
ಬೀಜಿಂಗ್: ಇಡೀ ವಿಶ್ವದಲ್ಲಿ ಬೀಜಿಂಗ್ ನಲ್ಲಿ ಮಾತ್ರ ಬದುಕುಳಿರುವ ಈ ದೈತ್ಯ ಪಾಂಡಾ 'ತ್ರಿವಳಿ' ಗಳಿಗೆ ಈಗ ೧೦೦ ದಿನ ತುಂಬಿದೆ.
ಹುಟ್ಟಿದಾಗ ೧೦೦ ಗ್ರಾಂ ಇದ್ದ ಪ್ರತಿ ಪಾಂಡಾ ಈಗ ೫ ಕೆಜಿ ತೂಗುತ್ತಿವೆ. ೮೦ ದಿನ ಕಳೆದ ನಂತರ ಹಲ್ಲು ಹುಟ್ಟಿದ್ದು, ಈಗ ಮೂರೂ ಪಾಂಡಾಗಳಿಗೆ ಎರಡು ಸಣ್ಣ ಹಲ್ಲುಗಳಿವೆ. ಹಾಗೆಯೇ ತನ್ನಮ್ಮನೊಂದಿಗೆ ಸರದಿಯಂತೆ ಐದು ದಿನಗಳಿಗೆ ಒಂದೊಂದೇ ವಾಸಿಸುತ್ತಿವೆ.
ಮರಿಗಳಿಗೆ ದೈಹಿಕ ಪರೀಕ್ಷೆ ನಡೆಸಿದ ನಂತರ ಅವುಗಳು ಆರೋಗ್ಯವಾಗಿವೆ ಎಂದು ಚೈಮ್ ಲಾಂಗ್ ಸಫಾರಿ ಪಾರ್ಕ್ ನ ಕಾರ್ಯ ನಿರ್ದೇಶಕ ಡಾಂಗ್ ಗ್ಯುಕ್ಸಿನ್ ತಿಳಿಸಿದ್ದಾರೆ.
ಬುಧವಾರದಿಂದ ನಿಯಮಿತ ಸಮಯದಲ್ಲಿ ಪಾಂಡಾಗಳ ಪ್ರದರ್ಶನಕ್ಕೆ ಅವುಗಳ ತವರು ಊರಿನಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು.
ಇಲ್ಲಿಯವರೆಗೂ ನಾಲ್ಕು ಬಾರಿ ತ್ರಿವಳಿಗಳು ಹುಟ್ಟಿದ್ದರೂ, ಕಳೆದ ಮೂರು ಬಾರಿ ದೈಹಿಕ ತೊಂದರೆಗಳಿಂದಲೊ, ಅಥವಾ ಕಡಿಮೆ ತೂಕದಿಂದಲೋ ಒಂದಲ್ಲ ಒಂದು ಮರಿ ಸಾವನ್ನಪ್ಪುತ್ತಿತ್ತು.
Advertisement