ಚಂದ್ರಯಾನ-2 ಉಡ್ಡಯನಕ್ಕೆ ಮುನ್ನ ಬಾಹ್ಯಾಕಾಶ ಉತ್ಸಾಹಿಗಳು ಟ್ವಿಟ್ಟರ್ ನಲ್ಲಿ ಕ್ರಿಯಾಶೀಲ

ನಾಳೆ ಚಂದ್ರಗ್ರಹ-2 ಉಡಾವಣೆಗೊಳ್ಳಲಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜನರು ಕ್ರಿಯಾಶೀಲರಾಗಿದ್ದಾರೆ. ಇಸ್ರೊ ಸಂಸ್ಥೆಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಾಳೆ ಚಂದ್ರಗ್ರಹ-2 ಉಡಾವಣೆಗೊಳ್ಳಲಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜನರು ಕ್ರಿಯಾಶೀಲರಾಗಿದ್ದಾರೆ. ಇಸ್ರೊ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಅಷ್ಟೇ ಕ್ರಿಯಾಶೀಲರಾಗಿದ್ದಾರೆ.
ಇಸ್ರೊದ ಹಿಂದಿನ ಅಧ್ಯಕ್ಷರಿಂದ ಹಿಡಿದು ಯೋಜನೆಯ ಅಧಿಕಾರಿಗಳವರೆಗೆ ಚಂದ್ರಯಾನ-2 ಉಡಾವಣೆಯ ಬಗ್ಗೆ ಸಂವಾದಗಳು, ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ವಿನಿಮಯಗಳಲ್ಲಿ ತೊಡಗಿದ್ದಾರೆ.
#MoonEssential ಎಂಬ ಹ್ಯಾಶ್ ಟಾಗ್ ನೊಂದಿಗೆ ಅಂತರಿಕ್ಷ ತಿಳಿದುಕೊಳ್ಳುವ ಉತ್ಸಾಹಿಗಳು, ಚಂದ್ರಯಾನದ ಬಗ್ಗೆ ತಿಳಿದುಕೊಳ್ಳುವ ಬಯಕೆ ಹೊಂದಿದ್ದಾರೆ.
ರವೀಂದ್ರನ್ ಎಂಬ ಟ್ವಿಟ್ಟರ್ ಬಳಕೆದಾರರು ರಾಷ್ಟ್ರಧ್ವಜ, ಇಸ್ರೊ ವಿಜ್ಞಾನಿಗಳ ಪಟ್ಟಿ, ಅಗತ್ಯ ಬ್ಯಾಟರಿಗಳಿಗೆ ಸೋಲಾರ್ ಪ್ಯಾನಲ್ ಚಂದ್ರನಲ್ಲಿನ ಹವಾಮಾನಕ್ಕೆ ತಕ್ಕಂತೆ ಉಷ್ಣಾಂಶವನ್ನು ದಾಖಲು ಮಾಡಿಕೊಳ್ಳಲು ಅಗತ್ಯ ವಿದ್ಯುತ್ ಇತ್ಯಾದಿಗಳ ವಿಷಯಗಳನ್ನು ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com