ಪ್ರಧಾನಿ ಮೋದಿ ನಮ್ಮೆಲ್ಲರ ಸ್ಪೂರ್ತಿಯ ಮೂಲ: ಇಸ್ರೋ ಅಧ್ಯಕ್ಷ ಕೆ.ಶಿವನ್

ಚಂದ್ರಯಾನ-2 ಲ್ಯಾಂಡರ್ ಸಂಪರ್ಕ ಕಳೆದುಕೊಂಡಿರುವುದರ ಬಗ್ಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಮಾತನಾಡಿದ್ದು, ಇನ್ನೂ 14 ದಿನಗಳ ಕಾಲ ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತೇವೆ ಎಂದು ಹೇಳಿದ್ದಾರೆ. 

Published: 07th September 2019 09:09 PM  |   Last Updated: 07th September 2019 09:21 PM   |  A+A-


PM Modi is a source of inspiration and support for us: ISRO chief K Sivan

 ಪ್ರಧಾನಿ ಮೋದಿ ನಮ್ಮೆಲ್ಲರ ಸ್ಪೂರ್ತಿಯ ಮೂಲ: ಇಸ್ರೋ ಅಧ್ಯಕ್ಷ ಕೆ.ಶಿವನ್

Posted By : Srinivas Rao BV
Source : Online Desk

14 ದಿನಗಳ ಕಾಲ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಯತ್ನ: ಕೆ.ಶಿವನ್

ನವದೆಹಲಿ: ಚಂದ್ರಯಾನ-2 ಲ್ಯಾಂಡರ್ ಸಂಪರ್ಕ ಕಳೆದುಕೊಂಡಿರುವುದರ ಬಗ್ಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಮಾತನಾಡಿದ್ದು, ಇನ್ನೂ 14 ದಿನಗಳ ಕಾಲ ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತೇವೆ ಎಂದು ಹೇಳಿದ್ದಾರೆ. 

ಡಿಡಿ ವಾಹಿನಿಯೊಂದಿಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಕೊನೆಯ ಹಂತವನ್ನು ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ, ಆ ಹಂತದಲ್ಲಿ ಲ್ಯಾಂಡರ್ ಜೊತೆ ಸಂಪರ್ಕ ಕಡಿದು ಹೋಯಿತು. ನಂತರ ಮತ್ತೆ ಸಂಪರ್ಕ ಸಾಧಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಶಿವನ್ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ 
 ಪ್ರಧಾನಿ ನಮ್ಮೆಲ್ಲರ ಸ್ಪೂರ್ತಿ ಹಾಗೂ ಬೆಂಬಲದ ಮೂಲ. ವಿಜ್ಞಾನವನ್ನು ಫಲಿತಾಂಶಗಳಿಗಾಗಿಯಷ್ಟೇ ನೋಡಬಾರದು, ನಿರಂತರ ಪ್ರಯೋಗ ಫಲಿತಾಂಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವಿಶೇಷ ಅಂಶವನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದನ್ನು ನಾನು ಗಮನಿಸಿದೆ ಎಂದು ಹೇಳಿದ್ದಾರೆ. 

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp