ಕೊರೋನಾ ಯುಗದ ಕಲಿಕೆ ಆಪ್ ಗಳ ಬಗ್ಗೆ ನಿಮಗಿರಲಿ ಈ ಮಾಹಿತಿ 

ಕೊರೋನಾ ವೈರಸ್ ಜಗತ್ತಿನ ಜೀವನ ಶೈಲಿಯನ್ನೇ ಬದಲಿಸಿದೆ. ಕಲಿಯುವ ವಿದ್ಯಾರ್ಥಿಗಳಿಂದ ಹಿಡಿದು ಕಾರ್ಮಿಕರ ವರೆಗೂ ಎಲ್ಲರೂ ಕದಲದೇ ಇರುವಂತಾಗಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಕುಳಿತಲ್ಲೇ ಕಲಿಯುವುದಕ್ಕೆ ಅತ್ಯುತ್ತಮ ಆಪ್ ಗಳ ಅಗತ್ಯವಿದೆ. ಇಂತಹ ವಿಶ್ವದರ್ಜೆಯ ಆಪ್ ಗಳ ಬಗ್ಗೆ ಉಪಯುಕ್ತ ವರದಿ ಹೀಗಿದೆ. 
ಕೊರೋನಾ ಯುಗದ ಕಲಿಕೆ ಆಪ್ ಗಳ ಬಗ್ಗೆ ನಿಮಗಿರಲಿ ಈ ಮಾಹಿತಿ
ಕೊರೋನಾ ಯುಗದ ಕಲಿಕೆ ಆಪ್ ಗಳ ಬಗ್ಗೆ ನಿಮಗಿರಲಿ ಈ ಮಾಹಿತಿ

ಕೊರೋನಾ ವೈರಸ್ ಜಗತ್ತಿನ ಜೀವನ ಶೈಲಿಯನ್ನೇ ಬದಲಿಸಿದೆ. ಕಲಿಯುವ ವಿದ್ಯಾರ್ಥಿಗಳಿಂದ ಹಿಡಿದು ಕಾರ್ಮಿಕರ ವರೆಗೂ ಎಲ್ಲರೂ ಕದಲದೇ ಇರುವಂತಾಗಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಕುಳಿತಲ್ಲೇ ಕಲಿಯುವುದಕ್ಕೆ ಅತ್ಯುತ್ತಮ ಆಪ್ ಗಳ ಅಗತ್ಯವಿದೆ. ಇಂತಹ ವಿಶ್ವದರ್ಜೆಯ ಆಪ್ ಗಳ ಬಗ್ಗೆ ಉಪಯುಕ್ತ ವರದಿ ಹೀಗಿದೆ. 

ಉಡೆಮಿ

ಸುಮಾರು 57,000 ಬೋಧಕರು 1,00,000 ಆನ್ ಲೈನ್ ಕೋರ್ಸ್ ಗಳನ್ನು ಹೊಂದಿರುವ ಉಡೆಮಿ ಆಪ್  ತಂತ್ರಜ್ಞಾನ, ಮನೋವಿಜ್ಞಾನ, ನಾಯಕತ್ವ, ಫೋಟೊಗ್ರಫಿ, ಸಂಗೀತ, ವ್ಯವಹಾರ, ವಿನ್ಯಾಸ, ಮಾರ್ಕೆಟಿಂಗ್ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕೋರ್ಸ್ ಗಳನ್ನು ನೀಡುತ್ತಿದೆ. ಕಲಿಕಾ ಸಾಮಗ್ರಿಗಳನ್ನು ಮೊಬೈಲ್ ಆಪ್ ನಿಂದಲೇ ಪಡೆಯಬಹುದಾಗಿದೆ. ಇವೆಲ್ಲವೂ ಶುಲ್ಕ ಸಹಿತ ಕೋರ್ಸ್ ಗಳಾಗಿದ್ದು, ವಿನಾಯಿತಿ ಲಭ್ಯವಿರಲಿದೆ. 

