ನೀಲಿ ಹಕ್ಕಿಗೆ ಗುಡ್ ಬೈ ಹೇಳಲು ಮುಂದು: ಟ್ವಿಟರ್ ಬಳಕೆದಾರರಿಗೆ ಶಾಕ್ ನೀಡಿದ ಎಲಾನ್ ಮಸ್ಕ್!

ಟ್ವಿಟರ್ ನಲ್ಲಿ ಬ್ಲ್ಯೂ ಟಿಕ್ ಪಡೆಯಲು ಹಣ ಪಾವತಿಸುವಂತೆ ಹೇಳಿ ಬಳಕೆದಾರರಿಗೆ ಶಾಕ್ ನೀಡಿದ್ದ ಟೆಕ್ ಬಿಲಿಯನೇರ್ ಮತ್ತು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಅವರು, ಇದೀಗ ಮತ್ತೊಂದು ಶಾಕ್ ನೀಡಿದ್ದಾರೆ.
ಎಲಾನ್ ಮಸ್ಕ್.
ಎಲಾನ್ ಮಸ್ಕ್.

ವಾಷಿಂಗ್ಟನ್‌: ಟ್ವಿಟರ್ ನಲ್ಲಿ ಬ್ಲ್ಯೂ ಟಿಕ್ ಪಡೆಯಲು ಹಣ ಪಾವತಿಸುವಂತೆ ಹೇಳಿ ಬಳಕೆದಾರರಿಗೆ ಶಾಕ್ ನೀಡಿದ್ದ ಟೆಕ್ ಬಿಲಿಯನೇರ್ ಮತ್ತು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಅವರು, ಇದೀಗ ಮತ್ತೊಂದು ಶಾಕ್ ನೀಡಿದ್ದಾರೆ.

ಚೀನಾದ 'ವಿ ಚಾಟ್' ರೀತಿ 'ಸೂಪರ್ ಆಪ್' ಸೃಷ್ಟಿಸುವ ಬಗ್ಗೆ ಅನೇಕ ಬಾರಿ ಪ್ರಸ್ತಾಪಿಸಿದ್ದ ಎಲಾನ್ ಮಸ್ಕ್ ಇದೀಗ ಟ್ವಿಟ್ಟರ್ ತಾಣವನ್ನು ರೀಬ್ರ್ಯಾಂಡ್ ಮಾಡುವ ಯೋಜನೆ ಇದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

"ಶೀಘ್ರದಲ್ಲಿಯೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಮತ್ತು ಎಲ್ಲಾ ಹಕ್ಕಿಗಳಿಗೆ ಕ್ರಮೇಣವಾಗಿ ನಾವು ವಿದಾಯ ಹೇಳಬೇಕಿದೆ" ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ತಮ್ಮ ಕನಸಿನ 'ಎಕ್ಸ್' ಆ್ಯಪ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಈ ಆ್ಯಪ್ ಜನರು ತಮ್ಮ ಅನಿಸಿಕೆಗಳನ್ನು ಜಗತ್ತಿನ ಜೊತೆ ಹಂಚಿಕೊಳ್ಳಲು ಇರುವ ವೇದಿಕೆಗಳಿಗಿಂತಲೂ ವಿಭಿನ್ನ ಹಾಗೂ ದೊಡ್ಡದು ಎಂದು ಎಂದು ಹೇಳಿದ್ದಾರೆ.

ಇಂದು ರಾತ್ರಿ ಸಾಕಷ್ಟು ಉತ್ತಮ ಎನ್ನಬಹುದಾದ ‍X ಲೋಗೋ ದೊರೆತರೆ, ನಾಳೆಯೇ ನಾವು ಜಗತ್ತಿನಾದ್ಯಂತ ಲೈವ್ ಹೋಗಲಿದ್ದೇವೆ" ಎಂದು ಎಕ್ಸ್‌ ಆ್ಯಪ್ ಶೀಘ್ರವೇ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಟ್ವಿಟರ್'ನ ನೀಲಿ ಹಕ್ಕಿಗೆ ವಿದಾಯ ಹೇಳಲು ಟೆಕ್ ಬಿಲಿಯನೇರ್ ಮತ್ತು ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ನಿರ್ಧರಿಸಿದ್ದು, ಶೀಘ್ರದಲ್ಲೇ ಹೊಸ ರೂಪ ನೀಡುವುದಾಗಿ ಹೇಳಿದ್ದಾರೆ.

ಟ್ವಿಟರ್‌ನ ವೆಬ್‌ಸೈಟ್ ನೀಲಿ ಹಕ್ಕಿಯ ಲೋಗೊ ‘ನಮ್ಮನ್ನು ಗುರುತಿಸುವ ಆಸ್ತಿ‘ ಎಂದು ಹೇಳುತ್ತದೆ ‘ಅದಕ್ಕಾಗಿಯೇ ನಾವು ಅದನ್ನು ರಕ್ಷಿಸುತ್ತಿದ್ದೇವೆ‘ಎಂದಿದ್ದಾರೆ. ಇದೇ ವೇಳೆ ಬಳಕೆದಾರರಿಗೆ ವೆರಿಫೈಡ್‌ ಅಕೌಂಟ್‌ ಮಾಡಿಕೊಳ್ಳಿ ಇದರಿಂದ ಜಾಹೀರಾತು ಆದಾಯ ಹಂಚಿಕೆಯಲ್ಲಿ ತಿಂಗಳಿಗೆ ಸಾವಿರಾರು ಡಾಲರ್‌ ಗಳಿಸಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com