ಕ್ರಿಸ್ ಗೇಯ್ಲ್ ಬಗ್ಗೆ ನಿಮಗೆಷ್ಟು ಗೊತ್ತು?

ಐಸಿಸಿ ವಿಶ್ವಕಪ್‌ನಲ್ಲಿ ಮೊದಲ ದ್ವಿಶತಕ ಸಾಧನೆ ಮಾಡಿದ ಕ್ರಿಸ್ ಗೇಯ್ಲ್ ಈ ಮೂಲಕ ವಿಶ್ವಕಪ್ ಪಂದ್ಯಾವಳಿಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತದ...
ಕ್ರಿಸ್ ಗೇಯ್ಲ್
ಕ್ರಿಸ್ ಗೇಯ್ಲ್
Updated on

ಐಸಿಸಿ ವಿಶ್ವಕಪ್‌ನಲ್ಲಿ ಮೊದಲ ದ್ವಿಶತಕ ಸಾಧನೆ ಮಾಡಿದ ಕ್ರಿಸ್ ಗೇಯ್ಲ್ ಈ ಮೂಲಕ ವಿಶ್ವಕಪ್ ಪಂದ್ಯಾವಳಿಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಪಂದ್ಯಗಳಲ್ಲಿ ಮಿಂಚಿದ ಕ್ರಿಸ್ ಗೇಯ್ಲ್ ಎಲ್ಲರ ಫೇವರಿಟ್ ಆಗಿದ್ದು ಅವರ ಆಟದ ಶೈಲಿಯಿಂದಲೇ. ಸಂತೋಷವಾದಾಗ ಕ್ರಿಕೆಟ್ ಗ್ರೌಂಡ್‌ನಲ್ಲಿ ಗಂಗ್ನಮ್ ಸ್ಟೈಲ್‌ನಲ್ಲಿ ಸ್ಟೆಪ್ ಹಾಕಿದ ವೆಸ್ಟ್ ಇಂಡೀಸ್ ತಂಡದ ಈ ಆಟಗಾರನ ಬಗ್ಗೆ ಗೊತ್ತಿಲ್ಲದ ಕೆಲವೊಂದು ಸಂಗತಿಗಳು ಇಲ್ಲಿವೆ.

