ಕ್ರ್ಯಾಬ್ ರೇ!

ಮಧ್ಯಾಹ್ನ ಈ ರೋಡಿನಲ್ಲಿ ನೆಂಚರ ಮನೆಗೆ ನಡೆದುಹೋಗುತ್ತಿದ್ದಾಗ...
ಕೆಂಪು ಏಡಿ
ಕೆಂಪು ಏಡಿ
Updated on

ಮಧ್ಯಾಹ್ನ ಈ ರೋಡಿನಲ್ಲಿ ನೆಂಚರ ಮನೆಗೆ ನಡೆದುಹೋಗುತ್ತಿದ್ದಾಗ ನೀವು ಒಂದೋ, ಎರಡು ಏಡಿಗಳನ್ನು ಕಂಡಿರಬಹುದು. ಅಲ್ಲೇ ಹತ್ತಿರದಲ್ಲಿ ನೆಲೆಸಿರುವ ಸಂಬಂಧಿಗಳಿಗೆ ಆಮಂತ್ರಣ ಪತ್ರಿಕೆಯೊದನ್ನು ಕೊಟ್ಟು ತಿರುಗಿ ಬರುವ ಹೊತ್ತಿಗೆ ಒಂದು ಕೆಂಪು ಸಮುದ್ರವೇ ನಿಮ್ಮೆಡೆಗೆ ಸುನಾಮಿಯಂತೆ ಕೆಂಪು ಅಲೆಗಳೊಂದಿಗೆ ಬರುತ್ತಿದ್ದರೆ ಹೇಗೆನಿಸಬೇಡ? ಅಂಥದ್ದೇ ಒಂದು ಅಚ್ಚರಿ ಇದು. ಐಲ್ಯಾಂಡ್‌ಗಳು ವಂಡರ್ ಲ್ಯಾಂಡ್‌ಗಳಿದ್ದಂತೆ. ಅಲ್ಲಿ ನಿಮಿಷ ನಿಮಿಷವೂ ಊಹೆಗೆ ಮೀರಿದ ಬದಲಾವಣೆಗಳು ನಡೆಯುತ್ತಿರುತ್ತವೆ. ಅಂತೆಯೇ ಈ ಕೆಂಪು ಏಡಿಗಳ ವಲಸೆ ಕೂಡಾ.

ಆಸ್ಟ್ರೇಲಿಯಾದ ಕ್ರಿಸ್‌ಮಸ್ ಐಲ್ಯಾಂಡ್ ಹೆಚ್ಚೆಂದರೆ 52 ಚದರ ಅಡಿ ಇರಬಹುದು. ಇಲ್ಲಿ ವಾಸಿಸುವ 2000 ಮಂದಿಯೊಂದಿಗೆ 120 ಮಿಲಿಯನ್ ಏಡಿಗಳು ಸ್ಥಳವನ್ನು ಹಂಚಿಕೊಳ್ಳುತ್ತದೆ. ಪ್ರತಿ ವರ್ಷ ನವೆಂಬರ್ ಸಮಯದಲ್ಲಿ ಸಂಜೆ ಬೀಸಿದ ಗಾಳಿಗೆ ಕಾಡಿನ ಮರಗಳಿಂದ ಉದುರಿದವೇನೋ ಎಂಬಂತೆ ಇದ್ದಕ್ಕಿದ್ದಂತೆ ಲಕ್ಷಗಟ್ಟಲೆ ಕೆಂಪು ಏಡಿಗಳು ಕಾಡಿನಿಂದ ರೋಡಿಗಿಳಿದು, ಕೆಂಪುಹಾಸಿನಂತೆ ಕಂಗೊಳಿಸುತ್ತಾ ಇಂಡಿಯನ್ ಓಶನ್ ಕಡೆಗೆ ಮೊಟ್ಟೆಗಳನ್ನಿಡಲು ನಡೆದು ಹೋಗುತ್ತವೆ.

ಹಲವು ವಾರಗಳ ಕಾಲ ಸಾವಿರಾರು ಸ್ಥಳೀಯರು ಏಡಿಗಳ ಸಾಮೂಹಿಕ ವಲಸೆ ನೋಡಿ ಹಬ್ಬದಂತೆ ಸಂಭ್ರಮಿಸುತ್ತಾರೆ. ಕೆಲವು ವಾರಗಳ ನಂತರ ಒಂದಿಂಚಿನ ಚಿಕ್ಕ ಚಿಕ್ಕ ಮರಿಗಳೊಂದಿಗೆ ಮತ್ತೆ ಇದೇ ಹಾದಿಯಲ್ಲಿ ಕಾಡಿಗೆ ವಾಪಸ್ಸಾಗುತ್ತವೆ. ಏಡಿಗಳ ಜೀವರಕ್ಷಣೆಗಾಗಿ ಒಂದಿಷ್ಟು ತಿಂಗಳ ಕಾಲ ಇಲ್ಲಿ ವಾಹನ ಪ್ರವೇಶವನ್ನು ನಿಷೇಧಿಸಲಾಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com