ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ: ನಾಸಾ ಮತ್ತು ಸ್ಪೇಸ್-ಎಕ್ಸ್ ಮಿಷನ್ ಗೆ ಇಸ್ರೋ ಅಭಿನಂದೆನೆ

ಮಾನವಸಹಿತ ಬಾಹ್ಯಾಕಾಶನೌಕೆ ಉಡಾವಣೆಗಾಗಿ ನಾಸಾ ಮತ್ತು ಸ್ಪೇಸ್‌-ಎಕ್ಸ್‌ ಮಿಷನ್‍ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಅಭಿನಂದಿಸಿದ್ದು, ಈ ಕಾರ್ಯಕ್ರಮ 'ಐತಿಹಾಸಿಕ' ಎಂದು ಬಣ್ಣಿಸಿದೆ.
ಇಸ್ರೋ
ಇಸ್ರೋ

ಬೆಂಗಳೂರು: ಮಾನವಸಹಿತ ಬಾಹ್ಯಾಕಾಶನೌಕೆ ಉಡಾವಣೆಗಾಗಿ ನಾಸಾ ಮತ್ತು ಸ್ಪೇಸ್‌-ಎಕ್ಸ್‌ ಮಿಷನ್‍ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಅಭಿನಂದಿಸಿದ್ದು, ಈ ಕಾರ್ಯಕ್ರಮ 'ಐತಿಹಾಸಿಕ' ಎಂದು ಬಣ್ಣಿಸಿದೆ.

2011 ರ ನಂತರ ಐತಿಹಾಸಿಕ ಮೊದಲ ಮಾನವಸಹಿತ ಬಾಹ್ಯಾಕಾಶನೌಕೆ ಉಡಾವಣೆಗಾಗಿ ನಾಸಾ ಮತ್ತು ಸ್ಪೇಸ್‌-ಎಕ್ಸ್‌ಗೆ ಅಭಿನಂದನೆಗಳು. ಇದು ಅತ್ಯದ್ಭುತ ಕಾರ್ಯ! ಎಂದು ಇಸ್ರೋ ಟ್ವೀಟ್ ಮಾಡಿದೆ.

ನಾಸಾದ ಇಬ್ಬರು ಗಗನಯಾತ್ರಿಗಳನ್ನೊಳಗೊಂಡ ಸ್ಪೇಸ್‌-ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿತ್ತು. ಐತಿಹಾಸಿಕ ಉಡಾವಣೆಯ ನಂತರ ನೌಕೆಯು ಭಾನುವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಯಶಸ್ವಿಯಾಗಿ ತಲುಪಿತ್ತು.

ಈ ಯಾನವು ವಾಣಿಜ್ಯ ಬಾಹ್ಯಾಕಾಶ ಯಾನದಲ್ಲಿ ಹೊಸ ಯುಗದ ಉದಯವನ್ನು ಬಿಂಬಿಸುತ್ತದೆ.

ಕಳೆದೊಂದು ದಶಕದಲ್ಲಿ ಮೊದಲ ಬಾರಿಗೆ ಅಮೆರಿಕ ನೆಲದಿಂದ ಮಾನವರು ಕಕ್ಷೆಗೆ ಸೇರಿರುವುದು ಐತಿಹಾಸಿಕವೆನಿಸಿದೆ.

ನಾಸಾ ಗಗನಯಾತ್ರಿಗಳಾದ ಬಾಬ್ ಬೆಹ್ನ್ ಕೆನ್‍ ಮತ್ತು ಡೌಗ್ ಹರ್ಲಿ ಅವರನ್ನು ಹೊತ್ತ ಸ್ಪೇಸ್‌-ಎಕ್ಸ್ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಥಳೀಯ ಕಾಲಮಾನ ಶನಿವಾರ ಮಧ್ಯಾಹ್ನ 3.22ಕ್ಕೆ ಫಾಲ್ಕನ್ 9 ರಾಕೆಟ್‌ನಿಂದ ಉಡಾವಣೆಗೊಂಡಿತ್ತು.

ಭಾರತವೂ ತನ್ನ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ 'ಗಗನಯಾನ’ಕ್ಕೆ ಸಿದ್ಧತೆ ನಡೆಸುತ್ತಿದೆ.

10,000 ಕೋಟಿ ರೂ.ಮೊತ್ತದ ಮಹತ್ವಾಕಾಂಕ್ಷೆಯ ಯೋಜನೆಯನ್ನು 2022 ರಲ್ಲಿ ಆರಂಭಿಸುವ ನಿರೀಕ್ಷೆಯಿದೆ.

ಭಾರತೀಯ ವಾಯುಪಡೆಯ ನಾಲ್ವರು ಯುದ್ಧವಿಮಾನ ಪೈಲಟ್‌ಗಳು ಸದ್ಯ ಮಾಸ್ಕೋದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗಗನಯಾನ ಕಾರ್ಯಕ್ರಮಕ್ಕೆ ಇವರು ಸಂಭಾವ್ಯ ಗಗನಯಾತ್ರಿಗಳಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com