ಹಣ ಹಿಂದಿರುಗಿಸುವಂತೆ ಮನವಿ ಮಾಡಿದ ಗೂಗಲ್ ಪಿಕ್ಸೆಲ್ 3 ಗ್ರಾಹಕನಿಗೆ, ತಿರುಗಿ 10 ಫೋನ್ ಕೊಟ್ಟ ಗೂಗಲ್!

ದೋಷಯುಕ್ತ ಗೂಗಲ್ ಪಿಕ್ಸೆಲ್ 3 ಸ್ಮಾರ್ಟ್ ಫೋನ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಗೂಗಲ್ ಕಂಪನಿಗೆ ಗ್ರಾಕರೊಬ್ಬರು ಮನವಿ ಮಾಡಿದ್ದಾರೆ....

Published: 19th April 2019 12:00 PM  |   Last Updated: 19th April 2019 04:16 AM   |  A+A-


Google Pixel 3 user asks for refund, gets 10 phones instead

ಸಾಂದರ್ಭಿಕ ಚಿತ್ರ

Posted By : LSB LSB
Source : IANS
ಸ್ಯಾನ್ ಫ್ರಾನ್ಸಿಸ್ಕೋ: ದೋಷಯುಕ್ತ ಗೂಗಲ್ ಪಿಕ್ಸೆಲ್ 3 ಸ್ಮಾರ್ಟ್ ಫೋನ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಗೂಗಲ್ ಕಂಪನಿಗೆ ಗ್ರಾಕರೊಬ್ಬರು ಮನವಿ ಮಾಡಿದ್ದಾರೆ. ಆದರೆ ಕಂಪನಿ ಹಣ ನೀಡುವು ಬದಲು ಗ್ರಾಹಕನಿಗೆ 10 ಪಿಕ್ಸೆಲ್ 3 ಸ್ಮಾರ್ಟ್ ಫೋನ್ ಗಳನ್ನು ನೀಡಿ ಅಚ್ಚರಿ ಮೂಡಿಸಿದೆ.

"ಪ್ರತಿ ದೊಡ್ಡ ಕಂಪೆನಿಯು ಗ್ರಾಹಕ ಸಮಸ್ಯೆಗಳನ್ನು ನ್ಯಾಯೋಚಿತವಾಗಿ ಪರಿಹರಿಸುತ್ತವೆ. ಆದರೆ ಗೂಗಲ್ ಹಣ ಮರುಪಾವತಿ ಮಾಡುವ ಬದಲು 9 ಸಾವಿರ ಡಾಲರ್ ಮೌಲ್ಯದ 10 ಫೋನ್ ಗಳನ್ನು ಗ್ರಾಹಕನಿಗೆ ನೀಡಿ ಗಮನ ಸೆಳೆದಿದೆ.

ಗ್ರಾಹಕ ತನ್ನ ದೋಷಯುಕ್ತ ಪಿಕ್ಸೆಲ್ 3 ಫೋನ್ ವಾಪಸ್ ನೀಡಿದ ನಂತರ ಗೂಗಲ್ ಕಂಪನಿ ಹಣ ವಾಪಸ್ ನೀಡಿಲ್ಲ. ಬದಲಾಗಿ 10 ಪಿಕ್ಸೆಲ್ ಫೋನ್ ಗಳನ್ನು ನೀಡಿದೆ ಎಂದು ಆಂಡ್ರಾಯ್ಡ್ ಪೋಲಿಸ್ ಗುರುವಾರ ವರದಿ ಮಾಡಿದೆ.

ವಿಶ್ವದ ಅತಿ ದೊಡ್ಡ ಟೆಕ್ ಸಂಸ್ಥೆ ಗೂಗಲ್ ಪಿಕ್ಸೆಲ್ ಫೋನ್ ಗಳನ್ನು ಮರಳಿಸುವಂತೆ ಗ್ರಾಹಕನಿಗೆ ಒತ್ತಡ ಹಾಕಿಲ್ಲ. ಆದರೆ ಗ್ರಾಹಕ ಮಾತ್ರ ಅವುಗಳನ್ನು ಮರಳಿಸಲು ಯತ್ನಿಸುತ್ತಿದ್ದಾರೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp