
ಬೀಜಿಂಗ್: ಅಳಿವಿನಂಚಿನಲ್ಲಿರುವ ಪ್ರಾಣಿ ಹುಲಿಯನ್ನು ಕೊಂಡು ತಿಂದು, ಅದರ ರಕ್ತದಿಂದ ವೈನ್ ಮಾಡಿ ಕುಡಿದ ಭೂಪನಿಗೆ ಚೈನಾದಲ್ಲಿ ೧೩ ವರ್ಷಗಳ ಜೈಲು ಶಿಕ್ಷೆಯಾಗಿದೆ ಎಂದು ತಿಳಿದು ಬಂದಿದೆ.
ಕ್ಸು ಎಂಬ ಅಡ್ಡ ಹೆಸರಿರುವ ಸಿರಿವಂತ ಉದ್ಯಮಿ ಗುಂಗ್ ಡಾಂಗ್ ನ ದಕ್ಷಿಣ ಭಾಗಕ್ಕೆ ಮೂರು ಬಾರಿ ಪ್ರವಾಸ ಕೈಗೊಂಡು ಅಲ್ಲಿ ಹುಲಿಗಳನ್ನು ಕೊಂಡು ತನ್ನ ಮನೆಗೆ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.
ಕ್ಸು ಮತ್ತು ಗೆಳೆಯರು ಮೂರು ಹುಲಿಗಳನ್ನು ಕೊಂಡು ತಿಂದಿದ್ದರು ಎಂದು ತಿಳಿದುಬಂದಿದ್ದು, ಇದನ್ನು ಇವರಿಗೆ ಒದಗಿಸಿಕೊಟ್ಟವರ ವಿವರ ಇನ್ನೂ ತಿಳಿದುಬಂದಿಲ್ಲ.
ಹುಲಿ ಮಾಂಸ ಒಳ್ಳೆಯ ಆರೋಗ್ಯ ನೀಡುತ್ತದೆ ಹಾಗು ಇದು ಲೈಂಗಿಕ ಪ್ರಚೋದನಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಚೈನಾದಲ್ಲಿನ ನಂಬಿಕೆ. ಇದರಿಂದ ಬೇಟೆ ನಿರಂತರವಾಗಿದ್ದು. ಚಿನಾದಲ್ಲಿದ್ದ ಹುಲಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
Advertisement