ಇಸ್ರೊ ಮತ್ತೊಂದು ಸಾಧನೆ:'ಜಿಸ್ಯಾಟ್-30' ಉಪಗ್ರಹ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವದೇಶಿ ತಂತ್ರಜ್ಞಾನದ ಮೂಲಕ ನಿರ್ಮಿಸಿರುವ ಸುಧಾರಿತ, ಆಧುನಿಕ ಸಂವಹನ ಉಪಗ್ರಹ ‘ಜಿಸ್ಯಾಟ್-30’  ಫ್ರಾನ್ಸ್ ನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಸುಕಿನ ಜಾವ ಯಶಸ್ವಿಯಾಗಿ ಉಡಾವಣೆಯಾಗಿದೆ. 
ಇಸ್ರೊ ಮತ್ತೊಂದು ಸಾಧನೆ:'ಜಿಸ್ಯಾಟ್-30' ಉಪಗ್ರಹ ಯಶಸ್ವಿ ಉಡಾವಣೆ

ಗಯಾನಾ(ಫ್ರಾನ್ಸ್): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವದೇಶಿ ತಂತ್ರಜ್ಞಾನದ ಮೂಲಕ ನಿರ್ಮಿಸಿರುವ ಸುಧಾರಿತ, ಆಧುನಿಕ ಸಂವಹನ ಉಪಗ್ರಹ ‘ಜಿಸ್ಯಾಟ್-30’  ಫ್ರಾನ್ಸ್ ನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಸುಕಿನ ಜಾವ ಯಶಸ್ವಿಯಾಗಿ ಉಡಾವಣೆಯಾಗಿದೆ.


ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯಲ್ಲಿರುವ ಕೌರೌನಲ್ಲಿರುವ ಎರೇನ್ ಉಡ್ಡಯನ ಕಾಂಪ್ಲೆಕ್ಸ್ ನಿಂದ ಭಾರತೀಯ ಕಾಲಮಾನದ ಪ್ರಕಾರ, ಇಂದು ನಸುಕಿನ ಜಾವ 2.35ರ ವೇಳೆಗೆ ‘ಎರೇನ್ 5’ ಎಂಬ ರಾಕೆಟ್ ವಾಹಕದ ಮೂಲಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.


ಉಡಾವಣೆಯ ಬಳಿಕ 38 ನಿಮಿಷ 25 ಸೆಕೆಂಡುಗಳು ಜಿಸ್ಯಾಟ್ -30 ಅರಿಯೇನ್ 5 ಮೇಲಿನ ಹಂತದಿಂದ ಅಂಡಾಕಾರದ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಬೇರ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com