ಹ್ಯಾಪಿ ಬರ್ತ್ ಡೇ ಗೂಗಲ್: 23 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸರ್ಚ್ ಎಂಜಿನ್; ಡೂಡಲ್ ಗೌರವ

ನಪ್ರಿಯ ಸರ್ಚ್ ಎಂಜಿನ್ ಗೂಗಲ್, ಸೋಮವಾರ ಸೆ. 27ರಂದು 23ನೇ ವರ್ಷಕ್ಕೆ ಕಾಲಿರಿಸಿದೆ. ಸೆ. 4, 1998ರಂದು ಗೂಗಲ್ ಅನ್ನು ಹುಟ್ಟುಹಾಕಲಾಯಿತಾದರೂ, ಸೆ. 27ರಿಂದ ಅಧಿಕೃತವಾಗಿ ಗೂಗಲ್ ಸರ್ಚ್ ಎಂಜಿನ್ ಕಾರ್ಯಾರಂಭ ಮಾಡಿತು.
ಗೂಗಲ್ ಡೂಡಲ್
ಗೂಗಲ್ ಡೂಡಲ್

ವಾಷಿಂಗ್ಟನ್:  ಜನಪ್ರಿಯ ಸರ್ಚ್ ಎಂಜಿನ್ ಗೂಗಲ್, ಸೋಮವಾರ ಸೆ. 27ರಂದು 23ನೇ ವರ್ಷಕ್ಕೆ ಕಾಲಿರಿಸಿದೆ. ಸೆ. 4, 1998ರಂದು ಗೂಗಲ್ ಅನ್ನು ಹುಟ್ಟುಹಾಕಲಾಯಿತಾದರೂ, ಸೆ. 27ರಿಂದ ಅಧಿಕೃತವಾಗಿ ಗೂಗಲ್ ಸರ್ಚ್ ಎಂಜಿನ್ ಕಾರ್ಯಾರಂಭ ಮಾಡಿತು.

ಹಾಗಾಗಿ ಅದೇ ದಿನವನ್ನು ಗೂಗಲ್ ಹುಟ್ಟುಹಬ್ಬವನ್ನಾಗಿ ಸಂಭ್ರಮಿಸಲಾಗುತ್ತಿದೆ. ಗೂಗಲ್ ಜನ್ಮದಿನದ ಅಂಗವಾಗಿ,
ಹೋಮ್‌ ಪೇಜ್‌ನಲ್ಲಿ ಆಕರ್ಷಕ ಡೂಡಲ್ ಒಂದನ್ನು ಗೂಗಲ್ ಪ್ರಕಟಿಸಿದೆ.

ಡೋನಟ್ ಮತ್ತು ಕೇಕ್, ಕ್ಯಾಂಡಲ್ ಸಹಿತ ಇರುವ ಗೂಗಲ್ ಡೂಡಲ್ ಮೇಲೆ ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ಗೂಗಲ್ ಕುರಿತ ಮಾಹಿತಿಯನ್ನು ಪಡೆದುಕೊಳ್ಳಬಹುದು.  ಪ್ರತಿ ವಿಶೇಷ ಸಂದರ್ಭ ಮತ್ತು ಆಚರಣೆಯನ್ನು ಗೂಗಲ್ ಸಂಭ್ರಮಿಸುವ ಸಲುವಾಗಿ, ಡೂಡಲ್ ರಚಿಸುತ್ತದೆ. ಅದೇ ರೀತಿ ತನ್ನ ಹುಟ್ಟುಹಬ್ಬಕ್ಕೂ ವಿಶೇಷ ಡೂಡಲ್ ಅನ್ನು ಗೂಗಲ್ ಪ್ರದರ್ಶಿಸಿದೆ.

ಪ್ರತಿದಿನ, ಪ್ರಪಂಚದಾದ್ಯಂತ 150 ಕ್ಕೂ ಹೆಚ್ಚು ಭಾಷೆಗಳಲ್ಲಿ ಗೂಗಲ್ ನಲ್ಲಿ ಶತಕೋಟಿ ಹುಡುಕಾಟಗಳು ನಡೆಯುತ್ತಿವೆ, ಮತ್ತು ಗೂಗಲ್‌ನ ಆರಂಭದ ದಿನಗಳಿಂದಲೂ, ಆಟಿಕೆ ಬ್ಲಾಕ್‌ಗಳಿಂದ ನಿರ್ಮಿಸಲಾದ ಕ್ಯಾಬಿನೆಟ್‌ನಲ್ಲಿರುವ ಮೊದಲ ಸರ್ವರ್‌ ಇದ್ದಿದ್ದು ಬದಲಾಗಿದೆ. ಜಾಗತಿಕವಾಗಿ 20 ಕ್ಕೂ ಹೆಚ್ಚು ಡೇಟಾ ಸೆಂಟರ್‌ಗಳಲ್ಲಿ  ಪ್ರಪಂಚದ ಮಾಹಿತಿಯನ್ನು ಎಲ್ಲರಿಗೂ ತಲುಪುವಂತೆ ಮಾಡುವ ಉದ್ದೇಶವಾಗಿದೆ. 23 ನೇ ಹುಟ್ಟುಹಬ್ಬದ ಶುಭಾಶಯಗಳು ಗೂಗಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com