ಬಾಹ್ಯಾಕಾಶದಲ್ಲಿಯೂ ಸಿಕ್ಕತ್ತೆ ಇಡ್ಲಿ ಸಾಂಬಾರ್, ಹಲ್ವಾ! ಮಿಷನ್ ಗಗನಯಾನ್ ಗಾಗಿ ತಯಾರಾದ ವಿಶೇಷ ಮೆನು ಹೀಗಿದೆ

: ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ 'ಗಗನಯಾನ್' ಗಾಗಿ ಬಾಹ್ಯಾಕಾಶಕ್ಕೆ ತೆರಳಲು ಇದಾಗಲೇ ನಾಲ್ವರು ಗಗನಯಾನಿಗಳು ಆಯ್ಕೆಯಾಗಿದ್ದಾರೆ. ಇದೀಗ ಇಲ್ಲಿಂದ ತೆರಳುವ ಗಗನಯಾನಿಗಳಿಗೆ ಬಾಹ್ಯಾಕಾಶದಲ್ಲಿ ಸಹ ಭಾರತೀಯ ಆಹಾರ, ಪಾನೀಯಗಳನ್ನು ಸವಿಯುವ ಅವಕಾಶ ಲಭಿಸಲಿದೆ ಎಂಬ ಮಾಹಿತಿ ಲಭಿಸಿದೆ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರ ತಿನಿಸುಗಳನ್ನೇ ಊಟಕ್ಕೆ ಬಳಸಲು ಕ

Published: 07th January 2020 03:07 PM  |   Last Updated: 07th January 2020 03:07 PM   |  A+A-


ಮಿಷನ್ ಗಗನಯಾನ್ ಗಗನಯಾತ್ರಿಗಳಿಗೆ ತಯಾರಾದ ಮೆನು

Posted By : Raghavendra Adiga
Source : ANI

ಬೆಂಗಳೂರು: ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ 'ಗಗನಯಾನ್' ಗಾಗಿ ಬಾಹ್ಯಾಕಾಶಕ್ಕೆ ತೆರಳಲು ಇದಾಗಲೇ ನಾಲ್ವರು ಗಗನಯಾನಿಗಳು ಆಯ್ಕೆಯಾಗಿದ್ದಾರೆ. ಇದೀಗ ಇಲ್ಲಿಂದ ತೆರಳುವ ಗಗನಯಾನಿಗಳಿಗೆ ಬಾಹ್ಯಾಕಾಶದಲ್ಲಿ ಸಹ ಭಾರತೀಯ ಆಹಾರ, ಪಾನೀಯಗಳನ್ನು ಸವಿಯುವ ಅವಕಾಶ ಲಭಿಸಲಿದೆ ಎಂಬ ಮಾಹಿತಿ ಲಭಿಸಿದೆ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರ ತಿನಿಸುಗಳನ್ನೇ ಊಟಕ್ಕೆ ಬಳಸಲು ಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಡಿ ಮೈಸೂರು ಮೂಲದ ಲ್ಯಾಬ್ - ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ ವಿಶೇಷ ಮೆನುವನ್ನು ತಯಾರಿಸಿದೆ.

 ಮಿಷನ್ ಗಗನಯಾನ್ ನ ಗಗನಯಾತ್ರಿಗಳಿಗೆ ಇಡ್ಲಿ ಸಾಂಬಾರ್, ಉಪ್ಪಿಟ್ಟು, ತರಕಾರಿ ಪುಲಾವ್,  ಎಗ್ ರೋಲ್ ಸೇರಿದಂತೆ ಸುಮಾರು 30 ಭಕ್ಷ್ಯಗಳ ಮೆನು ಸಿದ್ಧಪಡಿಸಲಾಗಿದೆ.

