ಸ್ಯಾಮ್ ಸಂಗ್ ನಿಂದ ಫೋಲ್ಡೆಬಲ್​ ಸ್ಮಾರ್ಟ್​ ಫೋನ್ ಬಿಡುಗಡೆ, ಇದು ಮೊದಲ 5ಜಿ ಮೊಬೈಲ್

ದಕ್ಷಿಣ ಕೊರಿಯಾದ ಪ್ರತಿಷ್ಠಿತ ಸ್ಯಾಮ್ ​ಸಂಗ್​ ಕಂಪನಿ ಫೋಲ್ಡೆಬಲ್​ ಸ್ಮಾರ್ಟ್​ ಫೋನ್(ಮಡಚುವ ಫೋನ್) ಅನ್ನು ಗುರುವಾರ ​ಮಾರುಕಟ್ಟೆಗೆ...
ಫೋಲ್ಡೆಬಲ್​ ಸ್ಮಾರ್ಟ್​ ಫೋನ್
ಫೋಲ್ಡೆಬಲ್​ ಸ್ಮಾರ್ಟ್​ ಫೋನ್
ಸ್ಯಾನ್ ಫ್ರಾನ್ಸಿಸ್ಕೊ: ದಕ್ಷಿಣ ಕೊರಿಯಾದ ಪ್ರತಿಷ್ಠಿತ ಸ್ಯಾಮ್ ​ಸಂಗ್​ ಕಂಪನಿ ಫೋಲ್ಡೆಬಲ್​ ಸ್ಮಾರ್ಟ್​ ಫೋನ್(ಮಡಚುವ ಫೋನ್) ಅನ್ನು ಗುರುವಾರ ​ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸ್ಯಾಮ್ ಸಂಗ್ ಕಂಪನಿ ಇಂದು 4.6 ಇಂಚಿನ 'ಗ್ಯಾಲಕ್ಷಿ ಪೋಲ್ಡ್ ' ಎಂಬ 5 ಜಿ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಮೊದಲ 5ಜಿ ನೆಟ್ ವರ್ಕ್ ಮೊಬೈಲ್ ಎಂಬ ಗೌರವಕ್ಕೆ ಪಾತ್ರವಾಗಿದೆ.
ಸ್ಯಾಮ್​ಸಂಗ್​ ಕಂಪೆನಿಯ ‘ಗ್ಯಾಲಕ್ಷಿ ಪೋಲ್ಡೆಬಲ್​ ಸ್ಮಾರ್ಟ್​ ಫೋನ್‘​ ಎರಡು ಡಿಸ್​ಪ್ಲೇ ಹೊಂದಿದ್ದು, ಮೊದಲನೆಯ ಡಿಸ್​ಪ್ಲೇ4.6 ಇಂಚು, ಎರಡನೇ ಡಿಸ್​​ಪ್ಲೇ 7.3 ಇಂಚನ್ನು ಹೊಂದಿದ್ದು, ಇದನ್ನು ಪುಸ್ತಕ ರೀತಿ ಮಡಚಬಹುದಾಗಿದೆ.
ಗ್ಯಾಲಕ್ಷಿ ಪೊಲ್ಡೇಬಲ್ ಸ್ಮಾರ್ಟ್​ ಫೋನ್​ ಸ್ನ್ಯಾಪ್​ ಡ್ರಾಗನ್​ 855 SoC ಯಿಂದ ಕಾರ್ಯ ನಿರ್ವಹಿಸುತ್ತಿದೆ. 8 ಜಿಬಿ ರ್ಯಾಮ್​ ಹೊಂದಿದ್ದು, ಇದಕ್ಕೆ ಎರಡು ಬ್ಯಾಟರಿಯನ್ನು ಜೋಡಿಸಲಾಗಿದೆ.
ಏಪ್ರಿಲ್ 26 ರಿಂದ ಈ 'ಗ್ಯಾಲಕ್ಷಿ ಪೋಲ್ಡ್ ' ಮಾರುಕಟ್ಯೆಯಲ್ಲಿ ಲಭ್ಯವಿರಲಿದೆ. ಇದರ ಬೆಲೆ 1,980 ಅಮೆರಿಕನ್ ಡಾಲರ್ ಎಂದು ಕಂಪನಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com