ಚಂದ್ರಯಾನ-2 ವೈಫಲ್ಯದ ನಂತರ ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಹಸಕ್ಕೆ ಇಸ್ರೊ ಸಜ್ಜು!

ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿಸುವ ತನ್ನ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ವಿಫಲವಾದ ನಂತರ ಮುಂದಿನ ವರ್ಷಾಂತ್ಯಕ್ಕೆ ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಯೋಜನೆ ಕೈಗೊಂಡಿದೆ ಎಂದು ಇಸ್ರೊ ಹೇಳಿದೆ.
ಚಂದ್ರಯಾನ-2 ನ ಲ್ಯಾಂಡರ್ ವಿಕ್ರಂ
ಚಂದ್ರಯಾನ-2 ನ ಲ್ಯಾಂಡರ್ ವಿಕ್ರಂ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿಸುವ ತನ್ನ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ವಿಫಲವಾದ ನಂತರ ಮುಂದಿನ ವರ್ಷಾಂತ್ಯಕ್ಕೆ ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಯೋಜನೆ ಕೈಗೊಂಡಿದೆ ಎಂದು ಇಸ್ರೊ ಹೇಳಿದೆ.


ಇದಕ್ಕಾಗಿ ಇಸ್ರೊ, ತಿರುವನಂತಪುರ ಮೂಲದ ವಿಕ್ರಮ್ ಸಾರಾಬಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಎಸ್ ಸೋಮನಾಥ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಕೇಂದ್ರ ಇಸ್ರೊದ ಎಲ್ಲಾ ಉಡಾವಣಾ ವಾಹಕ ಯೋಜನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅದು ಮುಂದಿನ ವರ್ಷ ನವೆಂಬರ್ ನಲ್ಲಿ ಚಂದ್ರಯಾನ-3 ಯೋಜನೆಯನ್ನು ಕೈಗೊಳ್ಳಲಿದೆ ಎಂದು ಇಸ್ರೊ ವರದಿ ಹೇಳಿದೆ.


ಸೋಮನಾಥ್ ಅವರ ನೇತೃತ್ವದ ತಂಡ ವರದಿ ಸಿದ್ದಪಡಿಸುತ್ತಿದ್ದು ಅದಕ್ಕೆ ಮುಂದಿನ ವರ್ಷಾಂತ್ಯದೊಳಗೆ ಯೋಜನೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಇಸ್ರೊದ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಬಾರಿಯ ಯೋಜನೆಯಲ್ಲಿ ರೋವರ್, ಲ್ಯಾಂಡರ್ ಮತ್ತು ಲ್ಯಾಂಡಿಂಗ್ ಕಾರ್ಯನಿರ್ವಹಣೆ ಮೇಲೆ ಹೆಚ್ಚಿನ ಗಮನ ನೀಡಲಿದ್ದು, ಚಂದ್ರಯಾನ-2 ಯೋಜನೆಯಲ್ಲಿ ಏನೇನು ಕೊರತೆಗಳಾಗಿದ್ದವೋ ಅವುಗಳನ್ನು ಸರಿಪಡಿಸಲಾಗುವುದು ಎಂದು ಇಸ್ರೊ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com