ಮಿಷನ್ ಗಗನಯಾನ್ ಗಾಗಿ ವೆಜ್ ರೋಲ್, ಎಗ್ ರೋಲ್, ಮೂಂಗ್ ದಾಲ್ ಹಲ್ವಾ, ಇಡ್ಲಿ ಸಾಂಬಾರ್ ಮತ್ತು ಉಪ್ಪಿಟ್ಟುಸೇರಿದಂತೆ ಇತರ ರುಚಿಕರ ಆಹಾರ ಪದಾರ್ಥಗಳು ಇದರಲ್ಲಿ ಸೇರಿವೆ. ಅಲ್ಲದೆ ಆಹಾರವನ್ನು ಬಿಸಿಯಾಗಿಸಿಕೊಳ್ಳಲು ಅನುಕೂಲವಾಗಲೆಂದು ಫುಡ್ ಹೀಟರ್ ಗಳನ್ನು ಸಹ ಪೂರೈಸಲಾಗುತ್ತಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಹೇಳಿದೆ.

ಗಗನಯಾತ್ರಿಗಳಿಗೆ ನೀರು ಮತ್ತು ಹಣ್ಣಿನ ರಸದಂತಹಾ ದ್ರವಪದಾರ್ಥಗಳನ್ನು ಸೇವಿಸಲು ವಿಶೇಷ ಪಾತ್ರೆಗಳನ್ನು ಹ ನೀಡಲಾಗುವುದು. ಕಂಟೈನರ್‌ಗಳನ್ನು ಸಹ ಒದಗಿಸಲಾಗುವುದು. "ಆಹಾರದ ಹೊರತಾಗಿ, ಆಹಾರವು ಬೆಚ್ಚಗಿರುವಂತೆ ನ ತಂತ್ರಜ್ಞಾನ, ಸ್ಟೇನ್ಲೆಸ್ ಸ್ಟೀಲ್ ಕಟ್ಲರಿ ಮತ್ತು ತ್ಯಾಜ್ಯ ವಿಲೇವಾರಿ ಪ್ಯಾಕ್ ಅನ್ನು ಒದಗಿಸುವ ಕೆಲಸವನ್ನು ನಾವು ಮಾಡಲಿದ್ದೇವೆ"ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಅನಿಲ್ ಸೆಮ್ವಾಲ್ ಹೇಳಿದ್ದಾರೆ.

 

 

ಮಿಷನ್ ಗಗನಯಾನ್ ಭಾಗವಾಗಿ ನಾಲ್ವರನ್ನು ಬಾಹ್ಯಾಕಾಶಕ್ಕೆ ಕಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ಇದಕ್ಕಾಗಿ ನಾಲ್ವರು ಗಗನಯಾತ್ರಿಗಳು ರಷ್ಯಾದಲ್ಲಿ ತರಬೇತಿ ಹೊಂದಲಿದ್ದಾರೆ. ಇಸ್ರೋ ಪಾಲಿಗಿದು ಮಹತ್ವದ ಯೋಜನೆಯಾಗಿದೆ. ಏಕೆಂದರೆ ಇದು ರಷ್ಯಾ, ಯುಎಸ್ ಮತ್ತು ಚೀನಾ ಬಳಿಕ  ಮಾನವಸಹಿತ ಬಾಹ್ಯಾಕಾಶ ಹಾರಾಟವನ್ನು ಪ್ರಾರಂಭಿಸುವ ವಿಶ್ವದ ನಾಲ್ಕನೇ ರಾಷ್ಟ್ರವೆಂದು ಭಾರತವನ್ನು ಗುರುತಿಸುವಂತೆ ಂಆಡಲಿದೆ. ಕಳೆದ ವಾರ, ಇಸ್ರೋ ಮುಖ್ಯಸ್ಥ ಕೆ.ಶಿವನ್ನಾಲ್ಕು ಗಗನಯಾತ್ರಿಗಳನ್ನು ತರಬೇತಿಗಾಗಿ ಗುರುತಿಸಲಾಗಿದ್ದು ಅವರುಗಳಿಗೆ ರಷ್ಯಾದಲ್ಲಿ ಜನವರಿ ಮೂರನೇ ವಾರದಲ್ಲಿ ವಿಶೇಷ ತರಬೇತಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದರು.

 

 

Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp