ಹದಿಹರೆಯದವರ ಸುರಕ್ಷತೆಗಾಗಿ ಇನ್‌ಸ್ಟಾಗ್ರಾಮ್‌ ಸಂದೇಶಗಳಲ್ಲಿ ನಗ್ನತೆ ರಕ್ಷಣೆ!

ಹದಿಹರೆಯದವರ ಸುರಕ್ಷತೆಗಾಗಿ ಮತ್ತು ಲೈಂಗಿಕ ಸುಲಿಗೆಯನ್ನು ತಡೆಯಲು ನೇರ ಸಂದೇಶಗಳಲ್ಲಿ ಸ್ವಯಂಚಾಲಿತವಾಗಿ ನಗ್ನತೆಯನ್ನು ಮಸುಕುಗೊಳಿಸುವ ವೈಶಿಷ್ಟ್ಯವನ್ನು ಒಳಗೊಂಡ ಹೊಸ ಟೂಲ್ ನೀಡಿದ Instagram.
ಇನ್ ಸ್ಟಾಗ್ರಾಂ
ಇನ್ ಸ್ಟಾಗ್ರಾಂ

ಲಂಡನ್: ಹದಿಹರೆಯದವರ ಸುರಕ್ಷತೆಗಾಗಿ ಮತ್ತು ಲೈಂಗಿಕ ಸುಲಿಗೆಯನ್ನು ತಡೆಯಲು ನೇರ ಸಂದೇಶಗಳಲ್ಲಿ ಸ್ವಯಂಚಾಲಿತವಾಗಿ ನಗ್ನತೆಯನ್ನು ಮಸುಕುಗೊಳಿಸುವ ವೈಶಿಷ್ಟ್ಯವನ್ನು ಒಳಗೊಂಡ ಹೊಸ ಟೂಲ್ ನೀಡುತ್ತಿರುವುದಾಗಿ Instagram ಹೇಳಿದೆ.

ಲೈಂಗಿಕ ಹಗರಣಗಳು ಮತ್ತು ಇತರ ರೀತಿಯ "ಇಮೇಜ್ ದುರುಪಯೋಗ"ದ ವಿರುದ್ಧ ಹೋರಾಡಲು ಮತ್ತು ಅಪರಾಧಿಗಳು ಹದಿಹರೆಯದವರನ್ನು ಸಂಪರ್ಕಿಸುವುದನ್ನು ತಡೆಯುವ ಅಭಿಯಾನದ ಭಾಗವಾಗಿ ಈ ವೈಶಿಷ್ಟ್ಯಗಳನ್ನು ಪರೀಕ್ಷಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಗುರುವಾರ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ಲೈಂಗಿಕ ಸುಲಿಗೆ, ಅಥವಾ ವಂಚನೆ, ಆನ್‌ಲೈನ್‌ನಲ್ಲಿ ಸ್ಪಷ್ಟವಾದ ಫೋಟೋಗಳನ್ನು ಕಳುಹಿಸಲು ವ್ಯಕ್ತಿಯ ಮನವೊಲಿಸುವುದು ಮತ್ತು ನಂತರ ಆತನನ್ನು ಬಲಿಪಶು ಮಾಡಿ ಹಣ ಪಾವತಿಸುವಂತೆ ಮಾಡುವುದು. ಇಲ್ಲದಿದ್ದರೆ ಚಿತ್ರಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕುವುದನ್ನು ಒಳಗೊಂಡಿರುತ್ತದೆ.

ಇನ್ ಸ್ಟಾಗ್ರಾಂ
ಕೆಲ ಗಂಟೆ Facebook, Instagram ಸ್ಥಗಿತ ಪರಿಣಾಮ: 3 ಬಿಲಿಯನ್ ಡಾಲರ್ ಕಳೆದುಕೊಂಡ ಮಾರ್ಕ್ ಜುಕರ್‌ಬರ್ಗ್!

ಇತ್ತೀಚಿನ ಹೈ-ಪ್ರೊಫೈಲ್ ಪ್ರಕರಣಗಳಲ್ಲಿ ಇಬ್ಬರು ನೈಜೀರಿಯನ್ ಸಹೋದರರು ಮಿಚಿಗನ್‌ನಲ್ಲಿ ಹದಿಹರೆಯದ ಹುಡುಗ ಮತ್ತು ಯುವಕನನ್ನು ಲೈಂಗಿಕವಾಗಿ ಸುಲಿಗೆ ಮಾಡಲಾಗಿದೆ. ಇದರಿಂದ ನೊಂದ ಒಬ್ಬ ತನ್ನ ಪ್ರಾಣವನ್ನೆ ಕಳೆಂದುಕೊಂಡಿದ್ದನು.

Instagram ಮತ್ತು ಇತರ ಸಾಮಾಜಿಕ ಮಾಧ್ಯಮ ಕಂಪನಿಗಳು ಯುವಜನರನ್ನು ರಕ್ಷಿಸಲು ಸಾಕಷ್ಟು ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಟೀಕೆಗಳನ್ನು ಎದುರಿಸುತ್ತಿವೆ. ಇನ್‌ಸ್ಟಾಗ್ರಾಮ್‌ನ ಮಾಲೀಕರಾದ ಮೆಟಾ ಪ್ಲಾಟ್‌ಫಾರ್ಮ್‌ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ವರ್ಷದ ಆರಂಭದಲ್ಲಿ ಸೆನೆಟ್ ವಿಚಾರಣೆಯ ಸಂದರ್ಭದಲ್ಲಿ ಇಂತಹ ಪ್ರಕರಣಗಳಲ್ಲಿ ಬಲಿಪಶುವಾದ ಪೋಷಕರಲ್ಲಿ ಕ್ಷಮೆಯಾಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com