ಮಂಗಳ ಗ್ರಹದ ಅನ್ವೇಷಣೆ ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ!

ಮಂಗಳ ಯಾನ ಯಶಸ್ವಿಯಾದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ 7 ವೈಜ್ಞಾನಿಕ ಅನ್ವೇಷಣೆಗಳಿಗೆ ತಯಾರಿ ನಡೆಸಿದೆ. ಈ ಪೈಕಿ ಶುಕ್ರಯಾನವೂ ಒಂದು.

Published: 18th May 2019 12:00 PM  |   Last Updated: 18th May 2019 05:14 AM   |  A+A-


After Mars, Venus on isro's planetary mission list

ಮಂಗಳ ಗ್ರಹದ ಅನ್ವೇಷಣೆ ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ!

Posted By : SBV SBV
Source : Online Desk
ಶ್ರೀಹರಿಕೋಟಾ: ಮಂಗಳ ಯಾನ ಯಶಸ್ವಿಯಾದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ 7 ವೈಜ್ಞಾನಿಕ ಅನ್ವೇಷಣೆಗಳಿಗೆ ತಯಾರಿ ನಡೆಸಿದೆ. ಈ ಪೈಕಿ ಶುಕ್ರಯಾನವೂ ಒಂದು. 

ಎಲ್ಲವೂ ಅಂದುಕೊಂಡಂತೆ ನಡೆದರೆ 2023 ರ ವೇಳೆಗೆ ಇಸ್ರೋ ಶುಕ್ರಯಾನ ನಡೆಸಲಿದೆ. 

ಶುಕ್ರಯಾನಕ್ಕೆ ಬಳಕೆಯಾಗುವ ನೌಕೆಯಲ್ಲಿ 20 ಕ್ಕೂ ಹೆಚ್ಚು ಪೇಲೋಡ್ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 

ಶುಕ್ರ ಗ್ರಹ ಗಾತ್ರ, ಗುರುತ್ವಾಕರ್ಷಣೆ ಸೇರಿದಂತೆ ಭೂಮಿಯೊಂದಿಗೆ ಕೆಲವು ಸಾಮ್ಯತೆಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಶುಕ್ರ ಗ್ರಹದ ಮೇಲ್ಮೈ, ವಾತಾವರಣ  ಅಧ್ಯಯನ ಮಹತ್ವ ಪಡೆದುಕೊಳ್ಳಲಿದೆ. 

ಶುಕ್ರಯಾನದ ಚಿಂತನೆಗೆ ವಿಶ್ವಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp