1,000 ಕಿ.ಮೀ ಸ್ಟ್ರೈಕ್ ರೇಂಜ್ ಹೊಂದಿರುವ ನಿರ್ಭಯ್ ಕ್ಷಿಪಣಿ ಪರೀಕ್ಷೆ ಯಶಸ್ವಿ

1,000 ಕಿ.ಮೀ ಸ್ಟ್ರೈಕ್ ರೇಂಜ್ ಹೊಂದಿರುವ ಸಬ್ ಸಾನಿಕ್ ಕ್ಷಿಪಣಿ ನಿರ್ಭಯ್ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಏ.15 ರಂದು ಯಶಸ್ವಿಯಾಗಿ ನಡೆಸಿದೆ.
ನಿರ್ಭಯ್
ನಿರ್ಭಯ್
ಒಡಿಶಾ: 1,000 ಕಿ.ಮೀ ಸ್ಟ್ರೈಕ್ ರೇಂಜ್ ಹೊಂದಿರುವ ಸಬ್ ಸಾನಿಕ್ ಕ್ಷಿಪಣಿ ನಿರ್ಭಯ್ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಏ.15 ರಂದು ಯಶಸ್ವಿಯಾಗಿ ನಡೆಸಿದೆ. 
ಬೆಂಗಳೂರು ಮೂಲದ ಡಿಆರ್ ಡಿಒ ವ್ಯಾಪ್ತಿಗೆ ಬರುವ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ಲ್ಯಾಬ್ ನಲ್ಲಿ ಇದನ್ನು ತಯಾರಿಸಲಾಗಿದ್ದು ಎಲ್ಲಾ ರೀತಿಯ ವಾತಾವರಣಗಳಲ್ಲಿ ಇದನ್ನು ಪ್ರಯೋಗಿಸಬಹುದಾಗಿದೆ. 
ಸಬ್ ಸಾನಿಕ್ ಕ್ರೂಸ್ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. 
ರಿಂಗ್ ಲೇಜರ್ ಗೈರೊಸ್ಕೋಪ್ (ಆರ್ ಎಲ್ ಜಿ) ನಿರ್ದೇಶಿತ ನ್ಯಾವಿಗೇಷನ್ ವ್ಯವಸ್ಥೆ ಹಾಗೂ ನಿರ್ಭಯ್ ಕ್ಷಿಪಣಿಗೆ ಅಳವಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com