ಸೂರ್ಯ, ಚಂದ್ರಯಾನದ ಬಳಿಕ ಇಸ್ರೋ ಮುಂದಿನ ಯೋಜನೆ ಯಾವುದು?: ಇಲ್ಲಿದೆ ಮಾಹಿತಿ
ಭಾರತದ ಚಂದ್ರಯಾನ-3 ಹಾಗೂ ಆದಿತ್ಯ ಎಲ್-1 ಯೋಜನೆಗಳು ಯಶಸ್ವಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಧುನೀಕರಣಗೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸಿದೆ.
Published: 02nd September 2023 07:34 PM | Last Updated: 02nd September 2023 08:41 PM | A+A A-

ಇಸ್ರೋ
ಭಾರತದ ಚಂದ್ರಯಾನ-3 ಹಾಗೂ ಆದಿತ್ಯ ಎಲ್-1 ಯೋಜನೆಗಳು ಯಶಸ್ವಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಧುನೀಕರಣಗೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸಿದೆ.
ಎಕ್ಸ್ ಪೋಸ್ಯಾಟ್ (ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ) ಭಾರತದ ಮೊದಲ ಸಮರ್ಪಿತ ಪೋಲಾರಿಮೆಟ್ರಿ ಮಿಷನ್ ಆಗಿರಲಿದ್ದು, ತೀವ್ರವಾದ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಚಲನೆಗಳನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದೆ ಕಡಿಮೆ ಭೂ ಕಕ್ಷೆಯಲ್ಲಿ ಈ ಬಾಹ್ಯಾಕಾಶ ನೌಕೆ ಎರಡು ಪೇಲೋಡ್ ಗಳನ್ನು ಹೊತ್ತೊಯ್ಯಲಿದೆ.
ಹೇಗೆ ಕಾರ್ಯನಿರ್ವಹಿಸಲಿದೆ ಪೋಲಾರಿಮೆಟ್ರಿ ಮಿಷನ್?
ಪ್ರಾಥಮಿಕ ಪೇಲೋಡ್ POLIX (ಎಕ್ಸ್-ಕಿರಣಗಳಲ್ಲಿನ ಪೋಲಾರಿಮೀಟರ್ ಉಪಕರಣ) ಪೋಲಾರಿಮೆಟ್ರಿ ನಿಯತಾಂಕಗಳನ್ನು (ಧ್ರುವೀಕರಣದ ಡಿಗ್ರಿ ಮತ್ತು ಕೋನ) ಖಗೋಳ ಮೂಲದ 8-30 ಕೆವಿ ಫೋಟಾನ್‌ಗಳ ಮಧ್ಯಮ ಎಕ್ಸ್-ರೇ ಶಕ್ತಿಯ ವ್ಯಾಪ್ತಿಯಲ್ಲಿ ಅಳೆಯುತ್ತದೆ. ISRO ಪ್ರಕಾರ XSPECT (X-ray ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಪೇಲೋಡ್ 0.8-15 keV ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ಮಾಹಿತಿಯನ್ನು ನೀಡುತ್ತದೆ.
ಇದನ್ನೂ ಓದಿ: ನಿದ್ರೆಗೆ ಜಾರಲಿವೆ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್: ಚಂದ್ರಯಾನ 3 ಮುಂದಿನ ಕಥೆ ಏನು?
ಪೋಲಾರಿಮೆಟ್ರಿ ಉದ್ದೇಶವೇನು?
ಎಕ್ಸ್ ಪೋಸ್ಯಾಟ್ ಉಡಾವಣೆಗೆ ಸಜ್ಜುಗೊಂಡಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿವಿಧ ಖಗೋಳ ಮೂಲಗಳಿಂದ ಹೊರಹೊಮ್ಮುವ ಕಪ್ಪು ರಂಧ್ರ, ನ್ಯೂಟ್ರಾನ್ ಸ್ಟಾರ್, ಆಕ್ಟೀವ್ ಗ್ಯಾಲಾಕ್ಟಿಕ್ ನ್ಯೂಕ್ಲೈ, ಪಲ್ಸರ್ ವಿಂಡ್ ನೆಬ್ಯುಲಾಗಳ ಮೂಲ ಸಂಕೀರ್ಣ ಸಂಕೀರ್ಣ ಭೌತಿಕ ಪ್ರಕ್ರಿಯೆಗಳಾಗಿದ್ದು, ಅದನ್ನು ಅರಿಯುವುದು ಸವಾಲಿನ ಸಂಗತಿಯಾಗಿದೆ.
ಇದನ್ನೂ ಓದಿ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆದಿತ್ಯಾ ಎಲ್ 1 ಸೂರ್ಯನನ್ನು ಮುಟ್ಟುತ್ತದೆಯೇ? ಇಲ್ಲಿದೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ!
ವಿವಿಧ ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯಗಳ ಸ್ಪೆಕ್ಟ್ರೋಸ್ಕೋಪಿಕ್ ಮತ್ತು ಸಮಯದ ಮಾಹಿತಿಯು ಮಾಹಿತಿಯ ಸಂಪತ್ತನ್ನು ಒದಗಿಸುತ್ತದೆಯಾದರೂ ಅಂತಹ ಮೂಲಗಳಿಂದ ಹೊರಹೊಮ್ಮುವ ನಿಖರವಾದ ಸ್ವರೂಪವು ಇನ್ನೂ ಖಗೋಳಶಾಸ್ತ್ರಜ್ಞರಿಗೆ ಆಳವಾದ ಸವಾಲುಗಳನ್ನು ಒಡ್ಡುತ್ತದೆ. ಇಂತಹ ಎಮಿಷನ್ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪೋಲಾರಿಮೆಟ್ರಿ ಮಿಷನ್ ಸಹಕಾರಿಯಾಗಲಿದೆ.