750 ವಿದ್ಯಾರ್ಥಿನಿಯರು ನಿರ್ಮಿಸಿರುವ 'ಆಜಾದಿಸ್ಯಾಟ್' ಮುಂದಿನ ವಾರ ಇಸ್ರೋದ ಎಸ್ ಎಸ್ ಎಲ್ ವಿ ರಾಕೆಟ್ ನಲ್ಲಿ ಉಡಾವಣೆ

ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿರುವ 'ಆಜಾದಿಸ್ಯಾಟ್' ಮುಂದಿನ ತಿಂಗಳ ಆರಂಭದಲ್ಲಿ ಇಸ್ರೋದ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕದಲ್ಲಿ (ಎಸ್‌ಎಸ್‌ಎಲ್‌ವಿ) ಉಡಾವಣೆಗೆ ಸಿದ್ಧವಾಗಿದೆ.
ಇಸ್ರೋ ಅಭಿವೃದ್ಧಿಪಡಿಸಿರುವ ರಾಕೆಟ್
ಇಸ್ರೋ ಅಭಿವೃದ್ಧಿಪಡಿಸಿರುವ ರಾಕೆಟ್

ನವದೆಹಲಿ: ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿರುವ 'ಆಜಾದಿಸ್ಯಾಟ್' ಮುಂದಿನ ತಿಂಗಳ ಆರಂಭದಲ್ಲಿ ಇಸ್ರೋದ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕದಲ್ಲಿ (ಎಸ್‌ಎಸ್‌ಎಲ್‌ವಿ) ಉಡಾವಣೆಗೆ ಸಿದ್ಧವಾಗಿದೆ. ಎಂಟು ಕೆಜಿ ತೂಕದ ಉಪಗ್ರಹವು 75 ಫೆಮ್ಟೊ ಪ್ರಯೋಗಗಳನ್ನು ಹೊಂದಿದ್ದು, ತನ್ನದೇ ಆದ ಸೌರ ಫಲಕಗಳ ಚಿತ್ರಗಳನ್ನು ಕ್ಲಿಕ್ ಮಾಡಲು ಸೆಲ್ಫಿ ಕ್ಯಾಮೆರಾಗಳು ಮತ್ತು ದೀರ್ಘ-ಶ್ರೇಣಿಯ ಸಂವಹನ ಟ್ರಾನ್ಸ್‌ಪಾಂಡರ್‌ಗಳನ್ನು ಹೊಂದಿದೆ.

ಆರು ತಿಂಗಳ ಅವಧಿಯ ಈ ಯೋಜನೆಯು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ( ಐಎನ್ ಎಸ್ ಪಿಎಸಿಇ) ದೇಶದ ಇತ್ತೀಚಿನ ಉಡಾವಣಾ ವಾಹಕ ಎಸ್ ಎಸ್ ಎಲ್ ವಿ ಆಜಾದಿ ಉಪಗ್ರಹ ಕೊಂಡೊಯ್ಯುವುದರಿಂದ ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಚೊಚ್ಚಲ ಉಡಾವಣೆಯನ್ನು ಹರ್ಷಚಿತ್ತದಿಂದ ನೋಡುತ್ತಿದ್ದಾರೆ ಎಂದಿದ್ದಾರೆ.

'ಬಾಹ್ಯಾಕಾಶದಲ್ಲಿ ಮಹಿಳೆಯರು' ವಿಶ್ವಸಂಸ್ಥೆಯ ಈ ವರ್ಷದ ಧ್ಯೇಯವಾಕ್ಯವಾಗಿರುವುದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಶಾಸ್ತ್ರದಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಪರಿಕಲ್ಪನೆಯಡಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಉಪಗ್ರಹ ಅಭಿವೃದ್ಧಿಪಡಿಸಿದ ಸ್ಪೇಸ್ ಕಿಡ್ಜ್ ಇಂಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ರಿಫಾತ್ ಶಾರೂಕ್ ಹೇಳಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು 500 ಕೆಜಿಗಿಂತ ಕಡಿಮೆ ತೂಕದ ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸಲು ಎಸ್ ಎಸ್ ಎಲ್ ವಿ ಅಭಿವೃದ್ಧಿಪಡಿಸಿದೆ. ಇಸ್ರೋ ಪ್ರಕಾರ, ಬೆಳೆಯುತ್ತಿರುವ ಬಾಹ್ಯಾಕಾಶ ಕ್ಷೇತ್ರದ ಬೇಡಿಕೆಗಳನ್ನು ಪೂರೈಸಲು ಒಂದು ವಾರದೊಳಗೆ ಎಸ್ ಎಲ್ ಎಲ್ ವಿ ರಾಕೆಟ್ ತಯಾರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com