ಆಮ್ಲಜನಕವಿಲ್ಲದೆ ಬದುಕುವ ಪ್ರಾಣಿಯನ್ನು ಕಂಡುಹಿಡಿದ ವಿಜ್ಞಾನಿಗಳು

ವಿಜ್ಞಾನಿಗಳು ಆಮ್ಲಜನಕವಿಲ್ಲದೆ ಬದುಕುವ ಪ್ರಾಣಿಯೊಂದನ್ನು ಕಂಡುಹಿಡಿದಿದ್ದು, ಅದಕ್ಕೆ ಆಮ್ಲಜನಕದ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.

Published: 27th February 2020 03:01 PM  |   Last Updated: 27th February 2020 03:01 PM   |  A+A-


oxgn

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ಜೆರುಸಲೆಮ್: ವಿಜ್ಞಾನಿಗಳು ಆಮ್ಲಜನಕವಿಲ್ಲದೆ ಬದುಕುವ ಪ್ರಾಣಿಯೊಂದನ್ನು ಕಂಡುಹಿಡಿದಿದ್ದು, ಅದಕ್ಕೆ ಆಮ್ಲಜನಕದ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.

ಅತ್ಯಂತ ಸಣ್ಣ ಅಂದರೆ, 10ಕ್ಕಿಂತಲೂ ಕಡಿಮೆ ಕೋಶಗಳುಳ್ಳ ಸಣ್ಣ ಪರಾವಲಂಬಿ ಹೆನ್ನೆಗುಯಾ ಸಾಲ್ಮಿನಿಕೋಲಾ ಎಂಬ ಜೀವಿಯು ಸಾಲ್ಮನ್ ಸ್ನಾಯುಗಳಲ್ಲಿ ವಾಸಿಸುತ್ತಿದ್ದು, ಅದು ಬದುಕುಳಿಯಲು ಆಮ್ಲಜನಕದ ಅಗತ್ಯ ಇಲ್ಲ ಎಂದು ಪಿಎನ್‌ಎಎಸ್‌ ಜರ್ನಲ್ ನಲ್ಲಿ ತಿಳಿಸಲಾಗಿದೆ.

ಮಂಗಳವಾರ ಪ್ರಕಟವಾದ ಸಂಶೋಧನೆಯ ಪ್ರಕಾರ, ಜೆಲ್ಲಿ ಮೀನು ಮತ್ತು ಹವಳಗಳ ಸಂಬಂಧಿಯಾಗಿರುವ ಈ ಜೀವಿಯು ವಿಕಸನಗೊಳ್ಳುತ್ತ ಶಕ್ತಿಯನ್ನು ಉತ್ಪಾದಿಸಲು ಉಸಿರಾಟಕ್ಕೆ ಆಮ್ಲಜನಕವನ್ನು ಸೇವಿಸುವುದನ್ನು ಬಿಟ್ಟುಬಿಟ್ಟಿತು - ಅಥವಾ ಆಮ್ಲಜನಕರಹಿತವಾಯಿತು. "ಉಸಿರಾಟವು ಪ್ರಾಣಿಗಳಲ್ಲಿ ಸರ್ವತ್ರ ಎಂದು ಭಾವಿಸಲಾಗಿತ್ತು, ಆದರೆ ಈಗ ನಾವು ಇದು ಸರ್ವತ್ರವಲ್ಲ ಎಂದು ದೃಢಪಡಿಸಿದೆ," ಎಂದು ಇಸ್ರೇಲ್‌ನ ಟೆಲ್ ಅವೀವ್ ವಿಶ್ವವಿದ್ಯಾಲಯದ (ಟಿಎಯು) ಪ್ರಾಧ್ಯಾಪಕ ಡೊರೊಥಿ ಹುಚೋನ್ ಹೇಳಿದ್ದಾರೆ.

ಆಮ್ಲಜನಕ ರಹಿತ ಪರಿಸರದಲ್ಲಿನ ಶಿಲೀಂಧ್ರಗಳು, ಅಮೀಬಾ ಅಥವಾ ಸಿಲಿಯೇಟ್ ವಂಶಾವಳಿಯಂತಹ ಇತರೆ ಕೆಲವು ಜೀವಿಗಳು ಕಾಲಾನಂತರದಲ್ಲಿ ಉಸಿರಾಡುವ ಸಾಮರ್ಥ್ಯವನ್ನು ಕಳೆದುಕೊಂಡಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. 
ಹೊಸ ಅಧ್ಯಯನವು ಪ್ರಾಣಿಗಳಲ್ಲೂ ಇದು ಸಂಭವಿಸಬಹುದು ಎಂದು ತೋರಿಸುತ್ತದೆ - ಬಹುಶಃ ಪರಾವಲಂಬಿಗಳು ಆಮ್ಲಜನಕರಹಿತ ವಾತಾವರಣದಲ್ಲಿ ವಾಸಿಸುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ.

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp