ಚಂದ್ರಯಾನ-2: ಕೊನೆಗೂ ಕರಾಮತ್ತು ತೋರಿದ 'ತುಂಟ ಹುಡುಗ' ಜಿಎಸ್ ಎಲ್ ವಿ-ಎಂಕೆ-3 ರಾಕೆಟ್

ಎರಡು ಪ್ರಾಯೋಗಿಕ ಹಾಗೂ ಒಂದು ಯಶಸ್ವಿ ಕಾರ್ಯಾಚರಣೆಯ ನಂತರ, ಇಸ್ರೋದ ಮಹತ್ವಕಾಂಕ್ಷೆಯ ಚಂದ್ರಯಾನ-2 ಉಪಗ್ರಹವನ್ನು ಹೊತ್ತು ಗರ್ಜಿಸುತ್ತಾ ಆಗಸದತ್ತ ಚಿಮ್ಮಿದ...

Published: 22nd July 2019 12:00 PM  |   Last Updated: 22nd July 2019 04:54 AM   |  A+A-


ಚಂದ್ರಯಾನ 2

Posted By : VS VS
Source : Online Desk
ಶ್ರೀಹರಿಕೋಟ: ಎರಡು ಪ್ರಾಯೋಗಿಕ ಹಾಗೂ ಒಂದು ಯಶಸ್ವಿ ಕಾರ್ಯಾಚರಣೆಯ ನಂತರ, ಇಸ್ರೋದ ಮಹತ್ವಕಾಂಕ್ಷೆಯ ಚಂದ್ರಯಾನ-2 ಉಪಗ್ರಹವನ್ನು ಹೊತ್ತು ಗರ್ಜಿಸುತ್ತಾ ಆಗಸದತ್ತ ಚಿಮ್ಮಿದ ಜಿಎಸ್ ಎಲ್ ವಿ-ಎಂಕೆ-3 ಉಡ್ಡಯನ ನೌಕೆಯನ್ನು ಕಳೆದ ವರ್ಷವಷ್ಟೇ ಕಾರ್ಯಾರಂಭಗೊಳಿಸಲಾಗಿತ್ತು.

ಮುಂದಿನ ದಿನಗಳಲ್ಲಿ ಇಸ್ರೋ, ತನ್ನೆಲ್ಲಾ ಕನಸಿನ, ಸವಾಲಿನ ಹಾಗೂ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಬಳಸಲಿದೆ. 2022ರಲ್ಲಿ ಒಂದು ವಾರದ ಅವಧಿಗೆ ಮೂವರು ಗಗನಯಾತ್ರಿಗಳನ್ನು ಹೊತ್ತು ನಭಕ್ಕೆ ಹೊರಡಲಿರುವ ಮಾನವ ಸಹಿತ ಉಪಗ್ರಹದ ಯೋಜನೆಗೆ ಕೂಡ ಇದೇ ಉಡ್ಡಯನ ನೌಕೆ ಬಳಕೆಯಾಗಲಿದೆ. 
ಈ ವಾಹನ ಎರಡು ದೃಢವಾದ ಸ್ಟ್ರಾಪ್- ಆನ್, ಒಂದು ಲಿಕ್ವಿಡ್ ಬೂಸ್ಟರ್ ಹಾಗೂ ದೇಶೀಯವಾಗಿ ತಯಾರಿಸಲ್ಪಟ್ಟ ಸಂಕೀರ್ಣ ಕ್ರಯೋಜೆನಿಕ್ ಮೇಲ್ಭಾಗವನ್ನು ಒಳಗೊಂಡಿದೆ.

43.43 ಮೀ ಎತ್ತರದ ಜಿಎಸ್ ಎಲ್ ವಿ ಎಂ ಕೆ 3 ಅನ್ನು ನಾಲ್ಕು ಟನ್ ತೂಕದ ಉಪಗ್ರಹಗಳನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್ ಫರ್ ಆರ್ಬಿಟ್ (ಜಿಟಿಒ) ಅಥವಾ 10 ಟನ್ ತೂಕದ ಉಪಗ್ರಹವನ್ನು ಭೂಮಿಯ ಕೆಳ ಕಕ್ಷೆ (ಎಲ್ ಇಒ)ಗೆ ಕರೆದೊಯ್ಯುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಜಿಎಸ್ ಎಲ್ ವಿ ಎಂಕೆ -2 ಸಾಮರ್ಥ್ಯದ ದುಪ್ಪಟ್ಟಾಗಿದೆ.

