ಚೀನಾದ ಮುಂದಿನ ಮಿಷನ್ ಲೂನಾರ್ ಗೆ ಪಾಕ್ ಪೇಲೋಡ್!

2024ಕ್ಕೆ ನಿಗದಿಯಾಗಿರುವ ಚೀನಾದ ಮುಂದಿನ ಚಂದ್ರಯಾನ (ಮಿಷನ್ ಲೂನಾರ್) ಯೋಜನೆ ಪಾಕಿಸ್ತಾನದಿಂದ ಪೇಲೋಡ್ ನ್ನು ಹೊತ್ತೊಯ್ಯಲಿದೆ ಎಂದು ಚೀನಾ ಬಾಹ್ಯಾಕಾಶ ಏಜೆನ್ಸಿ ಹೇಳಿದೆ.
ಚೀನಾ-ಪಾಕ್
ಚೀನಾ-ಪಾಕ್

ನವದೆಹಲಿ: 2024ಕ್ಕೆ ನಿಗದಿಯಾಗಿರುವ ಚೀನಾದ ಮುಂದಿನ ಚಂದ್ರಯಾನ (ಮಿಷನ್ ಲೂನಾರ್) ಯೋಜನೆ ಪಾಕಿಸ್ತಾನದಿಂದ ಪೇಲೋಡ್ ನ್ನು ಹೊತ್ತೊಯ್ಯಲಿದೆ ಎಂದು ಚೀನಾ ಬಾಹ್ಯಾಕಾಶ ಏಜೆನ್ಸಿ ಹೇಳಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಹಕಾರದ ಭಾಗವಾಗಿ ಪಾಕ್ ಪೇಲೋಡ್ ನ್ನು ಚೀನಾ ರಾಕೆಟ್ ಹೊತ್ತೊಯ್ಯಲಿದೆ.

ಯೋಜಿತ ರೀತಿಯಲ್ಲಿ ಚಾಂಗ್ ಇ-6 ಲೂನಾರ್ ಮಿಷನ್ ನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದು ಚೀನಾ ಹೇಳಿದೆ.

ಚಂದ್ರನ ಮೇಲ್ಮೈನಿಂದ ಮಾದರಿಗಳನ್ನು ತರುವ ಉದ್ದೇಶದಿಂದ ಚೀನಾ ಚಾಂಗ್ ಇ-6 ಲೂನಾರ್ ಮಿಷನ್ ನ್ನು ಕೈಗೊಳ್ಳಲಾಗಿದೆ.

ಚಾಂಗ್ ಇ-6 ಮಿಷನ್ ಮೂಲಕ ದಕ್ಷಿಣ ಧ್ರುವದ ಅಧ್ಯಯನವನ್ನು ಚೀನಾ ಕೈಗೊಳ್ಳಲಿದೆ.

ಪಾಕಿಸ್ತಾನ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಚ್ಚು ಮಹತ್ವಾಕಾಂಕ್ಷೆಯ ಚೀನಾ ನೇತೃತ್ವದ ನೆಲೆಯನ್ನು ಸೇರಲು ಔಪಚಾರಿಕ ಒಪ್ಪಂದದ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ ಎಂದು ಡಾನ್ ಪತ್ರಿಕೆ ಕಳೆದ ತಿಂಗಳು ವರದಿ ಮಾಡಿತ್ತು.

ಚಂದ್ರನ ದೂರದ ಭಾಗ ಮತ್ತು ಭೂಮಿಯ ನಡುವಿನ ಸಂವಹನವನ್ನು ಬೆಂಬಲಿಸಲು, ಚೀನಾ ತನ್ನ ಹೊಸದಾಗಿ ಅಭಿವೃದ್ಧಿಪಡಿಸಿದ ರಿಲೇ ಉಪಗ್ರಹ Queqiao-2 ಅಥವಾ Magpie Bridge-2 ಅನ್ನು 2024 ರ ಮೊದಲಾರ್ಧದಲ್ಲಿ ಪ್ರಾರಂಭಿಸಲು ಯೋಜಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಪ್ರಕಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com