ಕೋವಿಡ್-19 ವಿರುದ್ಧದ ಯುದ್ಧ: ಮೂರು ಪ್ರಕಾರಗಳ ವೆಂಟಿಲೇಟರ್ ತಯಾರಿಸಿದ ಇಸ್ರೋ, ತಂತ್ರಜ್ಞಾನ ವರ್ಗಾವಣೆಗೆ ಸಿದ್ಧ 

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಹತ್ವದ ಕೊಡುಗೆ ನೀಡಿದೆ.
ಇಸ್ರೋ
ಇಸ್ರೋ
Updated on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಹತ್ವದ ಕೊಡುಗೆ ನೀಡಿದೆ. ಮೂರು ವಿಧವಾದ ವೆಂಟಿಲೇಟರ್ ಗಳನ್ನು ಇಸ್ರೋ ಅಭಿವೃದ್ಧಿಪಡಿಸಿದ್ದು, ಕೈಗಾರಿಗೆಗಳಿಗೆ ಇದರ ತಂತ್ರಜ್ಞಾನ ವರ್ಗಾವಣೆಗೆ ಸಿದ್ಧವಿರುವುದಾಗಿ ಘೋಷಿಸಿದೆ.

ಕಡಿಮೆ ವೆಚ್ಚದ, ಪೋರ್ಟಬಲ್ ಕ್ರಿಟಿಕಲ್ ಕೇರ್ ವೆಂಟಿಲೇಟರ್ ಗೆ ಇಸ್ರೋ "ಪ್ರಾಣ" (ಪ್ರೋಗ್ರಾಮಬಲ್ ರೆಸ್ಪಿರೇಟರಿ ಅಸಿಸ್ಟೆನ್ಸ್ ಫಾರ್ ನೀಡಿ ಏಡ್) ವನ್ನು ಅಭಿವೃದ್ಧಿಪಡಿಸಿದ್ದು, ಕೃತಕ ಮ್ಯಾನುಯಲ್ ಉಸಿರಾಟ ಘಟಕ ಚೀಲದ ಸ್ವಯಂಚಾಲಿತ ಕಂಪ್ರೆಷನ್ ಆಧಾರದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ.

ಈ ವ್ಯವಸ್ಥೆಗೆ ಅತ್ಯಾಧುನಿಕ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದ್ದು, ಏರ್ ವೇ ಪ್ರೆಷರ್ ಸೆನ್ಸರ್, ಫ್ಲೋ, ಸೆನ್ಸಾರ್, ಆಕ್ಸಿಜನ್ ಸೆನ್ಸರ್, ಸರ್ವೋ ಆಕ್ಯೂವೇಟರ್ ಹಾಗೂ (ಪಾಸಿಟೀವ್ ಎಂಡ್ ಎಕ್ಸಿರೇಟಾರ್ ಪ್ರೆಷರ್) ನಿಯಂತ್ರಕ ವಾಲ್ವ್ ಗಳನ್ನು ಹೊಂದಿದೆ.

ವೆಂಟಿಲೇಷನ್ ಮೋಡ್ ನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಟಚ್ ಸ್ಕ್ರೀನ್ ಪ್ಯಾನಲ್ ಹಾಗೂ ಮಾನಿಟರ್ ಗಳ ಮೂಲಕ ಆಮ್ಲಜನಕ ಪೂರೈಕೆಯನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಸೌಲಭ್ಯ ಹಂದಿದೆ. ಇಸ್ರೋ ಅಭಿವೃದ್ಧಿಪಡಿಸಿರುವ ವೆಂಟಿಲೇಟರ್ ಗಳು ಅಗತ್ಯವಿರುವ ಮಟ್ಟಕ್ಕೆ ಆಕ್ಸಿಜನ್ ನ್ನು ಪೂರೈಕೆ ಮಾಡಲಿದೆ. ವಿದ್ಯುತ್ ಪೂರೈಕೆ ವ್ಯತ್ಯಯವಾದಾಗ ಬ್ಯಾಟರಿ ಬ್ಯಾಕ್ ಅಪ್ ನ್ನೂ ಹೊಂದಿರುವುದು ಈ ವೆಂಟಿಲೇಟರ್ ಗಳ ವೈಶಿಷ್ಟ್ಯವಾಗಿದೆ.