ಡ್ಯುಯೊಲಿಂಗೊ

ಭಾಷಾ ಕಲಿಕಾ ಡೇಟಾಗೆ ಸಂಬಂಧಿಸಿದಂತೆ ಡ್ಯುಯೊಲಿಂಗೋ ಜನಪ್ರಿಯ ಹಾಗೂ ಜಾಗತಿಕ ಮಟ್ಟದ ಕಲಿಕಾ ಆಪ್. ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್ ಹೀಗೆ ಈ ಆಪ್ ನಲ್ಲಿ ಲಭ್ಯವಿರುವ ಭಾಷಾ ಕಲಿಕೆಯ ಡೇಟಾದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಫೋಟೋ ಹಾಗೂ ನುಡಿಗಟ್ಟುಗಳ ದೃಶ್ಯ ಸಂಪರ್ಕ ಏರ್ಪಡಿಸುವ ಮೂಲಕ ಜನರಿಗೆ ಕಲಿಕೆಯನ್ನು ಈ ಆಪ್ ಮತ್ತಷ್ಟು ಪರಿಣಾಮಕಾರಿಯನ್ನಾಗಿಸಲಿದೆ. 

ರಿವಾರ್ಡ್ ನೀಡುವ ಈ ಆಪ್ ನಲ್ಲಿ ವರ್ಚ್ಯುಯಲ್ ನಾಣ್ಯಗಳನ್ನು ಸಂಗ್ರಹಿಸಬಹುದಾಗಿದೆ. ಆಂಗ್ಲ ಭಾಷಾ ಪರೀಕ್ಷೆಯನ್ನು ತೆಗೆದುಕೊಂಡು ವ್ಯಕ್ತಿಯೋರ್ವ ತನ್ನ ಆಂಗ್ಲ ಭಾಷಾ ಪರಿಣತಿಗೆ ಪ್ರಮಾಣ ಪತ್ರ ಪಡೆಯಬಹುದಾಗಿದೆ. 

ಎಡ್ಎಕ್ಸ್ 

'ಮೂಕ್‌' (ಮ್ಯಾಸೀವ್‌ ಓಪನ್‌ ಆನ್‌ಲೈನ್‌ ಕೋರ್ಸ್‌) ವಿಭಾಗದಲ್ಲಿ, ಲಾಭರಹಿತ, ಸಾರ್ವಜನಿಕರಿಗೆ ಮುಕ್ತವಾಗಿರುವ ಏಕೈಕ ಆಪ್ ಎಡ್ಎಕ್ಸ್ ಆಗಿದೆ. ವಿಶ್ವವಿದ್ಯಾನಿಲಯದ ಮಟ್ಟದ ಕೋರ್ಸ್ ಗಳನ್ನು ನೀಡುವ ಮೂಲಕ ಗಡಿಗಳನ್ನು ದಾಟಿ ವಿದ್ಯೆ ಲಭಿಸುವಂತೆ ಮಾಡುತ್ತಿದೆ. 2012 ರಲ್ಲಿ ಹಾರ್ವರ್ಡ್ ವಿವಿ ಹಾಗೂ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಈ ಆಪ್ ನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಪ್ರಮಾಣೀಕರಣ ಪಡೆಯಬೇಕಾದರೆ ಶುಲ್ಕ ವಿಧಿಸಲಾಗುತ್ತದೆಯಷ್ಟೇ.

ಸ್ಟಡಿ ಬ್ಲೂ

ಈ ಆಪ್ ನಲ್ಲಿ ಶೈಕ್ಷಣಿಕ ಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಫ್ಲಾಶ್ ಕಾರ್ಡ್, ನೋಟ್ಸ್, ಸ್ಟಡಿ ಗೈಡ್ ಗಳನ್ನು ಬಳಸಿಕೊಂಡು ಈ ಆಪ್ ನಲ್ಲಿ ಮಾಹಿತಿ ಪಡೆಯಬಹುದಾಗಿದೆ. ಈ ಆಪ್ ಮೂಲಕ ವಿಶ್ವಾದ್ಯಂತ 16 ಮಿಲಿಯನ್ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬೇರೆ ವಿದ್ಯಾರ್ಥಿಗಳು ಕ್ರೌಡ್ ಸೋರ್ಸ್ಡ್ ಲೈಬ್ರರಿಯಲ್ಲಿರುವ 500 ಮಿಲಿಯನ್ ಪ್ರಶ್ನೆ ಪತ್ರಿಕೆಗಳನ್ನು ಬಳಸಿ ಕಲಿಯಬಹುದಾಗಿದೆ. 

ಲಿಂಡಾ
Lynda.com ನ ಲೈಬ್ರರಿಯ ಮೂಲಕ ಆನ್ ಲೈನ್ ಕಲಿಕೆ ಮತ್ತಷ್ಟು ಪರಿಣಾಮಕಾರಿಯಾಗಿದೆ. ಪ್ರತಿಷ್ಠಿತ ಜಾಲತಾಣ  ಲಿಂಕ್ಡ್ ಇನ್ ನ ಭಾಗವಾಗಿರುವ ಈ ಆಪ್ ನಲ್ಲಿ ಚಂದಾದಾರರಾಗುವ ಅವಕಾಶವೂ ಲಭ್ಯವಿದ್ದು, ಐದು ಭಾಷೆಗಳಲ್ಲಿ ಟುಟೋರಿಯಲ್ ಗಳನ್ನು ನೀಡುವುದು ಈ ಆಪ್ ನ ವಿಶೇಷತೆಯಾಗಿದೆ. 