ಜಿಎಸ್ ಎಲ್ -ಎಂಕೆ-2ರ ಮೊದಲ ಪ್ರಾಯೋಗಿಕ ಯೋಜನೆಯಾದ ಎಲ್ ವಿ ಎಂ 3-ಎಕ್ಸ್ /ಕೇರ್, 2014ರ ಡಿಸೆಂಬರ್ 18ರಂದು ಶ್ರೀಹರಿಕೋಟಾದಲ್ಲಿ ಯಶಸ್ವಿ ಉಡಾವಣೆಗೊಂಡಿತ್ತು. ಈ ವಾಹನ ಆಗಸಕ್ಕೇರಿ, ವಾತಾವರಣವನ್ನು ಪರಿಶೀಲಿಸಿ, ಪ್ಯಾರಾಚೂಟ್ ಗಳನ್ನು ನಿಗದಿಯಂತೆ ಕೆಳಗಿಸಿ, ಬಂಗಾಳ ಕೊಲ್ಲಿ ಸಮುದ್ರಕ್ಕೆ ನೆಗೆದಿತ್ತು ಎಂದು ಇಸ್ರೋ ತಿಳಿಸಿದೆ.

ಇದಾದ ನಂತರ ಜಿಎಸ್ ಎಲ್ ವಿ-ಎಂಕೆ 3ಯ ಮೊದಲ ಅಭಿವೃದ್ಧಿ ವಾಹನವನ್ನು ತಯಾರಿಸಲಾಗಿತ್ತು. ಜಿಎಸ್ ಎಲ್ ವಿ-ಎಂಕೆ 3-ಡಿ1 2017ರ ಜೂನ್ 5ರಂದು ಜಿಎಸ್ ಎಟಿ-19 ಉಪಗ್ರಹವನ್ನು ಯಶಸ್ವಿಯಾಗಿ ಜಿಟಿಒ ಕಕ್ಷೆಗೆ ಸೇರಿಸಿತ್ತು.

2018ರ ನವೆಂಬರ್ 14ರಂದು ಎರಡನೇ ಅಭಿವೃದ್ಧಿ ವಾಹನವಾದ ಜಿಎಸ್ ಎಲ್ ವಿ ಎಂಕೆ 3 ಡಿ-2 ಯಶಸ್ವಿಯಾದ ನಂತರ, ರೂಪುಗೊಂಡಿದ್ದೇ, ಈ 'ತುಂಟ ಹುಡುಗ' ಜಿಎಸ್ಎಲ್ವಿ ಎಂಕೆ 3.

ಈ ಹಿಂದೆ ಚಂದ್ರಯಾನ -1 ಉಪಗ್ರಹವನ್ನು ಪಿಎಸ್ ಎಲ್ ವಿ ವಾಹನದ ಮೂಲಕ ಇಸ್ರೋ ಯಶಸ್ವಿ ಉಡಾವಣೆ ಮಾಡಿತ್ತು. ಆದರೆ, ರಷ್ಯಾ ತನ್ನ ಉತ್ಪನ್ನಗಳನ್ನು ಒದಗಿಸಲು ಹಿಂದೇಟು ಹಾಕಿದಾಗ, ಇಸ್ರೋ ದೇಶಿ ತಂತ್ರಜ್ಞಾನ ಬಳಸಿ ವಾಹನ ತಯಾರಿಸಲು ಮುಂದಾಗಿತ್ತು.

ನಂತರ ಜಿಎಸ್ ಎಲ್ ವಿ ಎಂಕೆ-3 ವಾಹನವನ್ನು ತಯಾರಿಸಲು ಮುಂದಾಗಿತ್ತಾದರೂ, ಅದು ಎರಡು ಬಾರಿ ವಿಫಲಗೊಂಡಿತ್ತು. ನಂತರ, ಇಸ್ರೋ ಜಿಎಸ್ ಎಲ್ ಎಂಕೆ-2 ವಾಹನವನ್ನು ತಯಾರಿಸಿದ್ದು, ಇದು ನಾಲ್ಕು ಯಶಸ್ವಿ ಯೋಜನೆಗಳನ್ನು ಪೂರೈಸಿದೆ. ನಂತರ, ತಾಂತ್ರಿಕ ಬದಲಾವಣೆಗಳ ಮೂಲಕ ಜಿಎಸ್ ಎಲ್ ವಿ ಎಂಕೆ-3 ಅನ್ನು ತಯಾರಿಸಿತ್ತು. ಆದರೆ, ಇದು ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರಿಂದ ಅದಕ್ಕೆ 'ತುಂಟ ಹುಡುಗ' ಎಂದು ಹೆಸರಿಸಲಾಗಿತ್ತು.

ಚಂದ್ರಯಾನ-2 ಯೋಜನೆ ಯಶಸ್ವಿ ನಂತರ ಇಸ್ರೋ ಅಧ್ಯಕ್ಷ ಡಾ.ಸಿವನ್ ಈ ಯಶೋಗಾಥೆಯನ್ನು ಬಿಚ್ಚಿಟ್ಟಿದ್ದಾರೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp