ಚಂದ್ರ, ಮಂಗಳ ಮತ್ತು ಸೂರ್ಯನ ನಂತರ 'ಶುಕ್ರ'ನತ್ತ ಇಸ್ರೋ ಚಿತ್ತ!

ಯಶಸ್ವಿ ಚಂದ್ರಯಾನ-3 ಮತ್ತು ಆದಿತ್ಯ ಎಲ್-1 ಮಿಷನ್‌ಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದೇಶದ ಬಾಹ್ಯಾಕಾಶ ಯಾನದ ಪ್ರಯತ್ನಗಳನ್ನು ಹೆಚ್ಚಿಸಲು ಶ್ರಮಿಸುತ್ತಿದೆ. 'ಭೂಮಿಯ ಅವಳಿ' ಎಂದೂ ಕರೆಯಲ್ಪಡುವ ಶುಕ್ರಗ್ರಹದ ಮೇಲೆ ಇದೀಗ ತನ್ನ ದೃಷ್ಟಿಯನ್ನು ಇರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಯಶಸ್ವಿ ಚಂದ್ರಯಾನ-3 ಮತ್ತು ಆದಿತ್ಯ ಎಲ್-1 ಮಿಷನ್‌ಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದೇಶದ ಬಾಹ್ಯಾಕಾಶ ಯಾನದ ಪ್ರಯತ್ನಗಳನ್ನು ಹೆಚ್ಚಿಸಲು ಶ್ರಮಿಸುತ್ತಿದೆ. 'ಭೂಮಿಯ ಅವಳಿ' ಎಂದೂ ಕರೆಯಲ್ಪಡುವ ಶುಕ್ರಗ್ರಹದ ಮೇಲೆ ಇದೀಗ ತನ್ನ ದೃಷ್ಟಿಯನ್ನು ಇರಿಸಿದೆ.

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಶುಕ್ರ ಗ್ರಹಕ್ಕೆ ಮಿಷನ್ ನ್ನು ಈಗಾಗಲೇ ರೂಪಿಸಲಾಗಿದ್ದು, ಕೆಲವು ಪೇಲೋಡ್‌ಗಳು ಅಭಿವೃದ್ಧಿ ಹಂತದಲ್ಲಿವೆ ಎಂದಿದ್ದಾರೆ. ಇಸ್ರೋ ಅಧಿಕಾರಿಯೊಬ್ಬರ ಪ್ರಕಾರ, ಬಾಹ್ಯಾಕಾಶ ಸಂಸ್ಥೆಯು ಮಿಷನ್‌ನ ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಯೋಜಿಸಿದೆ, ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಅದನ್ನು ಪ್ರಾರಂಭಿಸಲು ಆಶಿಸುತ್ತಿದೆ.

ದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥರು, ಶುಕ್ರ ಗ್ರಹದ ಅಧ್ಯಯನ ಮಾಡುವುದರಿಂದ ಶತಕೋಟಿ ವರ್ಷಗಳ ಹಿಂದೆ ಭೂಮಿಯ ಭವಿಷ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದರು. ಶುಕ್ರವು ಬಹಳ ಆಸಕ್ತಿದಾಯಕ ಗ್ರಹವಾಗಿದೆ. ಇದು ವಾತಾವರಣವನ್ನು ಸಹ ಹೊಂದಿದೆ, ದಪ್ಪವಾಗಿದ್ದು ಮೇಲ್ಮೈಯನ್ನು ಭೇದಿಸಲಾಗುವುದಿಲ್ಲ. ಮೇಲ್ಮೈ ಗಟ್ಟಿಯಾಗಿದೆಯೇ ಅಥವಾ ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ ಎಂದರು. 

ಭಾರತದ ಶುಕ್ರ ಕಾರ್ಯಾಚರಣೆಯನ್ನು 'ಶುಕ್ರಯಾನ್-1' ಎಂದು ಕರೆಯಬಹುದು - 'ಶುಕ್ರ' ಎಂದರೆ ಶುಕ್ರ ಗ್ರಹ ಮತ್ತು 'ಯಾನ' ಎಂಬುದು ಸಂಸ್ಕೃತದಲ್ಲಿ ಕ್ರಾಫ್ಟ್ ಅಥವಾ ವಾಹನ ಎಂದರ್ಥವಾಗಿದೆ. 

ಶುಕ್ರ ಮೇಲ್ಮೈ ಮತ್ತು ವಾತಾವರಣವನ್ನು ಅಧ್ಯಯನ ಮಾಡುವುದು, ಅದರ ಭೌಗೋಳಿಕ ಸಂಯೋಜನೆಯನ್ನು ವಿಶ್ಲೇಷಿಸುವುದು, ಸೌರ ವಿಕಿರಣ ಮತ್ತು ಗ್ರಹದ ಮೇಲ್ಮೈ ಕಣಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಶುಕ್ರ ಮಿಷನ್ ಸಹಾಯ ಮಾಡುತ್ತದೆ.

ಕೆಲವು ವಿಜ್ಞಾನಿಗಳು ಶುಕ್ರನ ಮೋಡಗಳಲ್ಲಿ ಸೂಕ್ಷ್ಮಜೀವಿಗಳು ಅಸ್ತಿತ್ವದಲ್ಲಿರಬಹುದು ಎಂದು ವಾದಿಸುತ್ತಾರೆ, ಅಲ್ಲಿ ತಂಪಾಗಿದ್ದು, ಒತ್ತಡವು ಭೂಮಿಯ ಮೇಲ್ಮೈಯಲ್ಲಿ ಹೋಲುತ್ತದೆ. ಫಾಸ್ಫಿನ್ ಪತ್ತೆಯು ಸೂಕ್ಷ್ಮಜೀವಿಯ ಜೀವನದ ಸಂಭವನೀಯ ಚಿಹ್ನೆಯಾಗಿರಬಹುದು. ಆದರೆ, ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಶುಕ್ರವು 45-70 ಕಿಮೀ ಎತ್ತರದಲ್ಲಿ ಪ್ರಾರಂಭವಾಗುವ ಸಲ್ಫ್ಯೂರಿಕ್ ಆಮ್ಲದ ದಪ್ಪ, ವಿಷಕಾರಿ ಮೋಡಗಳಿಂದ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. ಮೋಡಗಳು ಕೊಳೆತ ಮೊಟ್ಟೆಗಳಂತೆ ವಾಸನೆ ಬೀರುತ್ತವೆ ಎಂದು ನಾಸಾ ಸಂಶೋಧನಾ ಪ್ರಬಂಧವೊಂದು ಹೇಳಿದೆ. ಸೌರವ್ಯೂಹದ ಅತ್ಯಂತ ಬಿಸಿಯಾದ ಗ್ರಹದ ಮೇಲ್ಮೈ ತಾಪಮಾನವು ಸುಮಾರು 475 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಸೀಸ ಕೂಡ ಕರಗುತ್ತದೆ.

ಡಿಸೆಂಬರ್ 14, 1962 ರಂದು ನಾಸಾದನ ಮ್ಯಾರಿನರ್-2 ಅನ್ವೇಷಣೆಯೊಂದಿಗೆ ಪರಿಶೋಧಿಸಲ್ಪಟ್ಟ ಮೊದಲ ಗ್ರಹವಾಗಿದೆ. ಅಂದಿನಿಂದ, ನಾಸಾ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA), ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಜಪಾನ್‌ನ ಹಲವಾರು ಬಾಹ್ಯಾಕಾಶ ನೌಕೆಗಳು ಗ್ರಹವನ್ನು ಅನ್ವೇಷಿಸಲು ಪ್ರಯತ್ನಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com