ಲರ್ನಿಂಗ್.ಎಲ್ ವೈ 

ವಿವಿಧ ವಿಷಯಗಳ ಬಗ್ಗೆ ಈ ಆಪ್ ನಲ್ಲಿ ಕಲಿಕೆಗೆ ಅವಕಾಶವಿದೆ. ಒತ್ತಡ ನಿರ್ವಹಣೆಯಿಂದ ನಾಯಕತ್ವದ ವಿಜ್ಞಾನದವರೆಗೆ ಹತ್ತು ಹಲವಾರು ವಿಷಯದ ಬಗ್ಗೆ ಇಲ್ಲಿ ಕಲಿಕೆ ಸಾಧ್ಯವಿದ್ದು, ಸಿಇ ಕ್ರೆಡಿಟ್ ಕೋರ್ಸ್ ಕೂಡ ಈ ಆಪ್ ನಲ್ಲಿ ಲಭ್ಯವಿದೆ. 

ಟಿಸಿವೈ ಆನ್ ಲೈನ್ 

ಪರೀಕ್ಷಾ ತಯಾರಿಗಾಗಿಯೇ ಈ ಆಪ್ ತಯಾರಿಸಲ್ಪಟ್ಟಿದ್ದು, ಎಂಬಿಎ, ಸಿಎಸ್ಎಟಿ, ಜಿಎಂಎಟಿ ಗಳ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದಾಗಿದೆ. ಎಲ್ಲಾ ರೀತಿಯ ಆನ್ ಲೈನ್ ಟೆಸ್ಟ್ ಗಳಿಗೆ ಇದು ಸಹಕಾರಿಯಾಗಲಿದ್ದು, ಅಂತಾರಾಷ್ಟ್ರೀಯ ಕೋರ್ಸ್ ಗಳು, ಯುಜಿ ಪ್ರವೇಶ ಪರೀಕ್ಷೆ, ಪಿಜಿ ಪ್ರವೇಶ ಪರೀಕ್ಷೆ, ಬ್ಯಾಂಕಿಂಗ್, ವಿಮೆ, ರೈಲ್ವೆ, ರಕ್ಷಣಾ ಇಲಾಖೆ, ರಾಜ್ಯ ಸರ್ಕಾರಿ ಸೇವೆಗಳು ಹಾಗೂ ಇನ್ನಿತರ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಿರುವ ಆಪ್ ಇದಾಗಿದೆ. 

ಕೋರ್ಸೆರಾ

ಐಟಿ, ಎಐ, ಕ್ಲೌಡ್ ಇಂಜಿನಿಯರಿಂಗ್ ಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಬೇಡಿಕೆಯಲ್ಲಿರುವ ಆಪ್ ಇದು, ಸುಮಾರು 190 ವಿವಿಗಳು ಹಾಗೂ ಕಂಪನಿಗಳ ಅನುಭವ ಮತ್ತು ಪರಿಣತಿ ಇಲ್ಲಿ ಲಭ್ಯವಿರಲಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕೆಲವು ಕ್ವಿಜ್ ಹಾಗೂ ಪ್ರಾಜೆಕ್ಟ್ ಗಳನ್ನು ನೀಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳೇ ಸ್ವಯಂ ಕಲಿಯುವಂತೆ ಮಾಡಲಾಗುತ್ತದೆ.  

ಸ್ಕಿಲ್ ಶೇರ್ 

ಇದು ಕಲಿಯುತ್ತಿರುವವರ ಸಮೂಹವೇ ಇರುವ ಆಪ್, ಇದರಲ್ಲಿ ಸಾವಿರಾರು ತರಗತಿಗಳು ಲಭ್ಯವಿದ್ದು, ಫೋಟೋಗ್ರಫಿ, ವಿಡಿಯೋಗ್ರಫಿ ಸೃಜನಾತ್ಮಕ ಕ್ಷೇತ್ರಗಳಲ್ಲಿರುವವರಿಗೆ ಅತ್ಯಂತ ಸಹಕಾರಿಯಾಗಿರುವ ಆಪ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com