ಗಣರಾಜ್ಯೋತ್ಸವಕ್ಕೆ ಟ್ವಿಟ್ಟರ್ ನಿಂದ ವಿಶೇಷ ಎಮೋಜಿ ಬಿಡುಗಡೆ

ದೇಶವು ಇದೇ ಭಾನುವಾರ 71ನೇ ಗಣರಾಜ್ಯೋತ್ಸವ ಆಚರಣೆಗೆ ಸರ್ವಸನ್ನದ್ದವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣ ಸಂಸ್ಥೆ ಟ್ವಿಟ್ಟರ್ ವಿಶೇಷ ಎಮೋಜಿಯನ್ನುಬಿಡುಗಡೆ ಮಾಡಿದೆ. ತ್ರಿವರ್ಣಧ್ವಜದ ಬಣ್ಣಗಳಲ್ಲಿ ಬೆಳಗುವ ಇಂಡಿಯಾ ಗೇಟ್ ನ ಚಿತ್ರವಿರುವ ವಿಶೇಷ ಎಮೋಜಿ ಇದಾಗಿದೆ. 
ಗಣರಾಜ್ಯೋತ್ಸವಕ್ಕೆ ಟ್ವಿಟ್ಟರ್ ನಿಂದ ವಿಶೇಷ ಎಮೋಜಿ ಬಿಡುಗಡೆ

ನವದೆಹಲಿ: ದೇಶವು ಇದೇ ಭಾನುವಾರ 71ನೇ ಗಣರಾಜ್ಯೋತ್ಸವ ಆಚರಣೆಗೆ ಸರ್ವಸನ್ನದ್ದವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣ ಸಂಸ್ಥೆ ಟ್ವಿಟ್ಟರ್ ವಿಶೇಷ ಎಮೋಜಿಯನ್ನುಬಿಡುಗಡೆ ಮಾಡಿದೆ. ತ್ರಿವರ್ಣಧ್ವಜದ ಬಣ್ಣಗಳಲ್ಲಿ ಬೆಳಗುವ ಇಂಡಿಯಾ ಗೇಟ್ ನ ಚಿತ್ರವಿರುವ ವಿಶೇಷ ಎಮೋಜಿ ಇದಾಗಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜನವರಿ 25 ರಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಈ ಸಮಯದಲ್ಲಿ ಈ ಎಮೋಜಿ ಬಳಸಿ ಟ್ವೀಟ್ ಮಾಡಲಿದ್ದಾರೆಇದಕ್ಕೆ ಉತ್ತರವೆಂದರೆ ದೇಶದ ಕೋಟಿ ಕೋಟಿ ನಾಗರಿಕರು ಟ್ವಿಟ್ಟರ್ ಮೂಲಕ ಈ ಭಾಷಣದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಟ್ವಿಟರ್ ಇಂಡಿಯಾ ಹೇಳಿದೆ.

"2020 ರ ಗಣರಾಜ್ಯೋತ್ಸವ ಎಮೋಜಿಯು ಭಾಷೆ, ಸಂಸ್ಕೃತಿ, ಕಾಲಾತೀತ ವಲಯದಲ್ಲಿ  ಭಾರತೀಯರೊಡನೆ ಒಂದಾಗಲಿದೆ ಸಂಭ್ರಮಿಸಲು ಅವರಿಗೆ ಇನ್ನೊಂದು ಕಾರಣವನ್ನು ನೀಡುತ್ತದೆ ಅಲ್ಲದೆ ರಾಷ್ಟ್ರಪತಿಗಳ ಭಾಷಣದಲ್ಲಿ ಭಾಗವಹಿಸಲು  ದಾರಿ ಮಾಡಿಕೊಡುತ್ತದೆ" ಎಂದು ಭಾರತ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ನೀತಿ ನಿರ್ದೇಶಕ ಮಹೀಮಾ ಕೌಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಎಮೋಜಿಯು ಜನವರಿ 30 ರವರೆಗೆ ಲೈವ್ ಆಗಿರಲಿದ್ದು ಇಂಗ್ಲಿಷ್ ಮತ್ತು ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಬಂಗಾಳಿ, ಗುಜರಾತಿ, ಉರ್ದು ಮತ್ತು ಗುರುಮುಖಿ ಸೇರಿದಂತೆ ಹತ್ತು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ. ಕಸ್ಟಮ್ ಎಮೋಜಿಯೊಂದಿಗೆ ಟ್ವಿಟರ್ ಭಾರತದಲ್ಲಿ ಗಣರಾಜ್ಯೋತ್ಸವವನ್ನು ಬೆಂಬಲಿಸುತ್ತಿರುವುದು ಇದು ಐದನೇ ವರ್ಷವಾಗಿದೆ.

ಸಾಮಾಜಿಕ ತಾಣದದಿಕೆಯು ಸ್ವಾತಂತ್ರ್ಯ ದಿನ, ದೀಪಾವಳಿ, ಗಣರಾಜ್ಯೋತ್ಸವ, ಗಾಂಧಿ ಜಯಂತಿ ಇತರ ಪ್ರಮುಖ  ದಿನಗಳ ಮತ್ತು ಘಟನೆಗಳ ಬೆಂಬಲಿಸುತ್ತಿದೆ.ಭಾರತೀಯ ಸಂಸ್ಕೃತಿ ಮತ್ತು ಮನೋಭಾವವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ನವೀನ ಎಮೋಜಿಗಳನ್ನು ಅದು ಆಗಾಗ ಬಿಡುಗಡೆ ಮಾಡುತ್ತಾ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com