ಚಂದ್ರನಿಂದ 1,731 ಗ್ರಾಮ್ ನಷ್ಟು ಮಾದರಿಗಳನ್ನು ತಂದ ಚೀನಾದ ಚಾಂಗ್'ಇ -5 ಪ್ರೋಬ್

ಈ ವಾರವಷ್ಟೇ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದ ಚೀನಾದ ಚಾಂಗ್'ಇ-5 ಪ್ರೋಬ್ ಚಂದ್ರನ ಕಕ್ಷೆಯಿಂದ ಬರೊಬ್ಬರಿ 1,731 ಗ್ರಾಮ್ ನಷ್ಟು ಸ್ಯಾಂಪಲ್ ಗಳನ್ನು ಹೊತ್ತು ತಂದಿದೆ. 
ಚಂದ್ರನಿಂದ 1,731 ಗ್ರಾಮ್ ನಷ್ಟು ಮಾದರಿಗಳನ್ನು ತಂದ ಚೀನಾದ ಚಾಂಗ್'ಇ -5 ಪ್ರೋಬ್
ಚಂದ್ರನಿಂದ 1,731 ಗ್ರಾಮ್ ನಷ್ಟು ಮಾದರಿಗಳನ್ನು ತಂದ ಚೀನಾದ ಚಾಂಗ್'ಇ -5 ಪ್ರೋಬ್

ಬೀಜಿಂಗ್: ಈ ವಾರವಷ್ಟೇ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದ ಚೀನಾದ ಚಾಂಗ್'ಇ-5 ಪ್ರೋಬ್ ಚಂದ್ರನ ಕಕ್ಷೆಯಿಂದ ಬರೊಬ್ಬರಿ 1,731 ಗ್ರಾಮ್ ನಷ್ಟು ಸ್ಯಾಂಪಲ್ ಗಳನ್ನು ಹೊತ್ತು ತಂದಿದೆ. 

ಚೀನಾದ ಬಾಹ್ಯಾಕಾಶ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸ್ಯಾಂಪಲ್ ಗಳನ್ನು ಚೀನಾದ ಸಂಶೋಧಕ ತಂಡಕ್ಕೆ ಹಸ್ತಾಂತರಿಸಲಾಗಿದೆ.

ಚೀನಾದ ಚಾಂಗ್'ಇ-5 ಪ್ರೋಬ್ ಇನ್ನರ್ ಮಂಗೋಲಿಯಾದ ಅಟಾನಾಮಸ್ ಪ್ರದೇಶದಲ್ಲಿ ಭೂಸ್ಪರ್ಶವಾಗಿದೆ. ಚೀನಾದ ಮೂರು ಹಂತಗಳ ಚಂದ್ರನ ಅನ್ವೇಷಣೆಯ ಯೋಜನೆಯ ಭಾಗದಲ್ಲಿ ಇದೂ ಸಹ ಒಂದಾಗಿದ್ದು 2004 ರಲ್ಲೇ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು. ಚಂದ್ರನ ಮೇಲ್ಮೈ ಮೇಲೆ ಇಳಿದಿರುವ ಮೂರನೇ ಬಾಹ್ಯಾಕಾಶ ನೌಕೆ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com