  • ಕ್ರಿಸ್ ಗೇಯ್ಲ್ ಕ್ರಿಕೆಟ್ ವೃತ್ತಿ ಜೀವನ ಆರಂಭವಾಗಿದ್ದು ಜಮೈಕಾದ ಕಿಂಗ್‌ಸ್ಟನಲ್ಲಿರುವ ಲುಕಾಸ್ ಕ್ರಿಕೆಟ್ ಕ್ಲಬ್ ನಲ್ಲಿ
  • ಜಮೈಕಾ ಪರ 19ನೇ ವಯಸ್ಸಿನಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್‌ಗೆ ಪಾದಾರ್ಪಣೆ
  • ಈತನ ಪೂರ್ತಿ ಹೆಸರು ಕ್ರಿಸ್ಟೋಪರ್ ಹೆನ್ರಿ ಗೇಯ್ಲ್. ಗೇಯ್ಲ್‌ಗಿರುವ 3 ನಿಕ್‌ನೇಮ್: ಗೇಯ್ಲ್‌ಸ್ಟ್ರೋಮ್, ಗೇಯ್ಲ್‌ಫೋರ್ಸ್, ಮಾಸ್ಟರ್ ಸ್ಟ್ರೋಮ್
  • ಚಿಕ್ಕಂದಿನಲ್ಲಿ ಈತನಿಗೆ ಎದೆಬಡಿತ ಅಸಹಜವಾಗಿತ್ತು. ಭಾರತ ಪ್ರವಾಸ ಕೈಗೊಂಡಾಗ ಇದೇ ಸಮಸ್ಯೆಯಿಂದ ಬಳಲಿದ ಗೇಯ್ಲ್ ಆಟವಾಡದೆ ಹೊರಗುಳಿದಿದ್ದರು. ನಂತರ ಶಸ್ತ್ರಚಿಕಿತ್ಸೆಯ ಮೂಲಕ ಈ ಸಮಸ್ಯೆ ಪರಿಹಾರವಾಯಿತು.
  • ಜೆರೋಮ್ ಟೈಲರ್, ಮಾರ್ಲನ್ ಸಾಮ್ಯುಯೆಲ್ಸ್, ನಿಖಿತಾ ಮಿಲ್ಲರ್ ಮೊದಲಾದವರಿದ್ದ ತಂಡದ ವಿರುದ್ಧ ಆಡಿದ ಟಿ20 ಅಭ್ಯಾಸ ಪಂದ್ಯವೊಂದರಲ್ಲಿ ಗೇಯ್ಲ್ 196ರನ್ ಗಳಿಸಿದ್ದರು. ಪ್ರಸ್ತುತ ಪಂದ್ಯದಲ್ಲಿ ಗೇಯ್ಲ್ ಔಟಾಗಿದ್ದು 15ನೇ ಓವರ್‌ನಲ್ಲಿ
  • ಬ್ರಯಾನ್ ಲಾರಾ ನಂತರ ಟೆಸ್ಟ್ ಪಂದ್ಯಗಳಲ್ಲಿ ಎರಡು ಬಾರಿ 300 ರನ್ ಗಳಿಸಿದ  ವೆಸ್ಟ್ ಇಂಡಿಯನ್ ಆಟಗಾರ
  • 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತ್ರಿಶತಕ ಬಾರಿಸಿದ ಮೊದಲ ಆಟಗಾರ.
  • ಐಪಿಲ್ ಪಂದ್ಯಾಟದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡುವಾಗ ಸಹಾರಾ ಪುಣೆ ವಾರಿಯರ್ಸ್ ಇಂಡಿಯಾ ತಂಡದ ವಿರುದ್ಧ 30 ಬಾಲ್‌ಗಳಲ್ಲಿ ಶತಕ ಸಿಡಿಸಿದ್ದರು. ಇದು ಅತೀ ವೇಗದ ಶತಕವಾಗಿತ್ತು.
  • 2013ರ ಐಪಿಲ್ 6ನೇ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ 66 ಬಾಲ್‌ಗಳಲ್ಲಿ 175 ರನ್ ದಾಖಲಿಸಿದ್ದ ಗೇಯ್ಲ್ ಈ ಮೂಲಕ ಬ್ರೆಂಡನ್ ಮೆಕಲಮ್ (158 ಅಜೇಯ) ಅವರ ದಾಖಲೆ ಮುರಿದಿದ್ದರು.
  • 2011ರಲ್ಲಿ ಐಪಿಲ್ ಹರಾಜು ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ಯಾರೊಬ್ಬರೂ ಗೇಯ್ಲ್‌ನ್ನು ಖರೀದಿಸಲಿಲ್ಲ. ಕೊನೆಗೆ ಆರ್‌ಸಿಬಿ ಮಾಲೀಕರು  ಡ್ರಿಕ್ ನಾನ್ನೇಸ್ ಅವರ ಬದಲಿಗೆ ಗೇಯ್ಲ್‌ನ್ನು ಖರೀದಿಸಿಕೊಂಡಿದ್ದರು.
  • ಮೂರು ರೀತಿಯ ಕ್ರಿಕೆಟ್‌ಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರ
  • ಐಪಿಎಲ್‌ನಲ್ಲಿ 150 ಸಿಕ್ಸರ್ ಹೊಡೆದ ಮೊದಲ ಆಟಗಾರ
  • 2012ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾಲ್‌ಗೆ ಸಿಕ್ಸರ್ ಹೊಡೆದ ಮೊದಲ ಆಟಗಾರ
  • 2007ರಲ್ಲಿ ಐಸಿಸಿ ವರ್ಲ್ಡ್ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ದಾಖಲಿಸಿದ ಮೊದಲ ಆಟಗಾರ.
  • ಏಕದಿನ ಪಂದ್ಯದಲ್ಲಿ 7000 ಕ್ಕಿಂತಲೂ ಹೆಚ್ಚು ರನ್ ಹಾಗೂ 150ಕ್ಕಿಂತಲೂ ಹೆಚ್ಚು ವಿಕೆಟ್ ಪಡೆದ ವೆಸ್ಟ್ ಇಂಡೀಸ್‌ನ ಮೊದಲ ಆಟಗಾರ.

-ಸಾರಾ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com