ಬಿಹಾರ: ಉಚಿತ ಕಾಂಡೋಮ್ ಗಳನ್ನು ಹಂಚುವ ಪಾನ್ ವ್ಯಾಪಾರಿ

ಜನಸಂಖ್ಯಾ ನಿಯಂತ್ರಣದ ಬಗ್ಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು, ಪಾನ್ ಮಾರಾಟಗಾರನೊಬ್ಬ ಬಿಹಾರದಲ್ಲಿ ಪ್ರತಿ ಪಾನ್ ಜೊತೆ ಉಚಿತ ಕಾಂಡೋಮ್ ನೀಡುತ್ತಿದ್ದಾನೆ!

"ನನ್ನ ಅಂಗಡಿಗೆ ಪಾನ್ ಗೋಸ್ಕರ ಬರುವವರಿಗೆಲ್ಲಾ ಉಚಿತವಾಗಿ ಕಾಂಡೋಮ್ ನೀಡುತ್ತಿದ್ದೇನೆ. ಉಚಿತ ಕಾಂಡೋಮ್ ನೀಡುತ್ತಿರುವುದರಿಂದ ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ, ಹಾಗೂ ಜನರಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುತ್ತದೆ" ಎನ್ನುತ್ತಾರೆ ಕಠಿಯಾರ್ ಜಿಲ್ಲೆಯ ಫಾಲ್ಕಾ ಬಾಝಾರ್ ನಲ್ಲಿ ಪಾನ್ ಅಂಗಡಿ ನಡೆಸುವ ನಂದ್ ಲಾಲ್ ಸಾಹ.

"ಜನಸಂಖ್ಯಾ ನಿಯಂತ್ರಣಕ್ಕೆ ನನ್ನ ಪುಟ್ಟ ಕಾಣಿಕೆ ಇದು" ಎನ್ನುತ್ತಾರೆ ೪೦ರ ಆಸುಪಾಸಿನಲ್ಲಿರುವ ಸಾಹ.

ಹಲವಾರು ಎನ್ ಜಿ ಒ ಗಳು, ಮತ್ತಿತರು ಉಚಿತವಾಗಿ ಕಾಂಡೋಮ್ ವಿತರಿಸಲು ನನಗೆ ಕಾಂಡೋಮ್ ಗಳನ್ನು ಪೂರೈಸುತ್ತಿದ್ದಾರೆ ಎನ್ನುವ ಸಾಹ "ಕೆಲವೊಮ್ಮೆ ಇವರು ಪೂರೈಸಲು ವಿಫಲವಾದರೆ ನಾನೇ ಕಾಂಡೋಮ್ ಗಳನ್ನು ಕೊಂಡು ಹಂಚುತ್ತೇನೆ" ಎನ್ನುತ್ತಾರೆ. ಇದರಿಂದ ನನ್ನ ವ್ಯಾಪಾರದಲ್ಲೂ ವೃದ್ಧಿಯಾಗಿದೆ ಎಂದಿದ್ದಾರೆ.

"ಹಾಗೆಯೇ ಸುಮಾರು ೩೦೦ ಮಹಿಳೆಯರಿಗೆ ಸಂತಾನಹರಣ ಚಿಕಿತ್ಸೆಗೆ ಮನವೊಲಿಸಿದ್ದೇನೆ" ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com