ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಉಡಾವಣೆಗೆ ಇಸ್ರೋ ಕ್ಷಣಗಣನೆ

ನಾಳೆ (ನವೆಂಬರ್ 7) ರಂದು ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್ -01 ರ ಉಡಾವಣೆಗೆ ಕ್ಷಣಗಣನೆ ಪ್ರಾರಂಬವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೇಳಿದೆ.
ಪಿಎಸ್‌ಎಲ್‌ವಿ-ಸಿ 49
ಪಿಎಸ್‌ಎಲ್‌ವಿ-ಸಿ 49

ಬೆಂಗಳೂರು: ನಾಳೆ (ನವೆಂಬರ್ 7) ರಂದು ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್ -01 ರ ಉಡಾವಣೆಗೆ ಕ್ಷಣಗಣನೆ ಪ್ರಾರಂಬವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೇಳಿದೆ. ಕೊರೋನಾ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಇಸ್ರೋದ ಅಂತರಿಕ್ಷ ಕಾರ್ಯಕ್ರಮಗಳು ಸ್ಥಗಿತವಾಗಿದ್ದು ಇದೀಗ ನಾಳಿನಿಂದ ಮತ್ತೆ ಚಾಲನೆ ಸಿಕ್ಕಲಿದೆ. ಶನಿವಾರ ಮಧ್ಯಾಹ್ನ 3:02 ಕ್ಕೆ ಪಿಎಸ್​ಎಲ್​ವಿ-ಸಿ49 ವಾಹನದೊಡನೆ  ಇಒಎಸ್ -01,ಇತರೆ ಒಂಬತ್ತು ಅಂತರರಾಷ್ಟ್ರೀಯ ಗ್ರಾಹಕರ ಉಪಗ್ರಹಗಳು ಸೇರಿ ಹತ್ತು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸಲಿದೆ.

ಪಿಎಸ್‌ಎಲ್‌ವಿ-ಸಿ 49 / ಇಒಎಸ್ -01 ಮಿಷನ್: 

ಪಿಎಸ್‌ಎಲ್‌ವಿ-ಸಿ 49 / ಇಒಎಸ್ -01 ಮಿಷನ್ ಉಡಾವಣೆಯ ಕ್ಷಣಗಣನೆ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ(ಎಸ್‌ಡಿಎಸ್‌ಸಿ)ದಲ್ಲಿ ಶುಕ್ರವಾರ ಮಧ್ಯಾಹ್ನ 1:02 ಗಂ (ಐಎಸ್‌ಟಿ) ಯಿಂದ ಪ್ರಾರಂಭವಾಯಿತು” ಎಂದು ಇಸ್ರೋ ತಿಳಿಸಿದೆ.

ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 51 ನೇ ಮಿಷನ್ (ಪಿಎಸ್ಎಲ್ ವಿಸಿ 49) ನಲ್ಲಿ ಇಒಎಸ್ -01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಒಂಬತ್ತು ಅಂತರರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಸಾಗಿಸಲಿದೆ.

ಇಒಎಸ್ -01 ಭೂ ವೀಕ್ಷಣಾ ಉಪಗ್ರಹವಾಗಿದ್ದು, ಕೃಷಿ, ಗ್ರಾಹಕ ಅರಣ್ಯ ಮತ್ತು ವಿಪತ್ತು ನಿರ್ವಹಣೆ ಕಾರ್ಯಗಳಿಗೆ ಉದ್ದೇಶಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಗ್ರಾಹಕ ಉಪಗ್ರಹಗಳನ್ನು ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ನೊಂದಿಗೆ ವಾಣಿಜ್ಯ ಒಪ್ಪಂದದಡಿಯಲ್ಲಿ ಉಡಾವಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಗ್ರಾಹಕ ಉಪಗ್ರಹಗಳಲ್ಲಿ ತಂತ್ರಜ್ಞಾನ ಪ್ರದರ್ಶನಕ್ಕಾಗಿ ಲಿಥುವೇನಿಯಾದಿಂದ ಒಂದು, ಮತ್ತು ಲಕ್ಸೆಂಬರ್ಗ್ ಮತ್ತು ಯುಎಸ್ಎಯಿಂದ ತಲಾ ನಾಲ್ಕು ಸಮುದ್ರ ಕಾರ್ಯಾಚರಣೆಗೆ ಸಂಬಂಧಿಸಿದ ಉಪಗ್ರಹಗಳು ಹಾಗೂ ಮಲ್ಟಿ-ಮಿಷನ್ ರಿಮೋಟ್ ಸೆನ್ಸಿಂಗ್ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com