ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಇನ್ನುಮುಂದೆ ಚಲಿಸುವ ಹುಂಡಿ

ವಿಶ್ವವಿಖ್ಯಾತ ಶ್ರೀ ಮೀನಾಕ್ಷಿ ದೇವಸ್ಥಾನಕ್ಕೆ ಈಗ ಕಡಿಮೆ ತೂಕದ ಆಧುನಿಕ ಚಲಿಸುವ ಹುಂಡಿ ಬಂದಿದೆ...
ಮಧುರೈ ಮೀನಾಕ್ಷಿ ದೇವಸ್ಥಾನ
ಮಧುರೈ ಮೀನಾಕ್ಷಿ ದೇವಸ್ಥಾನ
Updated on

ಮಧುರೈ: ವಿಶ್ವವಿಖ್ಯಾತ ಶ್ರೀ ಮೀನಾಕ್ಷಿ ದೇವಸ್ಥಾನಕ್ಕೆ ಈಗ ಕಡಿಮೆ ತೂಕದ ಆಧುನಿಕ ಚಲಿಸುವ ಹುಂಡಿ ಬಂದಿದೆ. ಅಗತ್ಯಕ್ಕೆ ತಕ್ಕಂತೆ ಈ ದೇವಾಲಯದಲ್ಲಿ ಎಲ್ಲಿಗೆ ಬೇಕಾದರೂ ಈ ಹುಂಡಿಯನ್ನು ತನ್ನ ಚಕ್ರಗಳ ಮೂಲಕ ಎಳೆದುಕೊಂಡು ಇಡಬಹುದಾಗಿದೆ.

ಟಿವಿಎಸ್ ಸಮೂಹದ ಸಂಸ್ಥೆ, ಉತ್ತಮ ಲೋಹದಿಂದ ತಯಾರಿಸಿದ ಈ ಹುಂಡಿಯನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದೆ ಎಂದು ವೇವಾಲಯದ ಅಧಿಕಾರಿ ಎನ್ ನಟರಾಜನ್ ತಿಳಿಸಿದ್ದಾರೆ.

ಸುಂದರವಾಗಿ ಕಾಣುವ ಈ ಹುಂಡಿ ಬಹಳ ಸುರಕ್ಷಿತ ಎಂದು ವಿವರಿಸಿದ ಅವರು ಎಣಿಸಲು ದುಡ್ಡನ್ನು ಹೊರ ತೆಗೆಯುವಾಗ ಕೂಡ ನೋಟುಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com