
ನವದೆಹಲಿ: ಬುಧವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ISS) ತೆರಳಬೇಕಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರ ಬಾಹ್ಯಾಕಾಶಯಾನವನ್ನು ಮುಂದೂಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸ್ಪೇಸ್ ಎಕ್ಸ್, ಫಾಲ್ಕನ್-9 ರಾಕೆಟ್ ನಲ್ಲಿ ಸೋರಿಕೆಯಾಗಿದ್ದರಿಂದ ಬಾಹ್ಯಾಕಾಶಯಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದೆ.
ಪೋಸ್ಟ್- ಸ್ಟ್ಯಾಟಿಕ್ ಫೈರ್ ಬೂಸ್ಟರ್ ಪರಿಶೀಲನೆ ವೇಳೆ ಲಿಕ್ವಿಡ್ ಆಕ್ಸಿಜನ್ ಸೋರಿಕೆಯಾಗಿರುವುದು ಕಂಡುಬಂದಿದೆ. ಫಾಲ್ಕನ್-9 ರಾಕೆಟ್ ನಲ್ಲಿ ಸೋರಿಕೆ ಸರಿಪಡಿಸಲು ಎಂಜಿನಿಯರ್ ಗಳು ಹೆಚ್ಚಿನ ಸಮಯ ಕೋರಿದ್ದಾರೆ. ಸೋರಿಕೆ ಸರಿಪಡಿಸಿದ ಬಳಿಕ ಹೊಸ ಉಡ್ಡಯನ ದಿನಾಂಕವನ್ನು ನಿಗದಿಪಡಿಸಲಿದ್ದೇವೆ ಎಂದು ಸ್ಪೇಸ್ ಎಕ್ಸ್ ತಿಳಿಸಿದೆ.
ಆಕ್ಸಿಯಮ್ ಮಿಷನ್-4 (Axiom-4) ಭಾಗವಾಗಿ ಭಾರತದ ಶುಭಾಂಶು ಶುಕ್ಲಾ ಅವರೊಂದಿಗೆ ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್ , ಹಂಗೇರಿಯಾದ ಟಿರ್ಬೊ ಕಾಪು ಹಾಗೂ ಪೋಲಂಡನ್ ನ ಸ್ಲಾವೋಸ್ ಯು. ವಿನ್ಸವ್ಸ್ ಕಿ 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸಲಿದ್ದಾರೆ.
ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ, ಸಂಶೋಧನೆ ನಡೆಯಲಿದೆ.
Advertisement