ಇಸ್ರೋದ ಪಿಎಸ್ ಎಲ್ ವಿ- ಸಿ54 ರಾಕೆಟ್ ಉಡಾವಣೆಗೆ ಕೌಂಟ್ ಡೌನ್ ಆರಂಭ- ವಿಡಿಯೋ

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಶನಿವಾರ  ಭೂ ವೀಕ್ಷಣಾ ಉಪಗ್ರಹ ಓಷಿಯನ್ ಸ್ಯಾಟ್ ಮತ್ತಿತರ ಎಂಟು ಉಪಗ್ರಹಗಳನ್ನು ಹೊತ್ತ  ಪಿಎಸ್ ಎಲ್ ವಿ ಸಿ-54 ರಾಕೆಟ್ ನಲ್ಲಿ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಕೌಂಟ್ ಡೌನ್ ಆರಂಭಿಸಿದ್ದಾರೆ.
ಪಿಎಸ್ ಎಲ್ ವಿ- ಸಿ54
ಪಿಎಸ್ ಎಲ್ ವಿ- ಸಿ54

ಶ್ರೀಹರಿಕೋಟಾ: ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಶನಿವಾರ  ಭೂ ವೀಕ್ಷಣಾ ಉಪಗ್ರಹ ಓಷಿಯನ್ ಸ್ಯಾಟ್ ಮತ್ತಿತರ ಎಂಟು ಉಪಗ್ರಹಗಳನ್ನು ಹೊತ್ತ  ಪಿಎಸ್ ಎಲ್ ವಿ ಸಿ-54 ರಾಕೆಟ್ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಕೌಂಟ್ ಡೌನ್ ಆರಂಭಿಸಿದ್ದಾರೆ.

ಶನಿವಾರ ಬೆಳಗ್ಗೆ 11.56ಕ್ಕೆ ಪಿಎಸ್ ಎಲ್ ವಿಯ 56ನೇ ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಕೆಟ್‌ನ ಪ್ರಾಥಮಿಕ ಪೇಲೋಡ್ ಓಷನ್‌ಸ್ಯಾಟ್ ಆಗಿದ್ದು, ಇದನ್ನು ಕಕ್ಷೆ-1 ರಲ್ಲಿ ಬೇರ್ಪಡಿಸಲಾಗುತ್ತದೆ. ಇತರ ಎಂಟು ನ್ಯಾನೊ-ಉಪಗ್ರಹಗಳನ್ನು ಗ್ರಾಹಕರ ಅಗತ್ಯತೆಗಳ ಆಧಾರದ ಮೇಲೆ ವಿವಿಧ ಕಕ್ಷೆಗಳಲ್ಲಿ ಇರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com