ಇಸ್ರೋ ಅಭಿವೃದ್ಧಿಪಡಿಸಿರುವ "ಪ್ರಾಣ" ಇನ್ವಾಸೀವ್ ಹಾಗೂ ಇನ್ವಾಸೀವ್ ಹೊರತಾದ ವೆಂಟಿಲೇಷನ್ ಮೋಡ್ ಗಳನ್ನು ಹೊಂದಿದ್ದು, ವೆಂಟಿಲೇಟರ್ ನಿಯಂತ್ರಿತ ಉಸಿರಾಟ ನೀಡುವ ಹಾಗೂ ರೋಗಿಯ ಸ್ಪಂದನೆಗೆ ತಕ್ಕಂತೆ ನಿಯಂತ್ರಣವಾಗುವ ಉಸಿರಾಟದ ನೀಡುವ ವ್ಯವಸ್ಥೆಯನ್ನು ಹೊಂದಿದೆ. ಇನ್ನು ಬರೋಟ್ರಾಮಾ-ಒತ್ತಡ ಸಂಬಂಧಿತ ಗಾಯ ಹಾಗೂ ಉಸಿರುಕಟ್ಟುವಿಕೆ, ಆಮ್ಲಜನಕ ಪೂರೈಕೆಯ ಕೊರತೆಯನ್ನು ಗುರುತಿಸಿ ಎಚ್ಚರ ನೀಡುವ, ಸೇಫ್ಟಿ ವಾಲ್ವ್ ಗಳನ್ನು ಸ್ವಯಂಚಾಲಿತವಾಗಿ ತೆರೆದುಕೊಳ್ಳುವ ವ್ಯವಸ್ಥೆಯನ್ನು ಹೊಂದಿರುವುದು ಪ್ರಾಣ ವೆಂಟಿಲೇಟರ್ ಗಳ ಮತ್ತೊಂದು ವೈಶಿಷ್ಟ್ಯವಾಗಿದೆ.

ಇನ್ನು ವೆಂಟಿಲೇಟರ್ ಗಳ ಮೂಲಕ ಹರಡುವ ಬ್ಯಾಕ್ಟೀರಿಯಾ ವೈರಾಣುವಿನ ನಿರ್ಮೂಲನೆಗೂ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದನ್ನು ತಡೆಗಟ್ಟಲು ಫಿಲ್ಟರ್ ಗಳನ್ನು ಅಳವಡಿಕೆ ಮಾಡಲಾಗಿದೆ. ಇನ್ನು ಐಸಿಯು ಶ್ರೇಣಿಯ ಪಾಸಿಟೀವ್ ಪ್ರೆಷರ್ ಮೆಕಾನಿಕಲ್ ವೆಂಟಿಲೇಟರ್ "VaU" (ಅಬ್ರಿವೇಷನ್ ಆಫ್ ವೆಂಟಿಲೇಷನ್ ಅಸಿಸ್ಟ್ ಯೂನಿಟ್) ಉಸಿರಾಟದ ತೊಂದರೆಯಲ್ಲಿ ರೋಗಿಗಳಲ್ಲಿ ಸ್ವಾಭಾವಿಕ ಉಸಿರಾಟವನ್ನು ಕಲ್ಪಿಸಲು ಸಹಕಾರಿಯಾಗಲಿದೆ.

ಇನ್ನು ಗ್ಯಾಸ್ ಚಾಲಿತ ವೆಂಟಿಲೇಟರ್ ಸ್ಪೇಸ್ ವೆಂಟಿಲೇಟರ್ ಏಡೆಡ್ ಫಾರ್ ಟ್ರಾಮಾ ಅಸಿಸ್ಟೆನ್ಸ್ (ಸ್ವಾಸ್ತ) ನಾನ್ ಇನ್ವಾಸೀವ್ ವೆಂಟಿಲೇಷನ್ ನ ಮೂಲ ವಿಧಾನದ ವೆಂಟಿಲೇಟರ್ ಆಗಿದ್ದು, ತುರ್ತು ಪರಿಸ್ಥಿತಿಗಳಲ್ಲಿ ಬಳಕೆ ಮಾಡಬಹುದಾಗಿದ್ದಾಗಿದ್ದು, ವಾಹನಗಳ ಒಳಗೆ ಸಾಗಣೆ ವೆಂಟಿಲೇಟರ್‌ಗಳಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಇಸ್ರೋ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com