ಕೋವಿಡ್-19 ಲಸಿಕೆಯ ಬಗ್ಗೆ ಯಾವುದು ನಕಲಿ ಸುದ್ದಿ, ಯಾವುದು ಅಸಲಿ ಎಂಬುದನ್ನು ಹೇಳಲಿದೆ ಟ್ವಿಟರ್!
ನಿಮಗೆಲ್ಲಾ ಡೊನಾಲ್ಡ್ ಟ್ರಂಪ್ ಚುನಾವಣೆ ಸೋತರೂ ಅವರು ಮಾಡುತ್ತಿದ್ದ ಗೆಲುವಿನ ಪ್ರತಿಪಾದನೆಯನ್ನು ತಿರಸ್ಕರಿಸಿ ಇದು ನಕಲಿ ಎಂದು ಟ್ವಿಟರ್ ಲೇಬಲ್ ಹಾಕುತ್ತಿದ್ದದ್ದು ನೆನಪಿದೆಯಲ್ಲವೇ?
Published: 17th December 2020 04:49 PM | Last Updated: 17th December 2020 04:49 PM | A+A A-

ಟ್ವಿಟರ್ ಚಿತ್ರ
ನವದೆಹಲಿ: ನಿಮಗೆಲ್ಲಾ ಡೊನಾಲ್ಡ್ ಟ್ರಂಪ್ ಚುನಾವಣೆ ಸೋತರೂ ಅವರು ಮಾಡುತ್ತಿದ್ದ ಗೆಲುವಿನ ಪ್ರತಿಪಾದನೆಯನ್ನು ತಿರಸ್ಕರಿಸಿ ಇದು ನಕಲಿ ಎಂದು ಟ್ವಿಟರ್ ಲೇಬಲ್ ಹಾಕುತ್ತಿದ್ದದ್ದು ನೆನಪಿದೆಯಲ್ಲವೇ?
ಅಂತಹದ್ದೇ ಕ್ರಮವನ್ನು ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಮಾಡುವುದಕ್ಕೂ ಟ್ವಿಟರ್ ಮುಂದಾಗಿದೆ. ಕೋವಿಡ್-19 ಲಸಿಕೆ ಬಗ್ಗೆ ನಕಲಿ ಸುದ್ದಿಗಳು, ದಾರಿ ತಪ್ಪಿಸುವ ಸುದ್ದಿಗಳು ಹೇರಳವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಆದರೆ ಮುಂದಿನ ವಾರದಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ವಿಟರ್ ಕ್ರಮ ಕೈಗೊಳ್ಳಲಿದ್ದು ಆ ಸುದ್ದಿಯ ಮೇಲೆ ಲೇಬಲ್ ಹಾಕಲಿದೆ.
ತಂತ್ರಜ್ಞಾನ ಹಾಗೂ ಮಾನವ ಸಮೀಕ್ಷೆಯ ಸಹಾಯದಿಂದ ಟ್ವಿಟರ್ ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲಿದೆ. 2021 ರ ಪ್ರಾರಂಭದಿಂದ ಟ್ವಿಟರ್ ನಕಲಿ ಸುದ್ದಿಗಳ ಮೇಲೆ ಲೇಬಲ್ ಹಾಕುವ ಕೆಲಸವನ್ನು ಮಾಡಲಿದೆ.