ಶ್ರೀ ಹರಿಕೋಟ: ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ ಸಿ-53 ಉಡಾವಣೆ
ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್ ಎಲ್ ವಿ ಸಿ-53 ರಾಕೆಟ್ ಗುರುವಾರ ಉಡಾವಣೆಯಾಯಿತು.
Published: 30th June 2022 07:04 PM | Last Updated: 30th June 2022 07:25 PM | A+A A-

ಪಿಎಸ್ ಎಲ್ ವಿ -ಸಿ53 ಮಿಷನ್ ರಾಕೆಟ್
ಶ್ರೀಹರಿಕೋಟ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್ ಎಲ್ ವಿ ಸಿ-53 ರಾಕೆಟ್ ಗುರುವಾರ ಉಡಾವಣೆಯಾಯಿತು. ಇದು ಎನ್ ಎಸ್ ಐಎಲ್ ನ ಎರಡನೇ ವಾಣಿಜ್ಯಾತ್ಮಕ ಮಿಷನ್ ಆಗಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 6-02ರ ಸುಮಾರಿನಲ್ಲಿ ಡಿಎಸ್- ಇಒ ಉಪಗ್ರಹದೊಂದಿಗೆ ಇತರ ಎರಡು ಉಪಗ್ರಹಗಳನ್ನು ಪಿಎಸ್ ಎಲ್ ವಿಸಿ-53 ರಾಕೆಟ್ ಹೊತ್ತೊಯ್ದಿತು. ಇದು ಪಿಎಸ್ ಎಲ್ ವಿ ವಾಹಕದ 55ನೇ ಮಿಷನ್ ಆಗಿದೆ.
#WATCH | Andhra Pradesh: PSLV-C53/DS-EO and 2 other co-passenger satellites launched from the 2nd Launch Pad, SDSC-SHAR, Sriharikota. It accompanies PSLV Orbital Experimental Module (POEM) orbiting the earth as a stabilized platform.
(Source: ISRO) pic.twitter.com/zfK8SZJcvr— ANI (@ANI) June 30, 2022