ಸೌರಮಂಡಲದ ಹೊರಗೆ ವಾಸಯೋಗ್ಯ ಗ್ರಹದ ವಾತಾವರಣದಲ್ಲಿ ಇದೇ ಮೊದಲ ಬಾರಿಗೆ ನೀರು ಪತ್ತೆ! 

ಸೌರಮಂಡಲದ ಹೊರಗೆ ನಕ್ಷತ್ರವನ್ನು ಸುತ್ತುವ ಗ್ರಹದ ವಾತಾವರಣದಲ್ಲಿ ಇದೇ ಮೊದಲ ಬಾರಿಗೆ ನೀರು ಇರುವುದು ಪತ್ತೆಯಾಗಿದೆ. 
ಕಲಾವಿದನ ಕಲ್ಪನೆಯಲ್ಲಿ ಕೆ 2-18 ಬಿ ಗ್ರಹ
ಕಲಾವಿದನ ಕಲ್ಪನೆಯಲ್ಲಿ ಕೆ 2-18 ಬಿ ಗ್ರಹ
Updated on

ಪ್ಯಾರಿಸ್: ಸೌರಮಂಡಲದ ಹೊರಗೆ ನಕ್ಷತ್ರವನ್ನು ಸುತ್ತುವ ಗ್ರಹದ ವಾತಾವರಣದಲ್ಲಿ ಇದೇ ಮೊದಲ ಬಾರಿಗೆ ನೀರು ಇರುವುದು ಪತ್ತೆಯಾಗಿದೆ. ಭೂಮಿಯ ಮೇಲಿರುವಂತೆಯೇ ಅಲ್ಲಿ ಕೂಡ ಉಷ್ಣಾಂಶವಿದ್ದು ಅದು ಜೀವಿಗಳಿಗೆ ಬದುಕಲು ಸಹಾಯವಾಗುವ ರೀತಿಯಲ್ಲಿದೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.


ಭೂಮಿಯ ದ್ರವ್ಯರಾಶಿಯ ಎಂಟು ಪಟ್ಟು ದೊಡ್ಡದಾಗಿದ್ದು, ಕೆ 2-18 ಬಿ ಗ್ರಹ ತನ್ನ ನಕ್ಷತ್ರದ "ವಾಸಯೋಗ್ಯ ವಲಯ" ದಲ್ಲಿ ಹೆಚ್ಚು ದೂರವೂ ಅಲ್ಲದೆ ಮತ್ತು ಹೆಚ್ಚು ಹತ್ತಿರವೂ ಅಲ್ಲದೆ ಪರಿಭ್ರಮಿಸುತ್ತಿದೆ. ಇಲ್ಲಿ ನೀರು ದ್ರವರೂಪದಲ್ಲಿದೆ ಎಂದು ವಿಜ್ಞಾನಿಗಳು ಹೇಳಿರುವುದಾಗಿ ನೇಚರ್ ಅಸ್ಟ್ರೊನೊಮಿ ವರದಿ ಮಾಡಿದೆ.


ಸೌರಮಂಡಲದ ಹೊರಗೆ ಇರುವ ಉತ್ತಮ ಗ್ರಹ ಎಂದು ವಿಜ್ಞಾನಿಗಳು ಬಣ್ಣಿಸಿದ್ದು ಇಲ್ಲಿ ಜೀವಿಗಳು ವಾಸಿಸುತ್ತಿದ್ದಾರೆಯೇ ಎಂಬ ಹುಡುಕಾಟದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ.


ಗ್ರಹದ ಮೇಲ್ಮೈಯಲ್ಲಿ ಸಾಗರ ಇರಬಹುದು ಎಂದು ಭಾವಿಸಲು ಸಾಧ್ಯವಿಲ್ಲ, ಆದರೆ ಸಾಧ್ಯತೆಯಿದೆ. ಇಂದಿನವರೆಗೆ ಪತ್ತೆಹಚ್ಚಿರುವ 4 ಸಾವಿರಕ್ಕೂ ಅಧಿಕ ಸೌರಮಂಡಲದ ಹೊರಗೆ ನಕ್ಷತ್ರಗಳನ್ನು ಸುತ್ತುವ ಗ್ರಹಗಳಲ್ಲಿ ಕಲ್ಲಿನ ಮೇಲ್ಮೈ ಮತ್ತು ವಾತಾವರಣವನ್ನು ನೀರಿನೊಂದಿಗೆ ಸಂಯೋಜಿಸುವ ಗ್ರಹ ಇದೇ ಮೊದಲಾಗಿದೆ. ವಾಯುಮಂಡಲವನ್ನು ಹೊಂದಿರುವ ಹೆಚ್ಚಿನ ಈ ರೀತಿಯ ಗ್ರಹಗಳು ದೈತ್ಯ ಚೆಂಡುಗಳ ಅನಿಲಗಳಾಗಿವೆ, ಮತ್ತು ಬೆರಳೆಣಿಕೆಯಷ್ಟು ಕಲ್ಲಿನ ಗ್ರಹಗಳು ಯಾವುದೇ ವಾತಾವರಣವನ್ನು ಹೊಂದಿಲ್ಲವೆಂದು ಕಂಡುಬಂದಿದೆ.


ಒಂದು ವೇಳೆ ವಾತಾವರಣ ಹೊಂದಿದ್ದರೂ ಕೂಡ ಬಹುತೇಕ ಭೂಮಿಯ ರೀತಿಯ ಗ್ರಹಗಳು ತಮ್ಮ ನಕ್ಷತ್ರಗಳಿಂದ ಬಹುದೂರವಿದ್ದು ನೀರು ಹೊಂದಿರುವ ಸಾಧ್ಯತೆ ಕಡಿಮೆಯಾಗಿದೆ.


ಕೆ2-18ಬಿ ಪತ್ತೆಯಾಗಿದ್ದು 2015ರಲ್ಲಿ. ಸೂಪರ್ ಅರ್ಥ್ಸ್ ಪ್ಲಾನೆಟ್ ಎಂದು ಕರೆಯಲ್ಪಡುವ ನೂರಾರು ಗ್ರಹಗಳಲ್ಲಿ ಇದು ಕೂಡ ಒಂದು. ಮುಂದಿನ ದಶಕಗಳಲ್ಲಿ ಇಂತಹ ನೂರಾರು ಗ್ರಹಗಳನ್ನು ಬಾಹ್ಯಾಕಾಶ ಯೋಜನೆಯಲ್ಲಿ ವಿಜ್ಞಾನಿಗಳು ಕಂಡುಹಿಡಿಯುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com