಯಾಕಾಶ ಸಂಸ್ಥೆ - ಇಸ್ರೋ ದ ಮಹತ್ವಾಕಾಂಕ್ಷೆ ಯೋಜನೆ "ಚಂದ್ರಯಾನ- 2" ಇದೇ ಏಪ್ರಿಲ್ ನಲ್ಲಿ ಕಾರ್ಯಗತವಾಗಲಿದೆ. ಈ ಯೋಜನೆಯಲ್ಲಿ ಇಸ್ರೋ ಅಮೆರಿಕಾದ ನಾಸಾ ಬಾಹ್ಯಾಕಾಶ....
ಚಂದ್ರಯಾನ (ಸಂಗ್ರಹ ಚಿತ್ರ)
ಚಂದ್ರಯಾನ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಭಾರತ ಬಾಹ್ಯಾಕಾಶ ಸಂಸ್ಥೆ - ಇಸ್ರೋ ದ ಮಹತ್ವಾಕಾಂಕ್ಷೆ ಯೋಜನೆ "ಚಂದ್ರಯಾನ- 2" ಇದೇ ಏಪ್ರಿಲ್ ನಲ್ಲಿ ಕಾರ್ಯಗತವಾಗಲಿದೆ. ಈ ಯೋಜನೆಯಲ್ಲಿ ಇಸ್ರೋ ಅಮೆರಿಕಾದ ನಾಸಾ ಬಾಹ್ಯಾಕಾಶ ಸಂಸ್ಥೆಯ ಲೇಸರ್ ಉಪಕರಣಗಳನ್ನು ಚಂದ್ರನ ಕಕ್ಷೆಗೆ ಸೇರಿಸಲಿದೆ. ಇದು ವಿಜ್ಞಾನಿಗಳು ಚಂದ್ರನ ಅಂತರವನ್ನು ನಿಖರವಾಗಿ ಮಾಪನ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದ ಲೂನಾರ್ ಮತ್ತು ಪ್ಲಾನೆಟರಿ ಸೈನ್ಸ್ ಕಾನ್ಫರೆನ್ಸ್ ನಲ್ಲಿ ಚಂದ್ರಯಾನ 2 ಮತ್ತು ಇಸ್ರೇಲಿ ಲ್ಯಾಂಡರ್ ಬೆರ್ಶೆಟ್ ಏಪ್ರಿಲ್ ನಲ್ಲಿ ನಭಕ್ಕೇರುತ್ತಿರುವ ಕಾರಣ ನಾಸಾ ಸ್ವಾಮ್ಯದ ಲೇಸರ್ ರೆಟ್ರೊ ರೆಫ್ಲೆಕ್ಟರ್ ಉಪಕರಣಗಳನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗಲಿದೆ ಎಂದು ನಾಸಾ ದೃಢಪಡಿಸಿತು.
"ನಾವು ಸಾದ್ಯವಾದಷ್ಟು ಚಂದ್ರನ ಸಂಪೂರ್ಣ ಮೇಲ್ಮೈನನ್ನು ಅನೇಕ ಲೇಸರ್ ಪ್ರತಿಫಲಕ ಸರಣಿಗಳಿಂದ ಆವೃತಗೊಳಿಸಲು ಬಯಸಿದ್ದೇವೆ." ಎಂದು ನಾಸಾದ ಸೈನ್ಸ್ ಮಿಶನ್ ಡೈರೆಕ್ಟರೇಟ್ ನ ಪ್ಲಾನೆಟರಿ ಸೈನ್ಸ್ ವಿಭಾಗದ ನಿರ್ದೇಶಕ ಲೊರಿ ಗ್ಲೇಜ್ ಹೇಳಿದ್ದಾರೆ.
ಲೇಸರ್ ರೆಟ್ರೊ ರೆಫ್ಲೆಕ್ಟರ್ ಅತ್ಯಾಧುನಿಕ ಕನ್ನಡಿಗಳಂತೆ ಇದ್ದು ಇವು ಭೂಮಿಯಿಂದ ಕಳುಹಿಸಲಾದ ಲೇಸರ್ ಬೆಳಕಿನ ಸಿಗ್ನಲ್ಗಳನ್ನು ಪ್ರತಿಫಲಿಸುತ್ತದೆ.ಭೂಮಿಗೆ ನಿಖರವಾಗಿ ಚಂದ್ರನ ದೂರವನ್ನು ಲೆಕ್ಕಹಾಕಲು ವಿಜ್ಞಾನಿಗಳು ಬಳಸಬಹುದಾದ ಲ್ಯಾಂಡರ್ ಎಲ್ಲಿದೆ ಎಂಬುದನ್ನು ನಿಖರವಾಗಿ ಗುರುತಿಸಲು ಈ ಸಿಗ್ನಲ್ ಗಳು ನೆರವಾಗಲಿದೆ. ಚಂದ್ರನ ಮೇಲ್ಮೈಯಲ್ಲಿ ಐದು ರೀತಿಯ ಉಪಕರಣಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೂ, ಸಹ ಉಪಕರಣದಲ್ಲಿನ ಕೆಲ ನ್ಯೂನತೆಗಳ ಕಾರಣ ಚಂದ್ರನ ನಿಖರ ದೂರ ಕಂಡುಹಿಡಿಯಲು ಸಾದ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com