ಚಂದ್ರಯಾನ-2ರ ಎರಡನೇ ಹಂತದ ಕಾರ್ಯಾಚರಣೆ ಯಶಸ್ವಿ

ಕಳೆದ 22ರಂದು ಉಡಾವಣೆಯಾದ ಚಂದ್ರಯಾನ-2 ಶುಕ್ರವಾರ ಯಶಸ್ವಿಯಾಗಿ ತನ್ನ ಎರಡನೇ ಭೂ ಸ್ಥಿರ ...

Published: 26th July 2019 12:00 PM  |   Last Updated: 26th July 2019 03:04 AM   |  A+A-


Chandrayana-2

ಚಂದ್ರಯಾನ-2

Posted By : SUD SUD
Source : PTI
ನವದೆಹಲಿ: ಕಳೆದ 22ರಂದು ಉಡಾವಣೆಯಾದ ಚಂದ್ರಯಾನ-2 ಶುಕ್ರವಾರ ತನ್ನ ಎರಡನೇ ಸುತ್ತಿನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ನಿಗದಿತ ಯೋಜನೆಯಂತೆ ಇಂದು ಮಧ್ಯರಾತ್ರಿ 1 ಗಂಟೆ 8 ನಿಮಿಷಕ್ಕೆ 883 ಸೆಕೆಂಡ್ ವೇಗದಲ್ಲಿ ಕಂಪ್ಯೂಟರ್ ಚಾಲನಾ ವ್ಯವಸ್ಥೆಯಿಂದ ಎರಡನೇ ಸುತ್ತಿನ ಭೂ ಸ್ಥಿರ ಕಕ್ಷೆ ಹೆಚ್ಚಿಸುವ ಕಾರ್ಯ ಪೂರ್ಣಗೊಳಿಸಿದೆ. ಭೂ ಸ್ಥಿರ ಕಕ್ಷೆಯಿಂದ ಉಪಗ್ರಹ ಈಗಾಗಲೇ 251*54829 ಕಿಲೋ ಮೀಟರ್ ಎತ್ತರದಲ್ಲಿ ಸಂಚರಿಸಿದೆ.

ಎಲ್ಲಾ ಅಂತರಿಕ್ಷ ನಿಯತಾಂಕಗಳು ಸಹಜವಾಗಿವೆ ಎಂದು ಇಸ್ರೊ ಟ್ವೀಟ್ ಮಾಡಿದೆ.
ಮೂರನೇ ಭೂ ಸ್ಥಿರ ಕಕ್ಷೆಯಿಂದ ನೌಕೆಯನ್ನು ಹೆಚ್ಚಿಸುವ ಕಾರ್ಯ ಇದೇ 29ರಂದು ಅಪರಾಹ್ನ 2.30ರಿಂದ 3.30ರ ನಡುವೆ ನಡೆಯಲಿದೆ. 

ಚಂದ್ರಯಾನ-2 ಚಂದ್ರನಲ್ಲಿಗೆ ಆಗಸ್ಟ್ 20ರಂದು ತಲುಪಲಿದೆ. ಚಂದ್ರಯಾನ-2 ಮೂರು ಭಾಗಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಕಕ್ಷೆಗಾಮಿ(2,379 ಕೆಜಿ ತೂಕದ 8 ಪೇಲೋಡ್), ಲ್ಯಾಂಡರ್ ವಿಕ್ರಮ್(1,471 ಕೆಜಿ ತೂಕದ 4 ಪೇಲೋಡ್), ರೋವರ್ ಪ್ರಜ್ಞ್ಯಾನ್(27 ಕೆಜಿ ತೂಕದ ಎರಡು ಪೇಲೋಡ್) ಗಳನ್ನು ಹೊಂದಿದೆ.

ಚಂದ್ರಯಾನ-2 ಮೊದಲ ಸುತ್ತಿನ ಭೂ ಕಕ್ಷೆ ಹೆಚ್ಚಿಸುವ ಕಾರ್ಯ ಕಳೆದ 24ರಂದು ಪೂರ್ಣಗೊಳಿಸಿತ್ತು. ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈ ಮೇಲೆ ಸೆಪ್ಟೆಂಬರ್ 7ರಂದು ಇಳಿಯಲಿದೆ. 
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp